• search
  • Live TV
ಲಕ್ನೋ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಉತ್ತರ ಪ್ರದೇಶದ ಜೈಲಿಗೆ ವರ್ಗಾವಣೆ ವೇಳೆ ಪತಿ ಹತ್ಯೆ ಸಾಧ್ಯತೆ: ಭದ್ರತೆಗಾಗಿ ಅನ್ಸಾರಿ ಪತ್ನಿ ಪತ್ರ

|

ನವದೆಹಲಿ, ಮಾರ್ಚ್ 31: ಜೈಲಿನಲ್ಲಿರುವ ಗ್ಯಾಂಗ್‌ಸ್ಟರ್-ರಾಜಕಾರಣಿ ಮುಖ್ತಾರ್ ಅನ್ಸಾರಿಯ ಪತ್ನಿ ಅಫ್ಸಾನ್ ಅನ್ಸಾರಿ, ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರಿಗೆ ಪತ್ರ ಬರೆದಿದ್ದು, ಪಂಜಾಬ್‌ನಿಂದ ಉತ್ತರ ಪ್ರದೇಶಕ್ಕೆ ತಮ್ಮ ಪತಿಯನ್ನು ವರ್ಗಾಯಿಸುವ ವೇಳೆ ಸೂಕ್ತ ಭದ್ರತೆ ಒದಗಿಸುವಂತೆ ಮನವಿ ಮಾಡಿದ್ದಾರೆ.

ತಮ್ಮ ಪತಿಯನ್ನು ಪಂಜಾಬ್‌ನ ರೋಪಾರ್ ಜೈಲಿನಿಂದ ಉತ್ತರ ಪ್ರದೇಶದ ಬಾಂಡಾ ಜೈಲಿಗೆ ಕರೆದೊಯ್ಯುವ ವೇಳೆ ನಕಲಿ ಎನ್‌ಕೌಂಟರ್ ನೆಪದಲ್ಲಿ ಹತ್ಯೆ ಮಾಡುತ್ತಾರೆ ಎಂಬ ಭಯ ಉಂಟಾಗುತ್ತಿದೆ ಎಂದು ಅಫ್ಸಾನ್ ಪತ್ರದಲ್ಲಿ ತಿಳಿಸಿದ್ದಾರೆ.

ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಬಳಿ ಸಹಾಯ ಕೇಳಿದ ಬಿಜೆಪಿ ಶಾಸಕಿಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಬಳಿ ಸಹಾಯ ಕೇಳಿದ ಬಿಜೆಪಿ ಶಾಸಕಿ

ಮವು ಪ್ರದೇಶದ ಬಿಎಸ್‌ಪಿ ಶಾಸಕರಾಗಿರುವ ಮುಖ್ತಾರ್ ಅನ್ಸಾರಿ ಅವರು ಪ್ರಕರಣದಲ್ಲಿ ಪ್ರತ್ಯಕ್ಷದರ್ಶಿಯಾಗಿದ್ದಾರೆ. ಮತ್ತು ಬಿಜೆಪಿ ಎಂಎಲ್‌ಸಿ ಸರ್ಕಾರದ ಸಂಸ್ಥೆಗಳ ಸಹಾಯ ಪಡೆದು ಅವರನ್ನು ಕೊಲೆ ಮಾಡುವ ಬೆದರಿಕೆ ಹಾಕಿದ್ದಾರೆ ಎಂದು ಆಕೆ ಆರೋಪಿಸಿದ್ದಾರೆ.

ವಿವಿಧ ಅಪರಾಧ ಪ್ರಕರಣಗಳಲ್ಲಿ ನ್ಯಾಯಾಂಗ ಬಂಧನದಲ್ಲಿರುವ ಮುಖ್ತಾರ್ ಅನ್ಸಾರಿಯನ್ನು 2005ರಲ್ಲಿ ಬಿಜೆಪಿ ಶಾಸಕ ಕೃಷ್ಣಾನಂದ ರೈ ಕೊಲೆ ಪ್ರಕರಣದಲ್ಲಿ ಉತ್ತರ ಪ್ರದೇಶ ಜೈಲಿಗೆ ವರ್ಗಾವಣೆ ಮಾಡಬೇಕು ಎಂದು ರೈ ಪತ್ನ ಅಲ್ಕಾ ರೈ ಕಾನೂನು ಹೊರಾಟ ನಡೆಸಿದ್ದರು.

ಶಾಸಕನಿಗೆ ಸೇರಿದ ಅಕ್ರಮ ಕಟ್ಟಡಗಳ ನೆಲಸಮ ಮಾಡಿದ ಯೋಗಿ ಸರ್ಕಾರಶಾಸಕನಿಗೆ ಸೇರಿದ ಅಕ್ರಮ ಕಟ್ಟಡಗಳ ನೆಲಸಮ ಮಾಡಿದ ಯೋಗಿ ಸರ್ಕಾರ

ಇನ್ನು ಎರಡು ವಾರಗಳಲ್ಲಿ ಮುಖ್ತಾರ್ ಅನ್ಸಾರಿಯನ್ನು ಉತ್ತರ ಪ್ರದೇಶದ ಜೈಲಿಗೆ ವರ್ಗಾವಣೆ ಮಾಡುವಂತೆ ಮಾರ್ಚ್ 26ರಂದು ಸುಪ್ರೀಂಕೋರ್ಟ್ ಆದೇಶ ನೀಡಿತ್ತು.

ಕ್ಷಣ ಕ್ಷಣದ ಸುದ್ದಿಗಳಿಗಾಗಿ ಒನ್ ಇಂಡಿಯಾ ಕನ್ನಡ ಟೆಲಿಗ್ರಾಂ ಚಾನಲ್ ಸೇರಿ

English summary
Mukhtar Ansari's wife Afshan has written a letter to President Ram Nath Kovind, seeking adequate security for her husband.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X