ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೃಂದಾವನದಲ್ಲಿ ಮಕ್ಕಳಿಗೆ ಬಿಸಿಯೂಟ ಬಡಿಸಿದ ಪ್ರಧಾನಿ ಮೋದಿ

|
Google Oneindia Kannada News

Recommended Video

ಉತ್ತರಪ್ರದೇಶದ ಬೃಂದಾವನದಲ್ಲಿ ಶಾಲಾ ಮಕ್ಕಳಿಗೆ ಬಿಸಿಯೂಟ ಬಡಿಸಿದ ನರೇಂದ್ರ ಮೋದಿ

ಲಕ್ನೋ, ಫೆಬ್ರವರಿ 11: ಉತ್ತರ ಪ್ರದೇಶದ ಬೃಂದಾವನದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಅಕ್ಷಯ ಪಾತ್ರಾ ಪ್ರತಿಷ್ಠಾನದ ಮೂರು ಶತಕೋಟಿಯ ಆಹಾರ ಪೂರೈಕೆ ಭಾಗವಾಗಿ ನಡೆದ ಕಾರ್ಯಕ್ರಮದಲ್ಲಿ ಶಾಲಾ ಮಕ್ಕಳಿಗೆ ಬಿಸಿಯೂಟ ಬಿಡಿಸಿದರು.

ಈ ಸಂದರ್ಭದಲ್ಲಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ರಾಜ್ಯಪಾಲ ರಾಮ್ ನಾಯ್ಕ್ ಅವರಿಗೆ ಸಾಥ್ ನೀಡಿದರು.

'ಎಚ್ಡಿಕೆ ರಾತ್ರಿಯೆಲ್ಲ ಅಳುತ್ತಾರೆ': ಹುಬ್ಬಳ್ಳಿಯಲ್ಲಿ ಮೋದಿ 10 ಹೇಳಿಕೆ 'ಎಚ್ಡಿಕೆ ರಾತ್ರಿಯೆಲ್ಲ ಅಳುತ್ತಾರೆ': ಹುಬ್ಬಳ್ಳಿಯಲ್ಲಿ ಮೋದಿ 10 ಹೇಳಿಕೆ

ಬಳಿಕ ಮೋದಿ ಅವರು ಬೃಂದಾವನ ಚಂದ್ರೋದಯ ಮಂದಿರ ಅವರಣದಲ್ಲಿ ಶಾಲಾ ಮಕ್ಕಳೊಂದಿಗೆ ಹರಟಿದರು.

narendra modi serves midday meals to school children in uttar pradesh vrindavan

ಬೆಂಗಳೂರು ಮೂಲಕ ಅಕ್ಷಯ ಪಾತ್ರಾ ಪ್ರತಿಷ್ಠಾನ 200೦ನೇ ಇಸವಿಯಿಂದ ದೇಶದ 12 ರಾಜ್ಯಗಳಲ್ಲಿ 14,702 ಶಾಲೆಗಳಲ್ಲಿ 1.76 ಮಿಲಿಯನ್‌ಗೂ ಅಧಿಕ ಮಕ್ಕಳಿಗೆ ಮಧ್ಯಾಹ್ನದ ಊಟ ಪೂರೈಸುತ್ತಿದೆ.

ಪ್ರತಿಷ್ಠಾನವು ಮೂರು ಶತಕೋಟಿ ಊಟವನ್ನು ಪೂರೈಸಿದ ಸಲುವಾಗಿ ಆರಂಭಿಸಿದ ಕಾರ್ಯಕ್ರಮಕ್ಕೆ ಮೋದಿ ಅವರು ಚಾಲನೆ ನೀಡಿದರು.

ಕರ್ನಾಟಕ ಮುಖ್ಯಮಂತ್ರಿಗೆ ತಮ್ಮ ಸ್ಥಾನ ಉಳಿಸಿಕೊಳ್ಳುವುದೇ ಆಗಿರುತ್ತದೆ: ಮೋದಿ ಕರ್ನಾಟಕ ಮುಖ್ಯಮಂತ್ರಿಗೆ ತಮ್ಮ ಸ್ಥಾನ ಉಳಿಸಿಕೊಳ್ಳುವುದೇ ಆಗಿರುತ್ತದೆ: ಮೋದಿ

ಸಂಸದೆ ಹೇಮಾಮಾಲಿನಿ, ಉತ್ತರ ಪ್ರದೇಶ ಸಂಪುಟ ಸಚಿವರಾದ ಶ್ರೀಕಂಠ ಶರ್ಮಾ, ಲಕ್ಷ್ಮಿ ನಾರಾಯಣ ಚೌಧರಿ, ಅನುಪಮಾ ಜೈಸ್ವಾಲ್ ಕಾರ್ಯಕ್ರಮದಲ್ಲಿ ಹಾಜರಿದ್ದರು.

ಮಹಾನಾಯಕ ಎನ್ಟಿಆರ್ ಬೆನ್ನಿಗೆ ಚೂರಿ ಹಾಕಿದ್ದ ಚಂದ್ರಬಾಬು ನಾಯ್ಡು: ಮೋದಿ ಮಹಾನಾಯಕ ಎನ್ಟಿಆರ್ ಬೆನ್ನಿಗೆ ಚೂರಿ ಹಾಕಿದ್ದ ಚಂದ್ರಬಾಬು ನಾಯ್ಡು: ಮೋದಿ

ಈ ಹಿಂದಿನ ಸರ್ಕಾರದ ಬಗ್ಗೆ ವಾಗ್ದಾಳಿ ನಡೆಸಿದ ಮೋದಿ, ಮಕ್ಕಳ ಪೌಷ್ಟಿಕತೆ, ಲಸಿಕೆ ಮತ್ತು ಸ್ವಚ್ಛತೆಗೆ ಸಂಬಂಧಿಸಿದಂತೆ ತೀರಾ ನಿಧಾನಗತಿಯ ಕೆಲಸಗಳು ನಡೆದಿದ್ದವು. ಕಳೆದ 55 ತಿಂಗಳಿನಲ್ಲಿ ಕೇಂದ್ರ ಸರ್ಕಾರವು ಮಕ್ಕಳು ಮತ್ತು ತಾಯಂದಿರಿಗೆ ಪೌಷ್ಟಿಕತೆ ಹಾಗೂ ಆರೋಗ್ಯದ ವಿಚಾರದಲ್ಲಿ ಕಾಳಜಿವಹಿಸಿದೆ ಎಂದು ಹೇಳಿದರು.

English summary
Prime Minister Narendra Modi on Monday served food to school children at a school in Vrindavan. He unveiled a ceremonial palque to mark the serving of third billionth meal by Akshaya Patra Foundation.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X