ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹೆಂಡತಿ ಬಗ್ಗೆ ಹೆಸರು ಬಿಟ್ಟು ಬೇರೇನೂ ಗೊತ್ತಿಲ್ಲ ಮೋದಿಗೆ!

|
Google Oneindia Kannada News

Recommended Video

ನರೇಂದ್ರ ಮೋದಿ ಆಸ್ತಿ ವಿವರ | Lok Sabha Elections 2019

ವಾರಣಾಸಿ, ಏಪ್ರಿಲ್ 26: ನರೇಂದ್ರ ಮೋದಿ ಅವರು ಇಂದು ವಾರಣಾಸಿಯಿಂದ ಲೋಕಸಭಾ ಚುನಾವಣೆಗೆ ಉಮೇದುವಾರಿಕೆ ಸಲ್ಲಿಸಿದ್ದು, ತಮ್ಮ ಶಿಕ್ಷಣ, ಆಸ್ತಿಯ ಜೊತೆಗೆ ಕುಟುಂಬ ಬಗ್ಗೆಯೂ ಮಾಹಿತಿ ನೀಡಿದ್ದಾರೆ.

ಲೋಕಸಭಾ ಚುನಾವಣೆ ವಿಶೇಷ ಪುಟ

ನರೇಂದ್ರ ಮೋದಿ ಅವರ ನಾಮಪತ್ರದಲ್ಲಿ ಅತಿ ಹೆಚ್ಚು ಗಮನ ಸೆಳೆಯುತ್ತಿರುವುದು ಅವರ ಪತ್ನಿಯವರ ಹೆಸರು. ನರೇಂದ್ರ ಮೋದಿ ಅವರು ಗುಜರಾತ್ ಸಿಎಂ ಆಗಿದ್ದಾಗ, ಬಹುತೇಕರು ಮೋದಿ ಅವಿವಾಹಿತ ಎಂದೇ ನಂಬಿದ್ದರು. ಮೋದಿ ಅವರು ಸಹ ಸಂದರ್ಶನವೊಂದರಲ್ಲಿ ತಾವು ಅವಿವಾಹಿತ ಎಂದು ಹೇಳಿಕೊಂಡಿದ್ದು ಈಗಲೂ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಆದರೆ ಅವರು ಪ್ರಧಾನಿ ಅಭ್ಯರ್ಥಿಯಾಗಿ ಗುರುತಿಸಿಕೊಂಡ ನಂತರ ಮೋದಿ ಅವರಿಗೆ ಮದುವೆಯಾಗಿರುವುದು ಬೆಳಕಿಗೆ ಬಂತು, ಮೋದಿ ಅವರು ಯಶೋಧಾಬೆನ್ ಎಂಬುವರನ್ನು ಬಹು ಮುಂಚೆಯೇ ಶಾಸ್ತ್ರೋಕ್ತವಾಗಿ ವಿವಾಹವಾಗಿದ್ದರು, ಆದರೆ ನಂತರ ಸಂಸಾರವನ್ನು ತ್ಯಜಿಸಿ ಹೊರಟುಬಿಟ್ಟಿದ್ದು ಈಗ ಇತಿಹಾಸ.

'ಬಾದಲ್' ಪಾದ ಮುಟ್ಟಿ ನಮಸ್ಕರಿಸಿದ ಮೋದಿಗೆ ಮೆಚ್ಚುಗೆಯ ಸುರಿ'ಮಳೆ''ಬಾದಲ್' ಪಾದ ಮುಟ್ಟಿ ನಮಸ್ಕರಿಸಿದ ಮೋದಿಗೆ ಮೆಚ್ಚುಗೆಯ ಸುರಿ'ಮಳೆ'

ನರೇಂದ್ರ ಮೋದಿ ಅವರ ಪರಿತ್ಯಕ್ತ ಪತ್ನಿ ಯಶೋಧಾ ಬೆನ್ ಅವರು ಶಾಲೆಯೊಂದರಲ್ಲಿ ಶಿಕ್ಷಕಿಯಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಅವರು ಮೋದಿ ಬೆಂಬಲಿಗರೇ ಆಗಿದ್ದಾರೆ.

ಹೆಂಡತಿಯ ಹೆಸರು ಬರೆದಿರುವ ಮೋದಿ

ಹೆಂಡತಿಯ ಹೆಸರು ಬರೆದಿರುವ ಮೋದಿ

ಇಂದು ಮೋದಿ ಅವರು ಸಲ್ಲಿಸಿರುವ ನಾಮಪತ್ರದಲ್ಲಿ, ಹೆಂಡತಿ ಕಾಲಂ ನಲ್ಲಿ ಯಶೋಧಾಬೆನ್ ಅವರ ಹೆಸರನ್ನು ನರೇಂದ್ರ ಮೋದಿ ಅವರು ಬರೆದಿದ್ದಾರೆ. ಆದರೆ ಹೆಸರು ಹೊರತು ಪಡಿಸಿ ಅವರ ಬಗ್ಗೆ ಇನ್ನಾವುದೇ ಮಾಹಿತಿ ಗೊತ್ತಿಲ್ಲವೆಂದು ಮೋದಿ ಅವರು ನಾಮಪತ್ರದಲ್ಲಿ ನಮೂದಿಸಿದ್ದಾರೆ.

ಮೋದಿ ಆಸ್ತಿ ವಿವರ: ಸ್ವಂತ ಕಾರು ಹೊಂದಿಲ್ಲ, ಸಾಲ ಮಾಡಿಲ್ಲ ಮೋದಿ ಆಸ್ತಿ ವಿವರ: ಸ್ವಂತ ಕಾರು ಹೊಂದಿಲ್ಲ, ಸಾಲ ಮಾಡಿಲ್ಲ

ಹೆಂಡತಿಯ ಆಸ್ತಿಯ ಮಾಹಿತಿ ನೀಡಬೇಕು

ಹೆಂಡತಿಯ ಆಸ್ತಿಯ ಮಾಹಿತಿ ನೀಡಬೇಕು

ನಿಯಮದ ಅನ್ವಯ ಹೆಂಡತಿಯ ಪ್ಯಾನ್ ಸಂಖ್ಯೆ, ಹೆಂಡತಿಯ ವಾರ್ಷಿಕ ಆದಾಯ, ಆಸ್ತಿ, ಬ್ಯಾಂಕ್ ವಿವರ, ಆಭರಣ, ವಾಹನ, ಪತ್ನಿಯ ಉದ್ಯೋಗ, ಆದಾಯದ ಮೂಲ ಎಲ್ಲವನ್ನೂ ಚುನಾವಣಾ ಆಯೋಗಕ್ಕೆ ನೀಡಬೇಕು. ಆದರೆ ಮೋದಿ ಅವರು ಈ ಎಲ್ಲಾ ಕಾಲಂಗಳಲ್ಲಿ ಗೊತ್ತಿಲ್ಲ (Not know) ಎಂದು ನಮೂದಿಸಿದ್ದಾರೆ.

ಮಿತ್ರ ಪಕ್ಷಗಳ ಜತೆಗೂಡಿ ಮೋದಿ ಬಲ ಪ್ರದರ್ಶನ, ಏಕಾಂಗಿ ರಾಹುಲ್ ಗಾಂಧಿ ಮಿತ್ರ ಪಕ್ಷಗಳ ಜತೆಗೂಡಿ ಮೋದಿ ಬಲ ಪ್ರದರ್ಶನ, ಏಕಾಂಗಿ ರಾಹುಲ್ ಗಾಂಧಿ

ನರೇಂದ್ರ ಮೋದಿ ಶಿಕ್ಷಣದ ಬಗ್ಗೆ ಚರ್ಚೆ

ನರೇಂದ್ರ ಮೋದಿ ಶಿಕ್ಷಣದ ಬಗ್ಗೆ ಚರ್ಚೆ

ನರೇಂದ್ರ ಮೋದಿ ಅವರ ವಿದ್ಯಾಭ್ಯಾಸದ ಬಗ್ಗೆಯೂ ಕಳೆದ ಲೋಕಸಭೆ ಚುನಾವಣೆ ಬಳಿಕ ಬಹುವಾಗಿ ಚರ್ಚೆಯಾಗಿತ್ತು. ವಿಶೇಷವಾಗಿ ಎಎಪಿ ಮುಖ್ಯಸ್ಥ ಅರವಿಂದ ಕೇಜ್ರಿವಾಲ್ ಅವರು ಮೋದಿ ಅವರ ಶಿಕ್ಷಣದ ಬೆನ್ನುಬಿದ್ದಿದ್ದರು. ಆದರೆ ಕೊನೆಗೆ ಮೋದಿ ಅವರು ಪದವಿ ಮತ್ತು ಉನ್ನತ ಪದವಿ ಪಡೆದಿದ್ದಾರೆಂದು ಬಿಜೆಪಿಯ ಕೆಲ ವಕ್ತಾರರು ದಾಖಲೆ ಬಿಡುಗಡೆ ಮಾಡಿದರು.

ಶೈಕ್ಷಣಿಕ ವಿವರ ಸಲ್ಲಿಸಿರುವ ಮೋದಿ

ಶೈಕ್ಷಣಿಕ ವಿವರ ಸಲ್ಲಿಸಿರುವ ಮೋದಿ

ಇಂದು ಸಲ್ಲಿಸಿರುವ ನಾಮಪತ್ರದಲ್ಲಿ ಶಿಕ್ಷಣದ ಮಾಹಿತಿಯನ್ನು ಮೋದಿ ಅವರು ನಮೂದಿಸಿದ್ದಾರೆ. ಅವರು ಎಸ್‌ಎಸ್‌ಎಲ್‌ಸಿಯ ತತ್ಸಮಾನ ಎಸ್‌ಎಸ್‌ಸಿಯನ್ನು ಗುಜರಾತ್‌ ಬೋರ್ಡ್‌ನಲ್ಲಿ, ಬಿಎ ಪದವಿಯನ್ನು ದೆಹಲಿ ವಿಶ್ವವಿದ್ಯಾಲಯದಲ್ಲಿ, ಎಂಎ ಪದವಿಯನ್ನು ಅಹ್ಮದಾಬಾದ್‌ ವಿವಿಯಲ್ಲಿ ಪೂರೈಸಿರುವುದಾಗಿ ಹೇಳಿದ್ದಾರೆ.

English summary
Narendra Modi files his nomination today from Varanasi constituency. He says in nomination that he does not know anything about his wife Yashoda Ben
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X