ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಾರಣಾಸಿಯಲ್ಲಿ ನಿಯೋಜಿತ ಪ್ರಧಾನಿ LIVE:ಕಾರ್ಯ-ಕಾರ್ಯಕರ್ತರು ಸೇರಿದರೆ ಅದ್ಭುತ

|
Google Oneindia Kannada News

ಲಕ್ನೋ, ಮೇ 27: ಲೋಕಸಭೆ ಚುನಾವಣೆ ಅಭೂತಪೂರ್ವ ಗೆಲುವಿನ ನಂತರ ವಾರಣಾಸಿ ಕ್ಷೇತ್ರದ ಮತದಾರರಿಗೆ ವಂದನೆ ಸಲ್ಲಿಸಲು ನಿಯೋಜಿತ ಪ್ರಧಾನಿ ನರೇಂದ್ರ ಮೋದಿ ಕಾಶಿಗೆ ತೆರಳಿದ್ದಾರೆ.

ಬೆಳಗ್ಗೆ ವಾರಣಾಸಿಗೆ ಬಂದಿಳಿದ ಮೋದಿ ಸುಮಾರು 6 ಕಿ.ಮೀ ರೋಡ್‌ಶೋ ನಲ್ಲಿ ಕಾಶಿ ವಿಶ್ವನಾಥ ದೇವಸ್ಥಾನಕ್ಕೆ ತೆರಳಿದ್ದಾರೆ. ಅಲ್ಲಿ ವಿಶೇಷ ಪೂಜೆ ನಡೆಸಿ ವಾರಣಾಸಿಯ ಮತದಾರರಿಗೆ ಅಭಿನಂದನೆ ಸಲ್ಲಿಸಿ ಮೋದಿ ದೆಹಲಿಗೆ ವಾಪಸಾಗಲಿದ್ದಾರೆ.

Narendra Modi visits Varanasi LIVE

ಪೂಜೆ ಬಳಿಕ ಬಿಜೆಪಿ ಕಾರ್ಯಕರ್ತರನ್ನುದ್ದೇಶಿಸಿ ಮೋದಿ ಭಾಷಣ ಮಾಡಲಿದ್ದಾರೆ, ಈ ವೇಳೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಕೂಡ ಭಾಗಿಯಾಗಲಿದ್ದಾರೆ. ಭಾನುವಾರ ಗುಜರಾತ್‌ಗೆ ತೆರಳಿದ್ದ ನಿಯೋಜಿತ ಪ್ರಧಾನಿ ಮೋದಿ, ಗುಜರಾತ್ ಜನತೆಗೆ ಅಭಿನಂದನೆ ಸಲ್ಲಿಸಿ ಬಂದಿದ್ದರು. ಅದಾದ ಬಳಿಕ ತಾಯಿಯನ್ನೂ ಭೇಟಿಯಲ್ಲಿ ಆಶೀರ್ವಾದ ಪಡೆದುಕೊಂಡು ಬಂದಿದ್ದರು.ಈಗ ದೇವರು ಹಾಗೂ ಕ್ಷೇತ್ರ ಮತದಾರರ ಆಶೀರ್ವಾದ ಪಡೆಯಲಿದ್ದಾರೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ 303 ಮತಗಳನ್ನು ಗೆದ್ದಿದ್ದರು. ವಾರಣಾಸಿಯಲ್ಲಿ 4.79 ಸಾವಿರ ಮತಗಳಿಂದ ಮೋದಿ ಜಯಗಳಿಸಿದ್ದರು.

Newest FirstOldest First
1:20 PM, 27 May

ವರ್ತಮಾನದ ಜೊತೆಗೆದೇಶದ ಸಾಂಸ್ಕೃತಿಕ ಹಿರಿಮೆಯನ್ನು ಬೆಳೆಸುಉದು ನನ್ನ ಗುರಿ, ದೇಶದ ಸಾಂಸ್ಕೃತಿಕ ಹೆಮ್ಮೆಯನ್ನು ಹೇಲಿಕೊಳ್ಳುವುದು ಕೆಲವರಿಗೆ ನಾಚಿಕೆಯಾಗಿರಬಹುದು ಆದರೆ ಅದು ನನಗೆ ಹೆಮ್ಮೆಯ ವಿಚಾರ- ಮೋದಿ ನನಗೆ ಜಾತಿ, ಧರ್ಮಕ್ಕಿಂತ ಮೊದಲು ಒಬ್ಬ ಬಡವ ಅಭಿವೃದ್ಧಿ ಹೊಂದಬೇಕೆನ್ನುವುದು ನನ್ನ ಪ್ರಾಥಮಿಕ ಆಧ್ಯತೆ, ನಾನ ಮತ ಬ್ಯಾಂಕ್ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ ಇದಕ್ಕಾಗಿಯೇ ಸಾಮಾನ್ಯ ಬಡವರಿಗೆ ಮೀಸಲು ವ್ಯವಸ್ಥೆ ಜಾರಿಗೆ ತಂದಿದ್ದೇನೆ- ಮೋದಿ
1:20 PM, 27 May

ಈ ದೇಶವು ಸಾವಿರಾರು ಕೃಷಿ ಪರಂಪರೆಗಳ ಇತಿಹಾಸ,ನೂರಾರು ವರ್ಷಗಳ ವಿಜ್ಞಾನ, ಸಂಶೋಧನೆಯ ಪರಂಪರೆಯನ್ನು ಹೊಂದಿದೆ, ಈ ದೇಶಕ್ಕೆ ತನ್ನದೇ ಆದ ಸಾಂಸ್ಕೃತಿಕ ಶ್ರೀಮಂತಿಕೆ ಇದೆ- ಮೋದಿ
1:18 PM, 27 May

ಭಾರತದಲ್ಲಿ ಪ್ರತಿಯೊಂದನ್ನೂ ಮತ ಬ್ಯಾಂಕ್‌ನ ದೃಷ್ಟಿಯಿಂದಲೇ ನೋಡುತ್ತಾರೆ, ಸರ್ಕಾರ ಯಾವುದೇ ಕೆಲಸ ಮಾಡಿದ್ದರೂ ಮತಬ್ಯಾಂಕಿಗೇ ಹೋಲಿಸುತ್ತಾರೆ. ಇಲ್ಲವೇ ಮತಬ್ಯಾಂಕ್ ಮೇಲೆ ಕಣ್ಣಿಟ್ಟುಕೊಂಡೇ ಕೆಲಸ ಮಾಡುತ್ತಿವೆ. ಆದರೆ ನಾವಿಂದು ಮತಬ್ಯಾಂಕ್‌ನ್ನು ಬದಿಗಿಟ್ಟು ಆಡಳಿತ ನಡೆಸಬೇಕಿದೆ. ದೇಶದ ಅಭಿವೃದ್ಧಿಯೇ ನಮ್ಮ ಮಂತ್ರವಾಗಿರಬೇಕು.
1:18 PM, 27 May

ನನಗೆ ಜಾತಿ, ಧರ್ಮಕ್ಕಿಂತ ಮೊದಲು ಒಬ್ಬ ಬಡವ ಅಭಿವೃದ್ಧಿ ಹೊಂದಬೇಕೆನ್ನುವುದು ನನ್ನ ಪ್ರಾಥಮಿಕ ಆಧ್ಯತೆ, ನಾನ ಮತ ಬ್ಯಾಂಕ್ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ ಇದಕ್ಕಾಗಿಯೇ ಸಾಮಾನ್ಯ ಬಡವರಿಗೆ ಮೀಸಲು ವ್ಯವಸ್ಥೆ ಜಾರಿಗೆ ತಂದಿದ್ದೇನೆ- ಮೋದಿ
1:15 PM, 27 May

ತ್ರಿಪುರದಲ್ಲಿ ಮೂರು ದಶಕಗಳ ಕಾಲ ಕಮ್ಯುನಿಷ್ಟರ ಸರ್ಕಾರ ನಡೆದಿದೆ ಆ ಮೂರು ವರ್ಷಗಳ ಕಾಲ ಯಾರಾದರೂ ಪ್ರತಿಪಕ್ಷಗಳ ಧ್ವನಿ ಕೇಳಿದ್ದರೆ, ಆದರೆ ಪ್ರತಿಪಕ್ಷಗಳಿಗೆ ಧ್ವನಿ ಎತ್ತಲು ಬಿಡುತ್ತಿದ್ದರೆ? ಆದರೆ ಎರಡು ವರ್ಷಗಳಲ್ಲಿ ಬಿಜೆಪಿ ಸರ್ಕಾರ ಹೇಗೆ ನಡೆಯುತ್ತಿದೆ. ಬಿಜೆಪಿ ಪ್ರತಿಪಕ್ಷದವರನ್ನು ಹೇಗೆ ಗೌರವಿಸುತ್ತಿದೆ. ಮಾಧ್ಯಮಗಳು ಹಾಗೂ ರಾಜಕೀಯ ಪಡಿತರು ಇದನ್ನು ವಿಶ್ಲೇಷಿಸಲಿ- ಪ್ರಧಾನಿ ಮೋದಿ
1:13 PM, 27 May

ಭಾರತದಲ್ಲಿ ಬಿಜೆಪಿಯನ್ನು ವಿಭಜಕ ಪಕ್ಷ ಎಂದು ಕೆಲವರು ಟೀಕಿಸುತ್ತಾರೆ ಆದರೆ ರಾಜಕೀಯ ಪಂಡಿತರು ಇದನ್ನು ನಿಜವಾಗಿಯೂ ವಿಮರ್ಶಿಸುವ ಸಮಯ ಬಂದಿದೆ-ಮೋದಿ
1:07 PM, 27 May

ಬಿಜೆಪಿಗೆ ಹಾಗೂ ಕಾರ್ಯಕರ್ತರಿಗೆ ನೀತಿ ಹಾಗೂ ರೀತಿ ದೊಡ್ಡ ಶಕ್ತಿಗಳಿವೆ.
Advertisement
1:06 PM, 27 May

ಸರ್ಕಾರವು ನೀತಿಯನ್ನು ರಚಿಸುತ್ತದೆ ಅದರ ಮೂಲಕವೇ ನಡೆಯುತ್ತದೆ.ಸಂಘಟನೆ ರಣನೀತಿ ಮೂಲಕ ನಡೆಯುತ್ತದೆ. ಒಂದು ಕಡೆ ಸರ್ಕಾರದ ಕಾರ್ಯವಿರುತ್ತದೆ ಕಾರ್ಯ ಹಾಗೂ ರ್ಕಾಕರ್ತರು ಸೇರಿದರೆ ಅದ್ಭುತ ಸೃಷ್ಟಿಯಾಗುತ್ತದೆ- ಮೋದಿ
1:03 PM, 27 May

70 ವರ್ಷಗಳಿಂದ ಆಡಳಿತ ನಡೆಸುತ್ತಿರುವವರು ಜನರ ಮನಸ್ಸಿನಲ್ಲಿ ತಪ್ಪು ಹಾಗೂ ಕೆಟ್ಟ ಅಭಿಪ್ರಾಯಗಳನ್ನು ಹರಡಿಸುತ್ತಿದ್ದಾರೆ. ಇದಕ್ಕೆ ನಾವು ಅಂತ್ಯ ಹಾಡಬೇಕಿದೆ, ನವ ಭಾರತ ನಿರ್ಮಾಣದ ಸಂಕಲ್ಪದೊಂದಿಗೆ ಹೆಜ್ಜೆ ಇಡುವ ನಿಟ್ಟಿನಲ್ಲಿ ಬಿಜೆಪಿಯ ಪ್ರತಿಯೊಬ್ಬ ಕಾರ್ಯಕರ್ತರೂ ಕೆಲಸ ಮಾಡಬೇಕಿದೆ.-ಮೋದಿ
12:44 PM, 27 May

ಯಾವುದೇ ಒಬ್ಬ ಅಭ್ಯರ್ಥಿ ನಾಮಪತ್ರ ಸಲ್ಲಿಸಿ ಇಷ್ಟು ನಿಶ್ಚಿಂತರಾಗಿರಲು ಸಾಧ್ಯವಿಲ್ಲ, ನಾಮಪತ್ರ ಸಲ್ಲಿಸುವಾಗಲೂ ಗೆಲುವು ನಿಶ್ಚಿತವಾಗಿತ್ತು, ಮತ ಎಣಿಕೆ ಸಂದರ್ಭದಲ್ಲೂ ಗೆಲುವು ನಿಶ್ಚಿತವಾಗಿತ್ತು. ಇದಕ್ಕಾಗಿ ಮತದಾನ ದಿನ ನಾನು ಕೇದಾರನಾಥಕ್ಕೆ ಹೋಗಿ ಧ್ಯಾನದಲ್ಲಿ ಕುಳಿತಿದ್ದೆ- ಮೋದಿ
12:43 PM, 27 May

ಏಪ್ರಿಲ್ 25 ಕ್ಕೆ ನಾನು ವಾರಣಾಸಿಗೆ ಬಂದಿದ್ದಾಗ ಒಂದು ತಿಂಗಳುಗಳ ಕಾಲ ವಾರಣಾಸಿ ಕಡೆಗೆ ತಲೆ ಹಾಕಬಾರದು ಎಂದು ವಾರಣಾಸಿ ಕಾರ್ಯಕರ್ತರು ಆದೇಶಿಸಿದ್ದರು. ಕಾರ್ಯಕರ್ತರ ಆದೇಶವನ್ನು ನಾನು ಪಾಲಿಸಿದ್ದೇನೆ. ಇಂದು ಗೆಲುವಿನ ಬಳಿಕ ಬಂದಿದ್ದೇನೆ... ಮೋದಿ
12:41 PM, 27 May

ಅಹವಾಲುಗಳನ್ನು ಇರಿಸಿಕೊಂಡು ಮೋದಿಯನ್ನು ಭೇಟಿಯಾಗಲು ಬಂದಿದ್ದ, ಕಾರ್ಯಕರ್ತರಿಂದ ಮನವಿಪತ್ರವನ್ನು ಪಡೆಯಲು ಅಧಿಕಾರಿಗಳಿಗೆ ಸೂಚಿಸಿದ ಪ್ರಧಾನಿ ಮೋದಿ
Advertisement
12:39 PM, 27 May

ನಾನು ಪಕ್ಷದ ಕಾರ್ಯಕರ್ತನಾಗಿ ಬಿಜೆಪಿ ಏನು ಹೇಳುತ್ತದೋ ಅದನ್ನು ಈಗಲೋ ಮಾಡುತ್ತಿದ್ದೇನೆ, ಹಿಂದೆಯೂ ಮಾಡಿದ್ದೇನೆ- ಪ್ರಧಾನಿ ಮೋದಿ
12:36 PM, 27 May

ಮೋದಿ ಭಾಷಣ ಆರಂಭ
12:28 PM, 27 May

ವಾರಣಾಸಿಗೆ ನಾಮಪತ್ರ ಸಲ್ಲಿಸಲು ಬಂದಿದ್ದ ಮೋದಿಗೆ ಇಲ್ಲಿಯ ಜನ ಭರ್ಜರಿ ರೋಡ್ ಶೋ ಮೂಲಕ ಗೆಲುವಿನ ಮುನ್ಸೂಚನೆ ನೀಡಿದ್ದರು, ದೇಶದ ತುಂಬೆಲ್ಲಾ ಬಿಜೆಪಿಯನ್ನು ಗೆಲ್ಲಿಸಿ ಬನ್ನಿ, ಇಲ್ಲಿ ನಿಮ್ಮ ಗೆಲುವನ್ನು ನಾವು ನೋಡಿಕೊಳ್ಳುತ್ತೇವೆ ಎಂದು ಕಾರ್ಯಕರ್ತರು ಗೆಲುವಿನ ಹೊಣೆ ಹೊತ್ತಿದ್ದರು. ಅದರಂತೆ ವಾರಣಾಸಿಯಲ್ಲಿ ಮೋದಿಯ ಗೆಲುವನ್ನು ಇಲ್ಲಿಯ ಪಕ್ಷದ ಕಾರ್ಯಕರ್ತರು ಮಾಡಿ ಸಾಧಿಸಿ ತೋರಿಸಿದ್ದಾರೆ-ಅಮಿತ್ ಷಾ
12:26 PM, 27 May

ಮೋದಿಗೆ ಶಾಸನದ ಅನುಭವ ಇಲ್ಲ ಎಂದು ಕೆಲವರು ಹೇಳುತ್ತಿದ್ದರು, ಒಂದು, ಎರಡು, ಮೂರು, ನಾಲ್ಕು ಬಾರಿ ಆಯ್ಕೆಯಾಗಿ ದೇಶದ ಅತ್ಯಂತ ಸಫಲ ಮುಖ್ಯಮಂತ್ರಿ ನರೇಂದ್ರ ಮೋದಿ ಎನ್ನುವ ಖ್ಯಾತಿಗೆ ಪಾತ್ರರಾಗಿದ್ದಾರೆ.ಅಮಿತ್ ಷಾ
12:12 PM, 27 May

ಘಟಬಂಧನ ಹಾಗೂ ಮಹಾಘಟಬಂಧನದ ಮೂಲಕ ಮೋದಿಯನ್ನು ಕಟ್ಟು ಹಾಕಲು ಯಾರೆಲ್ಲ ಪ್ರಯತ್ನಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಈ ಗೆಲುವು ವಿಶ್ವ ರಾಜಕೀಯದಲ್ಲಿ ಹೊಸ ಸಂಚಲನ ಮೂಡಿಸಿದೆ. ಮೋದಿ ಇದ್ದರೆ ಎಲ್ಲವೂ ಸಾಧ್ಯವಿದೆ: ಯೋಗಿ ಆದಿತ್ಯನಾಥ್
12:03 PM, 27 May

ವಾರಣಾಸಿ ಕಾರ್ಯಕರ್ತರ ಪರವಾಗಿ ನಿಯೋಜಿತ ಪ್ರಧಾನಿ ಮೋದಿಯನ್ನು ಅಭಿನಂದಿಸಿದ ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್.
11:58 AM, 27 May

ವಾರಣಾಸಿಯ ದೀನದಯಾಳು ಹಸ್ತಕಲಾ ಸಂಕುಲದಲ್ಲಿ ಬಿಜೆಪಿ ಕಾರ್ಯಕರ್ತರನ್ನುದ್ದೇಶಿಸಿ ಭಾಷಣ ಮಾಡಲಿರುವ ಪ್ರಧಾನಿ ಮೋದಿ
11:23 AM, 27 May

ವಾರಣಾಸಿ ಬೀದಿಯಲ್ಲಿ ಶಂಖನಾದ ಮೊಳಗಿಸಿ ಕಾರ್ಯಕರ್ತರಿಂದ ಸಂಭ್ರಮಾಚರಣೆ
11:17 AM, 27 May

ಬಿಜೆಪಿ ಕಾರ್ಯಕರ್ತರ ಸಮಾವೇಶಕ್ಕೆ ತೆರಳಲಿರುವ ಮೋದಿ
11:02 AM, 27 May

ಕಾಶಿ ವಿಶ್ವನಾಥ ದೇವಸ್ಥಾನದಲ್ಲಿ ವಿಶೇಷ ರುದ್ರಾಭಿಷೇಕ ಮಾಡುತ್ತಿರುವ ನಿಯೋಜಿತ ಪ್ರಧಾನಿ ನರೇಂದ್ರ ಮೋದಿ. ರುದ್ರಾಭಿಷೇಕಕ್ಕೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಷಾ ಹಾಗೂ ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್.
10:56 AM, 27 May

ಮೋದಿಯಿಂದ ಕಾಶಿವಿಶ್ವನಾಥ ದೇಗುಲದಲ್ಲಿ ಪ್ರಾರ್ಥನೆ
10:53 AM, 27 May

ಕಾಶಿವಿಶ್ವನಾಥನ ಸನ್ನಿಧಿಯಲ್ಲಿ ವಿಶೇಷ ಪೂಜೆ ಆರಂಭ
10:52 AM, 27 May

ಕಾಶಿ ವಿಶ್ವನಾಥನ ದೇಗುಲದ ಪ್ರವೇಶದ್ವಾರದಲ್ಲೂ ಬೃಹತ್​ ಟಿವಿ ಪರದೆಯನ್ನು ಅಳವಡಿಸಲಾಗಿದ್ದು, ನಿಯೋಜಿತ ಪ್ರಧಾನಿ ಅವರ ಮೆರವಣಿಗೆಯ ಪ್ರತಿಕ್ಷಣದ ದೃಶ್ಯಗಳನ್ನು ನೇರವಾಗಿ ಪ್ರಸಾರ ಮಾಡಲಾಗುತ್ತದೆ.
10:51 AM, 27 May

ವಾರಣಾಸಿಯಲ್ಲಿ ಎಲ್ಲ ರಸ್ತೆಗಳು ತಳಿರು ತೋರಣ, ಬಿಜೆಪಿ ಪಕ್ಷದ ಕೇಸರಿ ಬಣ್ಣದ ಬಲೂನ್​ಗಳು ಸೇರಿ ನಾನಾ ಬಗೆಯ ಶೃಂಗಾರ ವಸ್ತುಗಳಿಂದ ಶೃಂಗಾರಗೊಂಡು ನಿಯೋಜಿತ ಪ್ರಧಾನಿಯ ಸ್ವಾಗತಕ್ಕೆ ಉತ್ಸುಕವಾಗಿದೆ.

English summary
Preparations are going on in full swing in Varanasi ahead of Prime Minister Narendra Modi's visit to his parliamentary constituency today after getting a landslide victory in the recently concluded Lok Sabha elections.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X