ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲಖೀಂಪುರ್ ಖೇರಿ ಹಿಂಸಾಚಾರ ಖಂಡಿಸಿ ಅ.18ರಂದು ರಾಷ್ಟ್ರವ್ಯಾಪಿ ರೈಲುತಡೆ

|
Google Oneindia Kannada News

ಲಕ್ನೋ, ಅಕ್ಟೋಬರ್ 9: ಉತ್ತರ ಪ್ರದೇಶದ ಲಖಿಂಪುರ್ ಖೇರಿಯಲ್ಲಿ ರೈತರ ಮೇಲೆ ಕಾರು ಹರಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರದ ರಾಜ್ಯ ಸಚಿವ ಅಜಯ್ ಮಿಶ್ರಾ ರಾಜೀನಾಮೆ ಹಾಗೂ ಅವರ ಪುತ್ರ ಆಶಿಶ್ ಮಿಶ್ರಾ ಬಂಧನಕ್ಕೆ ಆಗ್ರಹಿಸಿ ಅಕ್ಟೋಬರ್ 18ರಂದು ರಾಷ್ಟ್ರವ್ಯಾಪಿ ರೈಲು ತಡೆ ನಡೆಸುವುದಾಗಿ ಭಾರತೀಯ ಕಿಸಾನ್ ಯೂನಿಯನ್ ಮುಖ್ಯಸ್ಥ ರಾಕೇಶ್ ಟಿಕಾಯತ್ ಎಚ್ಚರಿಕೆ ನೀಡಿದ್ದಾರೆ.
ರೈತರ ಮೇಲೆ ಕಾರು ಹರಿಸಿದ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ದಸರಾ ಹಬ್ಬದ ದಿನ ಪ್ರಧಾನಮಂತ್ರಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಸ್ಥಳೀಯ ನಾಯಕರ ಪ್ರತಿಕೃತಿಯನ್ನು ಸುಟ್ಟು ಹಾಕಲಾಗುವುದು ಎಂದು ಸಂಯುಕ್ತ ಕಿಸಾನ್ ಮೋರ್ಚಾ ಎಚ್ಚರಿಸಿದೆ.

ಸಚಿವ ಅಜಯ್ ಮಿಶ್ರಾ ರಾಜೀನಾಮೆಗೆ ರಾಕೇಶ್ ಟಿಕಾಯತ್ ಆಗ್ರಹಸಚಿವ ಅಜಯ್ ಮಿಶ್ರಾ ರಾಜೀನಾಮೆಗೆ ರಾಕೇಶ್ ಟಿಕಾಯತ್ ಆಗ್ರಹ

ಉತ್ತರ ಪ್ರದೇಶದ ಲಖಿಂಪುರ್ ಖೇರಿಯಲ್ಲಿ ನಡೆದ ಹಿಂಸಾಚಾರದಲ್ಲಿ ನಾಲ್ವರು ರೈತರು ಸೇರಿದಂತೆ ಎಂಟು ಮಂದಿ ಪ್ರಾಣ ಬಿಟ್ಟಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ಉತ್ತರ ಪ್ರದೇಶ ಪೊಲೀಸರು ನಡೆಸಿರುವ ಮತ್ತು ನಡೆಸುತ್ತಿರುವ ವಿಚಾರಣೆ ಬಗ್ಗೆ ರೈತ ಸಂಘಟನೆಗಳು ಅನುಮಾನ ವ್ಯಕ್ತಪಡಿಸಿವೆ.

Nationwide Rail blockade on October 18 against UPs Lakhimpur Kheri Incident

ಕೇಂದ್ರ ಸರ್ಕಾರಕ್ಕೆ ಚುರುಕು ಮುಟ್ಟಿಸುವ ಉದ್ದೇಶದಿಂದ ಅಕ್ಟೋಬರ್ 18ರಂದು ಬೆಳಗ್ಗೆ 10 ರಿಂದ ಸಂಜೆ 4 ಗಂಟೆವರೆಗೂ ರಾಷ್ಟ್ರವ್ಯಾಪಿ ರೈಲುತಡೆ ನಡೆಸಲಾಗುವುದು. ಅಕ್ಟೋಬರ್ 26ರಂದು ಲಕ್ನೋದಲ್ಲಿ ರೈತರ ಮಹಾಪಂಚಾಯತ್ ನಡೆಸಲಾಗುವುದು ಎಂದು ರೈತ ಸಂಘಟನೆಗಳ ಮುಖಂಡರು ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ.

ಅಜಯ್ ಮಿಶ್ರಾ ವಜಾಗೊಳಿಸಲು ರೈತ ಮುಖಂಡರ ಆಗ್ರಹ

ಅಜಯ್ ಮಿಶ್ರಾ ವಜಾಗೊಳಿಸಲು ರೈತ ಮುಖಂಡರ ಆಗ್ರಹ

ಕೇಂದ್ರ ಸಂಪುಟದಿಂದ ಅಜಯ್ ಮಿಶ್ರಾರನ್ನು ತಕ್ಷಣವೇ ವಜಾಗೊಳಿಸಬೇಕು, ಕೊಲೆ ಪಿತೂರಿ ಹಾಗೂ ಅಸಮಾನತೆ ಅಡಿಯಲ್ಲಿ ಅವರನ್ನು ಬಂಧಿಸಬೇಕು ಎಂದು ಸಂಯುಕ್ತ ಕಿಸಾನ್ ಮೋರ್ಚಾ ಮುಖಂಡ ಬಲ್ಬೀರ್ ಸಿಂಗ್ ರಾಜೇವಾ, ಯೋಗೇಂದ್ರ ಯಾದವ್ ಮತ್ತು ಭಾರತೀಯ ಕಿಸಾನ್ ಯೂನಿಯನ್ ಮುಖ್ಯಸ್ಥ ರಾಕೇಶ್ ಟಿಕಾಯತ್ ಆಗ್ರಹಿಸಿದ್ದಾರೆ. ಅಲ್ಲದೇ ಆಶಿಶ್ ಮಿಶ್ರಾ ಹಾಗೂ ಆತನ ಸಹಚರರಾದ ಸುಮಿತ್ ಜೈಸ್ವಾಲ್ ಮತ್ತು ಅಂಕಿತ್ ದಾಸ್ ಅನ್ನು ತಕ್ಷಣವೇ ಕೊಲೆ ಆರೋಪದಲ್ಲಿ ಬಂಧಿಸಬೇಕು ಎಂದು ರೈತ ಮುಖಂಡರು ಆಗ್ರಹಿಸಿದ್ದಾರೆ.

ಅಕ್ಟೋಬರ್ 12ರಂದು ಮೃತ ರೈತರ ಸ್ಮರಣೆ

ಅಕ್ಟೋಬರ್ 12ರಂದು ಮೃತ ರೈತರ ಸ್ಮರಣೆ

ಉತ್ತರ ಪ್ರದೇಶದ ಲಖೀಂಪುರ್ ಖೇರ್ ಪ್ರದೇಶದಲ್ಲಿ ನಡೆದ ಹಿಂಸಾಚಾರದಲ್ಲಿ ಪ್ರಾಣ ಬಿಟ್ಟ ನಾಲ್ವರು ರೈತರು ಹಾಗೂ ಒಬ್ಬ ಪತ್ರಕರ್ತ ಸೇರಿದಂತೆ ಎಂಟು ಜನರ ಸ್ಮರಣಾರ್ಥ ಅಕ್ಟೋಬರ್ 18ರಂದು ಆಂಥಿಮ್ ಅರ್ದಾಸ್ ನಡೆಸುವುದಕ್ಕೆ ರೈತ ಮುಖಂಡರಾದ ಬಲ್ಬೀರ್ ಸಿಂಗ್, ಯೋಗೇಂದ್ರ ಯಾದವ್ ಹಾಗೂ ರಾಕೇಶ್ ಟಿಕಾಯತ್ ಕರೆ ನೀಡಿದ್ದಾರೆ. ಅಕ್ಟೋಬರ್ 12ರಂದು ಲಖೀಂಪುರ್ ಖೇರಿ ಪ್ರದೇಶಕ್ಕೆ ಆಗಮಿಸುವಂತೆ ತಮ್ಮ ಬೆಂಬಲಿಗರಿಗೆ ಆಹ್ವಾನ ನೀಡಿದ್ದಾರೆ. ಒಂದು ವೇಳೆ ಅದು ಸಾಧ್ಯವಾಗದಿದ್ದರೆ ನೀವಿರುವ ಸ್ಥಳಗಳಲ್ಲೇ ಮಂದಿರ, ಮಸೀದಿ ಹಾಗೂ ಚರ್ಚ್ ಗಳಲ್ಲಿ ಮೃತರಿಗಾಗಿ ಪ್ರಾರ್ಥಿಸೋಣ. ಅದೂ ಸಾಧ್ಯವಾಗದಿದ್ದರೆ ಮೃತರ ಸ್ಮರಣೆಯಲ್ಲಿ ಕನಿಷ್ಠ 5 ಮೇಣದಬತ್ತಿಗಳನ್ನು ಹಚ್ಚೋಣ ಎಂದು ಯೋಗೇಂದ್ರ ಯಾದವ್ ಕರೆ ನೀಡಿದ್ದಾರೆ.

"ಅಸ್ಥಿ ಕಳಶ್" ನಡೆಸುವುದಕ್ಕೂ ಸಿದ್ಧತೆ

ಮುಂಬರುವ ಅಕ್ಟೋಬರ್ 11ರೊಳಗೆ ಸರ್ಕಾರವು ತಮ್ಮ ಬೇಡಿಕೆಗೆ ಒಪ್ಪದಿದ್ದರೆ ಸೋಮವಾರ ಸಂಯುಕ್ತ ಕಿಸಾನ್ ಮೋರ್ಚಾದಿಂದ ರಾಷ್ಟ್ರವ್ಯಾಪಿ ಅಸ್ಥಿ ಕಳಶ್ ಯಾತ್ರೆ ನಡೆಸಲಾಗುವುದು. ಆಂಥಿಮ್ ಆರ್ದಾಸ್ ನಂತರದಲ್ಲಿ ಲಖೀಂಪುರ್ ಖೇರಿಯಿಂದ "ಶಾಹೀದ್ ಕಿಸಾನ್ ಯಾತ್ರೆ" ನಡೆಸಲಾಗುವುದು. ಮೃತ ರೈತರ ಅಸ್ಥಿಯನ್ನು ತೆಗೆದುಕೊಂಡು ಹೋಗಲಾಗುತ್ತದೆ. ಈ ಅಸ್ಥಿ ಕಳಶ್ ಯಾತ್ರೆಯು ಉತ್ತರ ಪ್ರದೇಶದ ಪ್ರತಿಯೊಂದು ಜಿಲ್ಲೆ ಹಾಗೂ ದೇಶದ ಪ್ರತಿಯೊಂದು ರಾಜ್ಯಗಳಲ್ಲೂ ನಡೆಯುತ್ತದೆ. ಈ ಯಾತ್ರೆಯು ಆಯಾ ಜಿಲ್ಲೆಯ ಅಥವಾ ರಾಜ್ಯದ ಐತಿಹಾಸಿಕ ಸ್ಥಳದಲ್ಲಿ ಕೊನೆಯಾಗಲಿದೆ ಎಂದು ಹೇಳಿದ್ದಾರೆ.

ದಸರಾ ದಿನ ಪ್ರಧಾನಿ, ಕೇಂದ್ರ ಗೃಹ ಸಚಿವರ ಪ್ರತಿಮೆಗೆ ಬೆಂಕಿ

ದಸರಾ ದಿನ ಪ್ರಧಾನಿ, ಕೇಂದ್ರ ಗೃಹ ಸಚಿವರ ಪ್ರತಿಮೆಗೆ ಬೆಂಕಿ

"ಭಾರತದಲ್ಲಿ ದಸರಾ ಹಬ್ಬದ ದಿನ ಪ್ರಧಾನಮಂತ್ರಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಹರಿಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಹಾಗೂ ವಿವಾದಿತ ಕೃಷಿ ಕಾಯ್ದೆಗಳಿಗೆ ಬೆಂಬಲವಾಗಿ ರೈತರಿಗೆ ವಿರುದ್ಧವಾಗಿ ನಡೆದುಕೊಳ್ಳುತ್ತಿರುವ ಇತರೆ ಸ್ಥಳೀಯ ನಾಯಕರ ಪ್ರತಿಕೃತಿಯನ್ನು ಸುಟ್ಟು ಹಾಕಲಾಗುವುದು," ಎಂದು ಯೋಗೇಂದ್ರ ಯಾದವ್ ಎಚ್ಚರಿಸಿದ್ದಾರೆ.

English summary
Nationwide Rail blockade on October 18 against UP's Lakhimpur Kheri Incident; BKU Chief Rakesh Tikait Alert.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X