ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅತಿಯಾದ ವಯಾಗ್ರಾ ಸೇವನೆ: ಆಸ್ಪತ್ರೆಗೆ ದಾಖಲಾದ ನವವಿವಾಹಿತ

|
Google Oneindia Kannada News

ಲಕ್ನೋ ಜೂನ್ 9: ಅತಿಯಾದರೆ ಎಲ್ಲವೂ ವಿಷವೇ. ವಿಲಕ್ಷಣ ಮತ್ತು ಪ್ರತಿಯೊಬ್ಬರನ್ನು ಎಚ್ಚರಿಸುವ ಘಟನೆಯೊಂದು ಉತ್ತರ ಪ್ರದೇಶದ ಪ್ರಯಾಗ್ರಾಜ್ ನಲ್ಲಿ ನಡೆದಿದೆ.

ಇತ್ತೀಚಿಗೆ ವಿವಾಹವಾದ ಪುರುಷನೊಬ್ಬ ಅತಿಯಾದ ವಯಾಗ್ರಾ ಮಾತ್ರೆ ಸೇವಿಸಿ ಪೇಚಿಗೆ ಬಿದ್ದಿದ್ದಾನೆ. ಅಲ್ಲದೇ ಇದರಿಂದ ಆತ ಆಸ್ಪತ್ರೆಗೆ ದಾಖಲಾಗಿದ್ದು, ಆತನಿಗೆ ಚಿಕಿತ್ಸೆ ನಿಡಲಾಗುತ್ತಿದೆ. ಆದರೆ ಚಿಕಿತ್ಸೆಯ ನಂತರವೂ ಆತ ಜೀವನದುದ್ದಕ್ಕೂ ಶಿಶ್ನ ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ ಎಂದು ವೈದ್ಯರು ತಿಳಿಸಿದ್ದಾರೆ.

ನಡೆದೇ ಹೋಯ್ತು ಭಾರತದಲ್ಲಿ ಮೊದಲ ಸಿಂಗಲ್ ಮ್ಯಾರೇಜ್ನಡೆದೇ ಹೋಯ್ತು ಭಾರತದಲ್ಲಿ ಮೊದಲ ಸಿಂಗಲ್ ಮ್ಯಾರೇಜ್

ಉತ್ತರ ಪ್ರದೇಶದ ಪ್ರಯಾಗ್ರಾಜ್ ನಗರದ ನಿವಾಸಿಯಾಗಿರುವ 28 ವರ್ಷ ವಯಸ್ಸಿನ ಪುರುಷನೊಬ್ಬ ಕೆಲವೇ ತಿಂಗಳ ಮೊದಲು ಮದುವೆಯಾಗಿದ್ದಾನೆ. ಹೆಂಡತಿ ಜೊತೆಗಿನ ರಸಮಯ ಕ್ಷಣಗಳನ್ನು ಇನ್ನಷ್ಟು ಸುದೀರ್ಘ ಮಾಡಿಕೊಳ್ಳುಲು ಸ್ನೇಹಿತ ಸಲಹೆಯೊಂದಿಗೆ ವಯಾಗ್ರಾ ಮಾತ್ರೆ ಸೇವಿಸಲು ಪ್ರಾರಂಭಿಸಿದ್ದಾನೆ. ಆದರೆ ನಿಗದಿತ ಡೋಸ್ಗಿಂತ ಹೆಚ್ಚಿನ ಡೋಸೆಜ್ ತೆಗೆದುಕೊಳ್ಳಲು ಪ್ರಾರಂಭಿಸಿದ್ದಾನೆ.

Newly Married Man Admitted to Hospital After Viagra Overdose

ಅತಿ ಹೆಚ್ಚು ವಯಾಗ್ರ ಮಾತ್ರೆ ಸೇವಿಸಿದರ ಪರಿಣಾಮ ಅವನಿಗೆ ಸಮಸ್ಯೆಗಳು ಶುರುವಾಗಿದೆ. ಆಸ್ಪತ್ರೆಯ ವರದಿಗಳ ಪ್ರಕಾರ, ಆತ ಪ್ರತಿ ದಿನ 200 ಎಂಜಿ ವಯಾಗ್ರಾ ಮಾತ್ರೆ ಸೇವಿಸಿದ್ದಾನೆ. ಇದು ಸಾಮಾನ್ಯವಾಗಿ ತೆಗೆದುಕೊಳ್ಳುವ ಪ್ರಮಾಣಕ್ಕಿಂತ ನಾಲ್ಕು ಪಟ್ಟು ಅಧಿಕ. ವೈದ್ಯರ ಅನುಮತಿ ಇಲ್ಲದೆ ಬೇಕಾಬಿಟ್ಟಿ ವಯಾಗ್ರ ಮಾತ್ರೆಗಳನ್ನು ಸೇವಿಸಿದ್ದಾನೆ. ಇದರಿಂದಾಗಿ ನವವಿವಾಹಿತ ತೀವ್ರ ಸ್ವರೂಪದ ಆರೋಗ್ಯದ ಸಮಸ್ಯೆಗೆ ತುತ್ತಾಗಿದ್ದಾನೆ.

ಅತಿ ಹೆಚ್ಚು ವಯಾಗ್ರಾ ಮಾತ್ರೆ ಸೇವಿಸಿ ಪದೇ ಪದೆ ಲೈಂಗಿಕ ಕ್ರಿಯೆಯಲ್ಲಿ ತೊಡಗುತ್ತಿದ್ದ ಆತ, ನೋವಿನಿಂದ ಕೂಡಿದ ವೀರ್ಯ ಸ್ಖಲನ ವಾಗುತ್ತಿದೆ ಎಂದು ಹೆಂಡತಿಗೆ ತಿಳಿಸಿದ್ದಾನೆ. ಮಾತ್ರೆಗಳ ಪರಿಣಾಮ ಸುಮಾರು 20 ದಿನಗಳು ಶಿಶ್ನ ನಿಮಿರಿಗೆ ಕಾರಣವಾಗಿದೆ. ಘಟನೆಯಿಂದ ರೋಸಿಹೋಗಿ ಹೆಂಡತಿ ತವರು ಮನೆಗೆ ಪತಿಯನ್ನು ಕರೆದುಕೊಂಡು ಬಂದಿದ್ದಾಳೆ. ನಂತರ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾಳೆ.

Newly Married Man Admitted to Hospital After Viagra Overdose

ಪ್ರಯಾಗ್‌ರಾಜ್‌ನ ಎಂಎಲ್ಎನ್ ಮೆಡಿಕಲ್ ಕಾಲೇಜ್‌ನ ಯುರಾಲಜಿ ವಿಭಾಗದ ತಜ್ಞರು ನವವಿವಾಹಿತನ ತಪಾಸಣೆ ನಡೆಸಿ, ಆತನಿಗೆ ಪೀನೈಲ್ ಪ್ರೋಸ್ಥೆಸಿಸ್ ಶಸ್ತ್ರ ಚಿಕಿತ್ಸೆ ಮಾಡಿದ್ದಾರೆ.

"ಯುವಕ ಈಗ ಎದುರಿಸುತ್ತಿರುವ ಸಮಸ್ಯೆಯನ್ನು ಪ್ರಿಆಪ್ರರಿಸ್ಮ್ ಎಂದು ಕರೆಯುತ್ತಾರೆ. ಲೈಂಗಿಕ ಚಟುವಟಿಕೆ ವೇಳೆ ನಿಮಿರುವಿಕೆ ಹಾಗೂ ವೀರ್ಯ ಸ್ಖಲನದ ವೇಳೆ ಅತಿಯಾದ ನೋವು ಕಾಣಿಸಿಕೊಳ್ಳುವ ಸಮಸ್ಯೆ ಇದಾಗಿದೆ. ಈ ಸಮಸ್ಯೆಯು ಅತಿಯಾದ ವಯಾಗ್ರಾ ಔಷಧ ಸೇವನೆಯಿಂದಲೇ ಸೃಷ್ಟಿಯಾಗಿದೆ,'' ಎಂದು ಎಂಎಲ್ಎನ್ ಮೆಡಿಕಲ್ ಕಾಲೇಜ್‌ನ ವೈದ್ಯ ಡಾ. ದಿಲೀಪ್ ಚೌರಾಸಿಯಾ ತಿಳಿಸಿದ್ದಾರೆ.

Recommended Video

Ramya Instagram ವಿಚಾರವಾಗಿ ಸ್ಟೇಷನ್ ಮೆಟ್ಟಿಲೇರಿದರು | OneIndia Kannada

"ಸದ್ಯ ರೋಗಿಗೆ ಶಸ್ತ್ರ ಚಿಕಿತ್ಸೆ ಯಶಸ್ವಿಯಾಗಿದೆ. ಆದರೆ ವಯಾಗ್ರಾ ಓವರ್ ಡೋಸ್ ಪರಿಣಾಮ ಆತ ಜೀವನದುದ್ದಕ್ಕೂ ಶಿಶ್ನ ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ. ಆದರೆ ಮಕ್ಕಳನ್ನು ಹೊಂದಲು ಯಾವುದೇ ಸಮಸ್ಯೆ ಇಲ್ಲ. ಆತ ಬಿಗಿಯಾದ ಉಡುಪುಗಳನ್ನು ಧರಿಸಬೇಕಾಗುತ್ತದೆ. ಲೈಂಗಿಕ ಆರೋಗ್ಯದಲ್ಲಿ ಆತ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ,'' ಎಂದು ಡಾ. ದಿಲೀಪ್ ಚೌರಾಸಿಯಾ ತಿಳಿಸಿದ್ದಾರೆ.

English summary
Newly married man admitted to hospital after viagra overdose, penile disability to last for life.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X