ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹಾನಿಕಾರಕ ಪ್ಲಾಸ್ಟಿಕ್ ವಿರುದ್ಧ ಪ್ರಧಾನಿ ಮೋದಿ ಸಮರ

|
Google Oneindia Kannada News

ಮಥುರಾ (ಉ.ಪ್ರದೇಶ), ಸೆಪ್ಟೆಂಬರ್ 11: ಪ್ಲಾಸ್ಟಿಕ್ ವಿರುದ್ಧ ಸಮರ ಸಾರಿರುವ ಮೋದಿ ಅವರು, ಒಂದು ಬಾರಿ ಬಳಸಿ ಬಿಸಾಡುವಂತಹಾ ಹಾನಿಕಾರಕ ಪ್ಲಾಸ್ಟಿಕ್ ಅನ್ನು ಬಳಸಬೇಡಿ ಎಂದು ಕರೆ ನೀಡಿದ್ದಾರೆ.

ಮಥುರಾದಲ್ಲಿ ಆಯೋಜಿಸಿದ್ದ 'ಸ್ವಚ್ಛ ಹೇ ಶಿವಾ' ಕಾರ್ಯಕ್ರಮದಲ್ಲಿ ಮಾತನಾಡಿದ ಮೋದಿ, ಕಚೇರಿ, ಮನೆಗಳನ್ನು ಬಳಸಿ ಬಿಸಾಡುವ ಹಾನಿಕಾರಕ ಪ್ಲಾಸ್ಟಿಕ್‌ನಿಂದ ಅಕ್ಟೋಬರ್ 2ರ ಗಾಂಧಿ ಜಯಂತಿಯ ಒಳಗಾಗಿ ಮುಕ್ತ ಮಾಡಿಕೊಳ್ಳಿ ಎಂದು ಹೇಳಿದರು.

ಪ್ರಧಾನಿ ಮೋದಿಗೆ ಬಂದ 2,700ಕ್ಕೂ ಹೆಚ್ಚು ಉಡುಗೊರೆ ಸೆ. 14ರಿಂದ ಹರಾಜುಪ್ರಧಾನಿ ಮೋದಿಗೆ ಬಂದ 2,700ಕ್ಕೂ ಹೆಚ್ಚು ಉಡುಗೊರೆ ಸೆ. 14ರಿಂದ ಹರಾಜು

ಕಾರ್ಯಕ್ರಮದಲ್ಲಿಯೇ ಪೌರಕಾರ್ಮಿಕ ಮಹಿಳೆಯರೊಂದಿಗೆ ಕೂತು ಪ್ರಧಾನಿ ಮೋದಿ ಅವರು ಪ್ಲಾಸ್ಟಿಕ್ ಅನ್ನು ವಿಂಗಡಣೆ ಮಾಡಿದರು. ಕಾರ್ಯಕ್ರಮದಲ್ಲಿ ಪೌರಕಾರ್ಮಿಕರಿಗೆ ಸ್ವಚ್ಛತಾ ಸಾಮಗ್ರಿಗಳನ್ನು ವಿತರಿಸಲಾಯಿತು.

Narendra Modi Started Campaign Against Plastic

ಮೋದಿ ಅವರು ಪ್ಲಾಸ್ಟಿಕ್‌ನ ದುಷ್ಪರಿಣಾಮಗಳ ಬಗ್ಗೆ ವಿವರಿಸಿದರು. ಪೌರಕಾರ್ಮಿಕರಿಗೆ ಪ್ಲಾಸ್ಟಿಕ್ ತ್ಯಾಜದ ಬಗ್ಗೆ ಕೆಲವು ಪ್ರಶ್ನೆಗಳನ್ನು ಕೇಳಿದರು. ಅದಕ್ಕೆ ಪೌರ ಕಾರ್ಮಿಕರು ಉತ್ತರಿಸಿದರು. ಕಾರ್ಯಕ್ರಮದಲ್ಲಿ ತ್ಯಾಜ್ಯವನ್ನು ಕ್ರಶ್ ಮಾಡುವ ಯಂತ್ರವನ್ನು ಸಹ ಉದ್ಘಾಟಿಸಲಾಯಿತು.

ಇದೇ ಕಾರ್ಯಕ್ರಮದಲ್ಲಿ ಪ್ರಾಣಿಗಳ ಖಾಯಿಲೆ ತಡೆ ಕಾರ್ಯಕ್ರಮ (ಎನ್‌ಎಡಿಸಿಪಿ) ಗೂ ಚಾಲನೆ ನೀಡಲಾಯಿತು. ಈ ಕಾರ್ಯಕ್ರಮದ ಭಾಗವಾಗಿ ನೂರಾರು ಹಸುಗಳಿಗೆ ಲಸಿಕೆ ಹಾಕಲಾಯಿತು.

ಕೋಟ್ಯಧಿಪತಿಯಲ್ಲಿ 'ಕೇಳದ' ಈ ಪ್ರಶ್ನೆ, ಸಾಮಾಜಿಕ ತಾಣದಲ್ಲಿ ಫುಲ್ ವೈರಲ್ಕೋಟ್ಯಧಿಪತಿಯಲ್ಲಿ 'ಕೇಳದ' ಈ ಪ್ರಶ್ನೆ, ಸಾಮಾಜಿಕ ತಾಣದಲ್ಲಿ ಫುಲ್ ವೈರಲ್

ಈ ಬಗ್ಗೆ ಮಾತನಾಡಿದ ಮೋದಿ, 'ಪ್ಲೇಗ್ ಮತ್ತು ಇತರೆ ಜೀವಹರಣ ಕಾಯಿಲೆಗಳ ಬಗ್ಗೆ ಈ ಹಿಂದಿನ ಸರ್ಕಾರ ಗಮನವಹಿಸದೇ ಇರುವುದು ಆಶ್ಚರ್ಯ ತಂದಿದೆ. ನಾನು ಈ ಬಗ್ಗೆ ಅಭಿಯಾನವನ್ನೇ ಆರಂಭಿಸಿದ್ದೇನೆ' ಎಂದು ಹೇಳಿದರು.

English summary
Prime Minister Narendra Modi started campaign against single use plastic. He said 'throw out single use plastic from house and office before October 2'.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X