• search
  • Live TV
ಲಕ್ನೋ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಅಯೋಧ್ಯಾ ಮೇಲ್ಮನವಿಗೆ ಮುಸ್ಲಿಂ ಸೆಲೆಬ್ರಿಟಿಗಳ ವಿರೋಧ

|

ಲಕ್ನೋ, ನವೆಂಬರ್ 26: ಅಯೋಧ್ಯಾ ರಾಮಜನ್ಮಭೂಮಿ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ತೀರ್ಪನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸುವ ಕೆಲ ಅರ್ಜಿದಾರರ ವಿರುದ್ಧ ಮುಸ್ಲಿಂ ಖ್ಯಾತನಾಮರು ತಗಾದೆ ತೆಗೆದಿದ್ದಾರೆ.

ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ಹಾಗೂ ಇತರೆ ಸಂಘಟನೆಗಳ ನಿರ್ಧಾರಗಳು ಮುಸ್ಲಿಂ ವಿರೋಧಿ ಎಂದು ಶಬಾನಾ ಆಜ್ಮಿ, ನಾಸರುದ್ದಿನ್ ಷಾ, ಅಂಜುಂ ರಾಜಬಾಲಿ, ಜಾವೇದ್ ಆನಂದ್ ಸೇರಿ ನೂರಕ್ಕೂ ಅಧಿಕ ಸೆಲೆಬ್ರಿಟಿಗಳು ಆಗ್ರಹಿಸಿದ್ದಾರೆ.

''ಕೆಲ ಭಾರತೀಯ ಮುಸ್ಲಿಂ ಸಮುದಾಯ ಸಂವಿಧಾನ ತಜ್ಞರು ಜಾತ್ಯತೀತ ಸಂಘಟನೆಗಳ ಮೇಲ್ಮನವಿ ಸಲ್ಲಿಸುವ ನಿರ್ಧಾರಕ್ಕೆ ನಮ್ಮ ಅಸಂತೋಷವಿದೆ, ದೇಶದ ಸರ್ವೋಚ್ಛ ನ್ಯಾಯಾಲಯದ ನಿರ್ಧಾರಕ್ಕೆ ವಿರೋಧ ವ್ಯಕ್ತಪಡಿಸುವುದು ಸರಿಯಲ್ಲ.

ನ್ಯಾಯಾಲಯದ ಆದೇಶವು ಸರಿ ಇಲ್ಲ ಎಂದು ನಮಗೂ ಅನಿಸುತ್ತದೆ ಆದರೆ ಅಯೋಧ್ಯಾ ವಿವಾದವನ್ನು ಮುಂದುವರೆಸುವುದರಿಂದ ನಮಗೇ ನಷ್ಟವಾಗುತ್ತದೆ ಇದರಿಂದ ಭಾರತೀಯ ಮುಸ್ಲಿಮರಿಗೆ ಯಾವುದೇ ನೆರವಾಗುವುದಿಲ್ಲ'' ಎಂದು ಎಚ್ಚರಿಸಿದ್ದಾರೆ.

ಅಯೋಧ್ಯಾ ತೀರ್ಪು ಸಮರ್ಪಕವಾಗಿಲ್ಲ, ಮುಸ್ಲಿಂ ಶರ್ಯತ್ ನಂಬಿಕೆಗೆ ವಿರುದ್ಧವಾಗಿದೆ ಎಂದು ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ಜಮೈತ್-ಉಲ್-ಎ- ಹಿಂದ್ ಹಾಗೂ ಇತರೆ ಕೆಲ ಮುಸ್ಲಿಂ ಮುಖಂಡರು ಸುಪ್ರೀಂಕೋರ್ಟ್ ಆದೇಶ ಪ್ರಶ್ನಿಸಿ ಮೇಲ್ಮನವಿ ಸಲ್ಲಿಸುವುದಾಗಿ ನವೆಂಬರ್ 17ರಂದು ಘೋಷಿಸಿದ್ದರು.

ಅಯೋಧ್ಯಾ ತೀರ್ಪು: ಗಮನಿಸಬೇಕಾದ ಕುತೂಹಲಕಾರಿ 10 ಸಂಗತಿಗಳು

ಈ ನಿರ್ಧಾರಕ್ಕೆ ಮುಸ್ಲಿಂ ಸಮುದಾಯದಿಂದಲೇ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಇದು ರಾಜಕೀಯ ಚರ್ಚೆಗೂ ಕಾರಣವಾಗಿದೆ.ಪ್ರಕರಣ ಪ್ರಮುಖ ಅರ್ಜಿದಾರ ಸುನ್ನಿ ವಕ್ಫ್ ಬೋರ್ಡ್ ಹಾಗೂ ಇಕ್ಬಾಲ್ ಅನ್ಸಾರಿ ಕೂಡ ಮೇಲ್ಮನವಿ ಸಲ್ಲಿಸುವುದಕ್ಕೆ ವಿರೋಧ ವ್ಯಕ್ತಪಡಿಸಿದ್ದರು.

ನೂರಾರು ವರ್ಷಗಳಿಂದ ನಡೆದುಬಂದ ವಿವಾದಕ್ಕೆ ಸುಪ್ರೀಂಕೋರ್ಟ್ ತೆರೆ ಎಳೆದಿದೆ, ಈ ವಿಚಾರವನ್ನು ಇಲ್ಲಿಗೆ ಬಿಡುವುದು ಒಳಿತು ಎಂದು ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿಗೆ ಹಾಗೂ ಇತರ ಮುಖಂಡರಿಗೆ ಮನವಿ ಮಾಡಿದ್ದರು.

English summary
More than 100 Prominent muslims are opposing the decision of reviewing of Ayodhy petition. They warned muslim community that it will create problem for them.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X