ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೇದಾರನಾಥದಲ್ಲಿ ಮೋದಿ ಧ್ಯಾನ, ಕಾಶಿಯಲ್ಲಿ 'ಮತಧ್ಯಾನ'

|
Google Oneindia Kannada News

ಲಕ್ನೋ, ಮೇ 19: ಮತ್ತೆ ಪ್ರಧಾನಿಯಾಗುವ ಕನಸು ಕಾಣುತ್ತಿರುವ ನರೇಂದ್ರ ಮೋದಿ ವಾರಣಾಸಿಯಿಂದ ಮರು ಆಯ್ಕೆ ಬಯಸಿದ್ದಾರೆ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಕೊನೆಯ ಹಂತದ ಮತದಾನದಲ್ಲಿವಾರಣಾಸಿಗೆ ಚುನಾವಣೆ ನಡೆಯುತ್ತಿದ್ದು, ಪ್ರಧಾನಿ ಮೋದಿ ವಿರುದ್ಧ ಕಾಂಗ್ರೆಸ್‌ನಿಂದ ಅಲೋಕ್ ರೈ ಹಾಗೂ ಎಸ್‌ಪಿ-ಬಿಎಸ್ಪಿ ಮೈತ್ರಿಕೂಟದಿಂದ ಶಾಲಿನಿ ಯಾದವ್‌ ಸ್ಪರ್ಧಿಸುತ್ತಿದ್ದಾರೆ.

ಕೇದಾರನಾಥ ಗುಹೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಧ್ಯಾನಕೇದಾರನಾಥ ಗುಹೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಧ್ಯಾನ

ಬಿಎಸ್ಎಫ್‌ ಮಾಜಿ ಯೋಧ ತೇಜ್ ಬಹದ್ದೂರ್ ಯಾದವ್‌ ನಾಮಪತ್ರ ತಿರಸ್ಕಾರ ಹಾಗೂ ಕಾಂಗ್ರೆಸ್‌ನಿಂದ ಪ್ರಿಯಾಂಕಾ ಗಾಂಧಿ ವಾದ್ರಾ ಸ್ಪರ್ಧಿಸದಿರುವುದು ಮೋದಿಗೆ ಈ ಕ್ಷೇತ್ರದಲ್ಲಿ ಗೆಲುವು ಸುಲಭವಾಗಿದೆ ಎನ್ನಲಾಗಿದೆ.

Narendra Modi eyeing on big margin at Varanasi

ಇದೇ ಕಾರಣಕ್ಕೆ ನಾಮಪತ್ರ ಸಲ್ಲಿಸುವ ಹಿಂದಿನ ದಿನ ಭರ್ಜರಿ ರೋಡ್‌ಶೋ ನಡೆಸಿದ್ದನ್ನು ಬಿಟ್ಟರೆ ವಾರಣಾಸಿಯಲ್ಲಿ ಮೋದಿ ಪ್ರಚಾರವನ್ನೇ ಮಾಡಿಲ್ಲ. ಹಿಂದೂಗಳ ಪವಿತ್ರ ಕ್ಷೇತ್ರ ಕಾಶಿ ಇರುವ ವಾರಣಾಸಿಯು ಬಿಜೆಪಿಗೆ ಪ್ರತಿಷ್ಠೆಯ ಕ್ಷೇತ್ರವಾಗಿದೆ.

ಬಿಜೆಪಿ 300ಕ್ಕಿಂತಲೂ ಹೆಚ್ಚು ಸ್ಥಾನ ಗಳಿಸಲಿದೆ: ಮೋದಿಬಿಜೆಪಿ 300ಕ್ಕಿಂತಲೂ ಹೆಚ್ಚು ಸ್ಥಾನ ಗಳಿಸಲಿದೆ: ಮೋದಿ

ಹೀಗಾಗಿ ವಾರಣಾಸಿಯಲ್ಲಿ ಗೆಲುವಿನ ಜತೆಗೆ ದಾಖಲೆಯ ಅಂತರ ನಿರ್ಮಿಸುವುದು ಬಿಜೆಪಿ ಉದ್ದೇಶ ಎಂದು ಈಗಾಗಲೇ ಮೋದಿ ಹಾಗೂ ಅಮಿತ್‌ ಷಾ ಘೋಷಿಸಿದ್ದಾರೆ.

ಮೋದಿ ವಿರುದ್ಧ ಸ್ಪರ್ಧಿಸಿದ್ದ ಮಾಜಿ ಡಾನ್, ಸ್ಪರ್ಧೆಯಿಂದ ಹಿಂದಕ್ಕೆಮೋದಿ ವಿರುದ್ಧ ಸ್ಪರ್ಧಿಸಿದ್ದ ಮಾಜಿ ಡಾನ್, ಸ್ಪರ್ಧೆಯಿಂದ ಹಿಂದಕ್ಕೆ

ಮೋದಿಯ ವಾರಣಾಸಿ ಜತೆಗೆ ಪಟನಾ ಸಾಹೀಬ್ನಲ್ಲಿ ರವಿಶಂಕರ್‌ ಪ್ರಸಾದ್‌ ಹಾಗೂ ಶತ್ರುಘ್ನ ಸಿನ್ಹಾ, ಪಂಜಾಬ್‌ನಲ್ಲಿ ಮಾಜಿ ಸಿಎಂ ಪ್ರಕಾಶ್‌ ಸಿಂಗ್‌ ಬಾದಲ್ ಸ್ಪರ್ಧೆ ಕೂಡ ಕುತೂಹಲ ಏರ್ಪಡಿಸಿದೆ.

English summary
Prime minister Narendra Modi eyeing on Big margin at Varanasi constituency, as it going on voting today.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X