ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೀರತ್: ಕೋತಿಗಳ ಕೈಯಲ್ಲಿ ಕೊರೊನಾ ವೈರಸ್ ಶಂಕಿತರ ಭವಿಷ್ಯ!

|
Google Oneindia Kannada News

ಮೀರತ್, ಮೇ.30: ಕೋತಿಗಳು ಹಣ್ಣು-ಹಂಪಲುಗಳನ್ನು ಕಿತ್ತುಕೊಂಡು ಓಡುವುದು ಸರ್ವೇ ಸಾಮಾನ್ಯ. ಆದರೆ ಇದೀಗ ಟ್ರೆಂಡ್ ಚೇಂಜ್ ಆದಂತೆ ಕಾಣುತ್ತಿದೆ. ಕೊರೊನಾ ವೈರಸ್ ಸೋಂಕಿತರ ರಕ್ತ ಮತ್ತು ಗಂಟಲು ಮಾದರಿಯನ್ನು ಸಂಗ್ರಹಿಸಿಟ್ಟಿದ್ದ ಸ್ಯಾಂಪಲ್ ಕಿಟ್ ಗಳನ್ನು ಕೋತಿಗಳ ಟೀಮ್ ಒಂದು ಎತ್ತಿಕೊಂಡು ಓಡಿದೆ.

ಉತ್ತರ ಪ್ರದೇಶದ ಮೀರತ್ ನಲ್ಲಿರುವ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ಇಂಥದೊಂದು ವಿಚಿತ್ರ ಘಟನೆಯು ನಡೆದಿದೆ. ಕೊರೊನಾ ವೈರಸ್ ತಪಾಸಣೆಗೆ ಮಾದರಿ ಸಂಗ್ರಹಿಸಿಕೊಂಡು ತೆರಳುತ್ತಿದ್ದ ಟೆಕ್ನಿಷಿಯನ್ ಮೇಲೆ ಕೋತಿಗಳ ಟೀಮ್ ದಾಳಿ ನಡೆಸಿದೆ.

ಚೀನಾದಲ್ಲಿ ಮಂಗಗಳ ಮೇಲೆ ಕೊವಿಡ್ 19 ಲಸಿಕೆ ಪ್ರಯೋಗ ಯಶಸ್ವಿ ಚೀನಾದಲ್ಲಿ ಮಂಗಗಳ ಮೇಲೆ ಕೊವಿಡ್ 19 ಲಸಿಕೆ ಪ್ರಯೋಗ ಯಶಸ್ವಿ

ಲ್ಯಾಬ್ ಟೆಕ್ನಿಷಿಯನ್ ಕೈಯಲ್ಲಿದ್ದ ಮೂರು ಕೊರೊನಾ ವೈರಸ್ ಸ್ಯಾಂಪಲ್ ಕಿಟ್ ಗಳನ್ನು ಕಿತ್ತುಕೊಂಡು ಕೋತಿಗಳು ಅಲ್ಲಿಂದ ಓಡಿ ಹೋಗಿವೆ. ಬಳಿಕ ವೈದ್ಯರು ಮತ್ತೊಮ್ಮೆ ಮೂವರು ಶಂಕಿತ ಕೊರೊನಾ ವೈರಸ್ ಸೋಂಕಿತರಿಂದ ರಕ್ತ ಮತ್ತು ಗಂಟಲು ದ್ರವ್ಯದ ಮಾದರಿಯನ್ನು ಸಂಗ್ರಹಿಸಿದರು.

ಕೋತಿಗಳಿಂದ ಸುತ್ತಮುತ್ತಲಿನ ಜನರಲ್ಲಿ ಆತಂಕ

ಕೋತಿಗಳಿಂದ ಸುತ್ತಮುತ್ತಲಿನ ಜನರಲ್ಲಿ ಆತಂಕ

ಕೊರೊನಾ ವೈರಸ್ ಸೋಂಕು ತಗಲಿರುವ ಶಂಕೆ ಹಿನ್ನೆಲೆಯಲ್ಲಿ ಸಂಗ್ರಹಿಸಿದ ಸ್ಯಾಂಪಲ್ ಗಳನ್ನು ಕೋತಿಗಳು ಕಿತ್ತುಕೊಂಡು ಹೋಗಿರುವುದರಿಂದ ಸುತ್ತಮುತ್ತಲಿನ ಪ್ರದೇಶದಲ್ಲಿ ಆತಂಕ ಹೆಚ್ಚಾಗಿದೆ. ಒಂದು ವೇಳೆ ಸಂಗ್ರಹಿತ ಮಾದರಿಯಲ್ಲಿ ಕೊರೊನಾ ವೈರಸ್ ಸೋಂಕು ತಗಲಿದ್ದರೆ, ಸುತ್ತಮುತ್ತಲಿದ ಪ್ರದೇಶಗಳಲ್ಲಿನ ಜನರಿಗೂ ಮಹಾಮಾರಿ ಅಂಟಿಕೊಳ್ಳುವ ಅಪಾಯವಿದೆ.

ಕೋತಿಗಳ ಕಿತಾಪತಿ ಫುಲ್ ವೈರಲ್

ನೊವೆಲ್ ಕೊರೊನಾ ವೈರಸ್ ಶಂಕಿತರ ಸ್ಯಾಂಪಲ್ ಸಂಗ್ರಹಿಸಿ ತೆಗೆದುಕೊಂಡು ಹೋಗುತ್ತಿದ್ದ ವೇಳೆಯಲ್ಲಿ ಕಿಟ್ ನ್ನು ಕೋತಿಗಳ ತಂಡವು ಕಿತ್ತುಕೊಂಡು ಓಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.

ಮೀರತ್ ಡಿಸಿಗೆ ಆರೋಗ್ಯಾಧಿಕಾರಿಗಳ ದೂರು

ಮೀರತ್ ಡಿಸಿಗೆ ಆರೋಗ್ಯಾಧಿಕಾರಿಗಳ ದೂರು

ಮೀರತ್ ನಲ್ಲಿ ಕೋತಿಗಳು ನಡೆಸಿರುವ ಕಿತಾಪತಿಯ ಕುರಿತು ಮೆಡಿಕಲ್ ಕಾಲೇಜು ಆಸ್ಪತ್ರೆಯ ಚೀಫ್ ಸೂಪರಿಟೆಂಡೆಂಟ್ ಡಾ.ಧೀರಜ್ ಬಲ್ಯಾನ್ ಆತಂಕ ವ್ಯಕ್ತಪಡಿಸಿದ್ದಾರೆ. ಈ ಘಟನೆ ಬಗ್ಗೆ ತನಿಖೆ ನಡೆಸುವಂತೆ ಜಿಲ್ಲಾಧಿಕಾರಿ ಅನಿಲ್ ಧಿಂಗ್ರಾರಿಗೆ ಮನವಿ ಮಾಡಿಕೊಂಡಿದ್ದಾರೆ.

ಪ್ಲೀಸ್ ಕೋತಿಗಳ ಕಾಟದಿಂದ ನೀಡಿ ಮುಕ್ತಿ!

ಪ್ಲೀಸ್ ಕೋತಿಗಳ ಕಾಟದಿಂದ ನೀಡಿ ಮುಕ್ತಿ!

ಮೀರತ್ ಮೆಡಿಕಲ್ ಕಾಲೇಜು ಆಸ್ಪತ್ರೆಯ ಸುತ್ತಮುತ್ತಲಿನಲ್ಲಿ ಕೋತಿಗಳ ಹಾವಳಿಯು ಇಂದು ನಿನ್ನೆಯದ್ದಲ್ಲ. ಈ ಮಂಗಗಳ ಕಾಟದಿಂದ ಸಾರ್ವಜನಿಕರು ಮತ್ತು ಆಸ್ಪತ್ರೆಯ ಸಿಬ್ಬಂದಿ ಸಹ ಆತಂಕದಲ್ಲೇ ಓಡಾಡುವಂತಾ ಪರಿಸ್ಥಿತಿ ನಿರ್ಮಾಣವಾಗಿ ಬಿಟ್ಟಿದೆ. ಹೀಗಾಗಿ ಆದಷ್ಟು ಬೇಗ ಕೋತಿಗಳನ್ನು ಸೆರೆ ಹಿಡಿಯಬೇಕು ಎಂದು ಅರಣ್ಯ ಇಲಾಖೆಯವರಿಗೂ ದೂರು ನೀಡಲಾಗಿದೆ.

English summary
Monkeys Snatched Samples Of Suspected Coronavirus Patients In Meerut.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X