ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗಂಗಾ ತೀರದಲ್ಲಿ ಮುಗ್ಗರಿಸಿ ಬಿದ್ದ ಮೋದಿ: ವಿಡಿಯೋ ವೈರಲ್

|
Google Oneindia Kannada News

Recommended Video

Narendra Modi stumbles on the steps today in Kanpur | MODI | KANPUR | INDIA


ಕಾನ್ಪುರ, ಡಿಸೆಂಬರ್ 14: ಮೆಟ್ಟಿಲು ಹತ್ತುವಾಗ ಪ್ರಧಾನಿ ನರೇಂದ್ರ ಮೋದಿ ಎಡವಿ ಬಿದ್ದಿರುವ ಘಟನೆ ಇಂದು ನಡೆದಿದೆ. ಮೋದಿ ಮುಗ್ಗರಿಸಿ ಬಿದ್ದ ದೃಶ್ಯ ವಿಡಿಯೋದಲ್ಲಿ ಸೆರೆಯಾಗಿದೆ.

ಕಾನ್ಪುರಕ್ಕೆ ತೆರಳಿದ್ದ ಮೋದಿ 'ನಮಾಮಿ ಗಂಗಾ' ಯೋಜನೆಯ ಪರಿಶೀಲಿಸಲೆಂದು ಗಂಗಾ ಘಾಟ್‌ ಗೆ ಭೇಟಿ ನೀಡಿದ್ದರು. ಈ ವೇಳೆ ಮೆಟ್ಟಿಲು ಹತ್ತುವಾಗ ಎಡವಿ ನೆಲಕ್ಕೆ ಬಿದ್ದರು.

ಸ್ವಲ್ಪ ಬಿರ-ಬಿರನೇ ಹೆಜ್ಜೆ ಹಾಕುತ್ತಿದ್ದ ಮೋದಿ ಅವರಿಗೆ ಎಚ್ಚರಿಕೆಯಿಂದ ನಡೆಯುವಂತೆ ಭದ್ರತಾ ಸಿಬ್ಬಂದಿ ಹೇಳಿದರು. ಆದರೂ ಲೆಕ್ಕಿಸದೇ ವೇಗವಾಗಿ ಮೆಟ್ಟಿಲೇರುತ್ತಿದ್ದ ಮೋದಿ, ಕಾಲು ಎಡವಿ ಬಿದ್ದು ಬಿಟ್ಟರು.

ಮೋದಿ ಅವರು ಬಿದ್ದ ಕೂಡಲೇ ಹತ್ತಿರವೇ ಇದ್ದ ಭದ್ರತಾ ಸಿಬ್ಬಂದಿ ಶರವೇಗದಲ್ಲಿ ಧಾವಿಸಿಬಂದು ಮೋದಿ ಅವರನ್ನು ಎತ್ತಿ ನಿಲ್ಲಿಸಿದರು. ವಿಚಲಿತರಾಗದೆ ಮೋದಿ ಅವರು ಮಾಮೂಲಿನಂತೆ ಮುಂದೆ ಸಾಗಿದರು.

ಕ್ಷಣಾರ್ಧದಲ್ಲಿ ವಿಡಿಯೋ ವೈರಲ್ ಆಗಿದೆ

ಕ್ಷಣಾರ್ಧದಲ್ಲಿ ವಿಡಿಯೋ ವೈರಲ್ ಆಗಿದೆ

ಮೋದಿ ಅವರು ಎಡವಿ ಬಿದ್ದಿರುವ ವಿಡಿಯೋ ಕ್ಷಣಾರ್ಧದಲ್ಲಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಕೆಲವರು ಕೆಲವು ರೀತಿಯಲ್ಲಿ ಪ್ರತಿಕ್ರಿಯೆಗಳನ್ನು ನೀಡುತ್ತಿದ್ದಾರೆ. ಹಾಸ್ಯ, ವ್ಯಂಗ್ಯದ ಪ್ರತಿಕ್ರಿಯೆಗಳೇ ಹೆಚ್ಚಿವೆ.

ಮೋದಿ ಎಡವಿದ್ದು ಎಡಗಾಲೋ ಬಲಗಾಲೋ?

ಮೋದಿ ಎಡವಿದ್ದು ಎಡಗಾಲೋ ಬಲಗಾಲೋ?

ಮೋದಿ ಎಡವಿದ್ದು ಬಲಗಾಲೋ? ಅಥವಾ ಎಡಗಾಲೋ ಎಂದೂ ಸಹ ಚರ್ಚೆ ಆರಂಭವಾಗಿದೆ. ಮೋದಿ ಅವರು ಎಡಗಾಲು ಎಡವಿದ್ದಾರೆ ದೇಶಕ್ಕೆ ಆಪತ್ತು ಕಾದಿದೆ ಎಂದೂ ಸಹ ಕೆಲವರು ಸಾಮಾಜಿಕ ಜಾಲತಾಣದಲ್ಲಿ ಗಂಭಿರ ಚರ್ಚೆಯಲ್ಲೇ ತೊಡಗಿಬಿಟ್ಟಿದ್ದಾರೆ.

'ಮೋದಿಗೆ ವಯಸ್ಸಾಯಿತೆ?' ಚರ್ಚೆ ಆರಂಭ

'ಮೋದಿಗೆ ವಯಸ್ಸಾಯಿತೆ?' ಚರ್ಚೆ ಆರಂಭ

ಗಂಗೆಗೆ ಹೀಗೂ ನಮಿಸಬಹುದೇ? ಎಂದು ಒಬ್ಬರು ಪ್ರಶ್ನೆ ಮಾಡಿದ್ದರೆ, ಮೋದಿ ಅವರಿಗೆ ವಯಸ್ಸಾಯಿತು ಎಂದು ಮತ್ತೊಬ್ಬರು ಮೂದಲಿಸಿದ್ದಾರೆ.

ಸದಾ ಎಚ್ಚರದಿಂದಿರುವ ಮೋದಿ ಎಡವಿದ್ದು ಹೇಗೆ?

ಸದಾ ಎಚ್ಚರದಿಂದಿರುವ ಮೋದಿ ಎಡವಿದ್ದು ಹೇಗೆ?

ಯೋಗ, ಆಹಾರ ಪಥ್ಯ ಎಲ್ಲದರಲ್ಲೂ ನಿಗಾ ವಹಿಸುವ ಮೋದಿ ಅವರು ಸದಾ ಎಚ್ಚರದಿಂದ ಇರುತ್ತಾರೆ. ಈ ರೀತಿಯ ಸಣ್ಣ-ಪುಟ್ಟ ಎಚ್ಚರಿಕೆ ತಪ್ಪುವಿಕೆ ಅವರಿಂದ ಆಗುವುದು ಬಹಳಾ ವಿರಳ. ಆದರೆ ಅವರು ಇಂದು ಎಡವಿದ್ದಾರೆ. ಯಾವುದೇ ಗಾಯಗಳು ಮೋದಿ ಅವರಿಗೆ ಆಗಿಲ್ಲ.

English summary
Prime minister Narendra Modi stumbles on the steps today in Kanpur. Modi falling video went viral on social media.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X