ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅತ್ಯಾಚಾರಿಗೆ ಗಲ್ಲು ಆಗಲೇಬೇಕು : ಮಗುವಿನ ತಾಯಿಯ ಆಕ್ರಂದನ

|
Google Oneindia Kannada News

ಅಲಿಘರ್ (ಉತ್ತರ ಪ್ರದೇಶ), ಜೂನ್ 07 : "ನನ್ನ ಮಗುವಿನ ಮೇಲೆ ಅತ್ಯಾಚಾರ ಎಸಗಿ, ಕೊಲೆ ಮಾಡಿದವನಿಗೆ ಗಲ್ಲು ಶಿಕ್ಷೆ ಕೊಡಿಸಲೇಬೇಕೆಂದು ಪ್ರಧಾನಿ ನರೇಂದ್ರ ಮೋದಿ ಮತ್ತು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ಆಗ್ರಹಿಸುತ್ತೇನೆ."

ಮಗುವಿನ ಬರ್ಬರ ಹತ್ಯೆ : ತುಕ್ಡೇ ಗ್ಯಾಂಗ್ ಎಲ್ಲಿದೆ, ಆಷಾಡಭೂತಿ ತಾರೆಯರೇ ಎಲ್ಲಿದ್ದೀರಿ?ಮಗುವಿನ ಬರ್ಬರ ಹತ್ಯೆ : ತುಕ್ಡೇ ಗ್ಯಾಂಗ್ ಎಲ್ಲಿದೆ, ಆಷಾಡಭೂತಿ ತಾರೆಯರೇ ಎಲ್ಲಿದ್ದೀರಿ?

ಹೀಗೆಂದು, ಅಲಿಘರ್ ನ ತಪ್ಪಲ್ ಎಂಬಲ್ಲಿ ಬರ್ಬರವಾಗಿ ಹತ್ಯೆಯಾದ 3 ವರ್ಷದ ಮಗುವಿನ ತಾಯಿ ಶಿಲ್ಪಾ ಶರ್ಮಾ ಅವರು ಕೋರಿದ್ದಾರೆ. ಅತ್ಯಾಚಾರಿಗೆ ಕಠಿಣ ಶಿಕ್ಷೆ ಆಗಲೇಬೇಕು. ಇಲ್ಲದಿದ್ದರೆ 7 ವರ್ಷ ಜೈಲು ಶಿಕ್ಷೆ ಕಳೆದ ನಂತರ ಆತ ಹೊರಬಂದು ಮತ್ತಷ್ಟು ಬಲಿಷ್ಠನಾಗುತ್ತಾನೆ ಎಂದು ಅವರು ಹೇಳಿದ್ದಾರೆ.

Murdered childs mother demands death sentence for rapists

ಕೇವಲ 10 ಸಾವಿರ ರುಪಾಯಿ ಸಾಲವನ್ನು ಮಗುವಿನ ತಂದೆ ಬನ್ವಾರಿ ಲಾಲ್ ಶರ್ಮಾ ವಾಪಸ್ ಕೇಳುತ್ತಿದ್ದಾನೆಂದು ಮೊಹಮ್ಮದ್ ಜಾಹಿದ್ ಮತ್ತು ಆತನ ಸ್ನೇಹಿತ ಅಸ್ಲಂ 3 ವರ್ಷದ ಮಗು ಟ್ವಿ** ಶರ್ಮಾಳನ್ನು ಅಪಹರಿಸಿ, ಅತ್ಯಾಚಾರವೆಸಗಿ, ದುಪಟ್ಟಾದಿಂದ ಕತ್ತು ಹಿಸುಕಿ ಸಾಯಿಸಿದ್ದಲ್ಲದೆ, ಆಸಿಡ್ ಹಾಕಿ ಸುಟ್ಟಿದ್ದಲ್ಲದೆ, ಆಕೆಯ ಪುಟ್ಟ ಕಣ್ಣಗಳನ್ನು ಬಗೆದಿದ್ದರು ಮತ್ತು ಚೀಲದಲ್ಲಿ ಹಾಕಿ ತಿಪ್ಪೆಗೆ ಎಸೆದಿದ್ದರು. ಆ ದೇಹವನ್ನು ಬೀದಿ ನಾಯಿಗಳು ತಿಂದು ಆಕೆಯ ಅಂಗಾಂಗಗಳನ್ನು ಎಳೆದೊಯ್ಯುತ್ತಿದ್ದಾಗಲೇ ಪ್ರಕರಣ ಬಯಲಿಗೆ ಬಂದಿತ್ತು.

ಈ ಹತ್ಯೆಗೆ ದೇಶದಾದ್ಯಂತ ಭಾರೀ ಪ್ರತಿಭಟನೆಗಳು ವ್ಯಕ್ತವಾಗುತ್ತಿವೆ. ಹಲವಾರು ಬಾಲಿವುಡ್ ನಟ, ನಟಿಯರು ಸೇರಿದಂತೆ, ರಾಜಕಾರಣಿಗಳು, ಕ್ರಿಕೆಟ್ ಪಟುಗಳು ಮತ್ತು ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ವಾದ್ರಾ ಅವರು ಕೂಡ ಆರೋಪಿಗೆ ಕಠಿಣ ಶಿಕ್ಷೆಯಾಗಬೇಕೆಂದು ಆಗ್ರಹಿಸಿದ್ದಾರೆ.

ಇವರಿಬ್ಬರಿಗೆ ತಕ್ಕ ಶಿಕ್ಷೆ ಆಗಲಿಲ್ಲದಿದ್ದರೆ, ಅವರು ಇಂತಹ ಹೀನ ಕೃತ್ಯ ಮಾಡಲೆಂದು ಮತ್ತೆ ಪ್ರೇರೇಪಿಸಿದಂತಾಗುತ್ತದೆ. ಸಹ ಆರೋಪಿಯಾಗಿರುವ ಅಸ್ಲಂ ತನ್ನ 4 ವರ್ಷದ ಮಗಳ ಮೇಲೆಯೇ ಅತ್ಯಾಚಾರ ಮಾಡಿದಂಥ ವಿಕೃತ ಕಾಮಿ. ಆತನ ಹೆಂಡತಿ, ತನ್ನ ಮಗಳನ್ನು ಅಂದೇ ಕರೆದುಕೊಂಡು ತವರುಮನೆ ಸೇರಿದ್ದಾಳೆ ಎಂದು ಹೇಳುತ್ತಾರೆ ಶಿಲ್ಪಾ ಶರ್ಮಾ.

ಈ ಪ್ರಕರಣದ ತನಿಖೆ ನಡೆಸಲೆಂದು ಉತ್ತರ ಪ್ರದೇಶದ ಪೊಲೀಸ್ ಆಯುಕ್ತರು ವಿಶೇಷ ತನಿಖಾ ದಳವನ್ನು ರಚಿಸಿದ್ದಾರೆ. ಆದರೆ, ಪೊಲೀಸರು ಶಿಲ್ಪಾ ಶರ್ಮಾ ನೀಡಿದ ನಾಪತ್ತೆ ದೂರನ್ನು ತಕ್ಷಣ ದಾಖಲಿಸಿಕೊಂಡು ತನಿಖೆ ನಡೆಸಿದ್ದರೆ ಆರೋಪಿಗಳು ಪತ್ತೆಯಾಗುತ್ತಿದ್ದರು ಮತ್ತು ತನ್ನ ಮಗಳು ಬದುಕುಳಿಯುತ್ತಿದ್ದಳು ಎಂದು ಪೊಲೀಸರ ವಿರುದ್ಧವೇ ಆರೋಪಿಸಿದ್ದಾರೆ.

3 ವರ್ಷದ ಕಂದಮ್ಮನ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿ ಹತ್ಯೆಗೈದಿರುವ ಆರೋಪಿಗಳಿಗೆ ಗಲ್ಲು ಶಿಕ್ಷೆ ವಿಧಿಸುವುದಿರಲಿ, 2016ರ ಡಿಸೆಂಬರ್ ನಲ್ಲಿ ನಿರ್ಭಯಾಳ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿ ಹತ್ಯೆಗೈದವರಿಗೆ ಇನ್ನೂ ಗಲ್ಲು ಶಿಕ್ಷೆ ಕಾಯಂ ಆಗಿಲ್ಲ. ಅತ್ಯಾಚಾರಿಗಳು ಮತ್ತು ಹತ್ಯೆಕೋರರ ವಿರುದ್ಧ ಇನ್ನೂ ಕಠಿಣವಾದ ಕಾನೂನು ರೂಪಿಸಬೇಕು. ನಮಗೆ ಸುರಕ್ಷಿತ ಭಾರತ ಬೇಕಾಗಿದೆ. ಕೂಡಲೆ ಕಾರ್ಯತತ್ಪರರಾಗಿರಿ ಎಂದು ಸಾರ್ವಜನಿಕರು ಕೇಂದ್ರ ಸರಕಾರವನ್ನು ಆಗ್ರಹಿಸುತ್ತಿದ್ದಾರೆ.

English summary
Murdered 3-year-old child's mother Shilpa Sharma has demanded death sentence for rapists and has urged PM Narendra Modi and CM of Uttar Pradesh Yogi Adityanath to take strict action against them.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X