ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಾವಿನ ಹಣ್ಣಿನ ತೂಕ 450 ಗ್ರಾಂ: ಇದರ ಹೆಸರು 'ಮೋದಿ ಮಾವು'!

|
Google Oneindia Kannada News

ಲಕ್ನೋ, ಜೂನ್ 24: ಹಣ್ಣುಗಳ ರಾಜ ಎಂದೇ ಕರೆಯಲಾಗುವ ಮಾವಿನ ಹಣ್ಣಿನ ಅವಧಿ ಇನ್ನೇನು ಮುಗಿಯುವ ಹಂತಕ್ಕೆ ತಲುಪಿದೆ. ಸುಮಾರು 700 ತಳಿಯ ಮಾವಿನ ಹಣ್ಣುಗಳಿವೆ. ಒಂದೊಂದು ತಳಿಯ ಹಣ್ಣುಗಳಲ್ಲಿಯೂ ಒಂದೊಂದು ರುಚಿ, ಗುಣ. ಆದರೆ, ಲಕ್ನೋದಲ್ಲಿ ನಡೆಯುತ್ತಿರುವ ಮಾವಿನ ಹಣ್ಣಿನ ಮೇಳದಲ್ಲಿ ಹೊಸ ಬಗೆಯ ಮಾವಿನ ಹಣ್ಣು ಎಲ್ಲರ ಗಮನ ಸೆಳೆಯುತ್ತಿದೆ.

ಹೆಚ್ಚಿನ ಮಾವಿನ ಹಣ್ಣುಗಳ ಅದರ ಸ್ವಾದ, ಆಕಾರ ಮುಂತಾದ ಕಾರಣಕ್ಕೆ ವಿಭಿನ್ನ ಹೆಸರು ಪಡೆದುಕೊಂಡಿವೆ. ಆದರೆ, ಈ ಹಣ್ಣು ರಾಜಕೀಯ ತೋಪಿನಿಂದ ಬಂದಿರಬೇಕು. ಅದಕ್ಕಾಗಿ ರಾಜಕೀಯದ ಹೆಸರನ್ನೇ ಪಡೆದುಕೊಂಡಿದೆ.

ಮೋದಿಗೆ ಪ್ರಿಯವಾದ ಹಣ್ಣು ಯಾವುದು ಗೊತ್ತಾ? ಮೋದಿಗೆ ಪ್ರಿಯವಾದ ಹಣ್ಣು ಯಾವುದು ಗೊತ್ತಾ?

ಈ ತಳಿಯ ಒಂದು ಹಣ್ಣಿನ ತೂಕ ಸುಮಾರು 450 ಗ್ರಾಂ. ಈ ದೊಡ್ಡ ಗಾತ್ರದ ಮಾವಿನ ಹಣ್ಣಿನ ಹೆಸರು, 'ಮೋದಿ ಮ್ಯಾಂಗೋ!'

 Modi Mango lucknow mango festival 450 grams

'ಮೋದಿಜಿ ಅವರಂತೆಯೇ ಮೋದಿ ಮಾವು ಕೂಡ ಬಲು ಜನಪ್ರಿಯತೆ ಪಡೆದುಕೊಂಡಿದೆ. ಪ್ರಧಾನಿಯವರ 56 ಇಂಚಿನ ಎದೆಯಂತೆಯೇ ಈ ಮಾವಿನ ಹಣ್ಣಿನ ಗಾತ್ರ ಕೂಡ ತುಂಬಾ ವಿಶಿಷ್ಟವಾದುದು. ಈ ಕಾರಣಕ್ಕಾಗಿಯೇ ಅದಕ್ಕೆ 'ಮೋದಿ ಮಾವು' ಎಂದು ಹೆಸರಿಸಲಾಗಿದೆ' ಎಂದು ಮ್ಯಾಂಗೋ ಸಮಿತಿಯ ಪ್ರಧಾನ ಕಾರ್ಯದರ್ಶಿ ಉಪೇಂದ್ರ ಕುಮಾರ್ ಸಿಂಗ್ ಹೇಳಿದ್ದಾರೆ.

ಈ ಮಾವಿನಹಣ್ಣಿನ ಹೆಸರನ್ನು ದಾಖಲಿಸಲಾಗುತ್ತದೆ ಮತ್ತು ಪೇಟೆಂಟ್ ಸಹ ಪಡೆಯಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ.

ಮೋದಿ, ಐಶ್ವರ್ಯಾ ರೈ, ಸಚಿನ್ ಸಾಲಿಗೆ ಸೇರಿದ ಅಮಿತ್ ಶಾಮೋದಿ, ಐಶ್ವರ್ಯಾ ರೈ, ಸಚಿನ್ ಸಾಲಿಗೆ ಸೇರಿದ ಅಮಿತ್ ಶಾ

ರಸಪುರಿ, ಸಿಂಧೂರ, ಆಲ್ಫಾನ್ಸೋ, ಮಲ್ಲಿಕಾ, ತೋತಾಪುರಿ, ಮಲಗೋವಾ, ದಾಶೇರಿ, ನೀಲಂ, ಬಾದಾಮಿ, ಲ್ಯಾಂಗ್ರಾ, ಚೌಸಾ ಹೀಗೆ 700ಕ್ಕೂ ಅಧಿಕ ಬಗೆಯ ಮಾವಿನ ಹಣ್ಣುಗಳ ಪಟ್ಟಿಯಲ್ಲಿ 'ಮೋದಿ ಮಾವು' ಕೂಡ ಸೇರಿಕೊಂಡಿದೆ.

ಇತ್ತೀಚೆಗೆ ನಟ ಅಕ್ಷಯ್ ಕುಮಾರ್ ಅವರು ನಡೆಸಿದ ಸಂದರ್ಶನದಲ್ಲಿ ಪ್ರಧಾನಿ ಮೋದಿ ಅವರು ತಮಗೆ ಮಾವಿನ ಹಣ್ಣುಗಳ ಕುರಿತ ಪ್ರೀತಿಯನ್ನು ಹಂಚಿಕೊಂಡಿದ್ದರು.

ಅಂಬಿಗೆ ನಾಟಿ ಕೋಳಿ ಸಾರಷ್ಟೇ ಅಲ್ಲ, ಮಾವಿನ ಹಣ್ಣೆಂದರೂ ಬಲು ಇಷ್ಟಅಂಬಿಗೆ ನಾಟಿ ಕೋಳಿ ಸಾರಷ್ಟೇ ಅಲ್ಲ, ಮಾವಿನ ಹಣ್ಣೆಂದರೂ ಬಲು ಇಷ್ಟ

'ನಾನು ಚಿಕ್ಕವನಿದ್ದಾಗ ಮಾವಿನ ತೋಟಗಳಿಗೆ ಹೋಗಿ ಮರ ಮೇಲೆಯೇ ಕುಳಿತು ಮಾವಿನ ಹಣ್ಣುಗಳನ್ನು ಕಿತ್ತು ತಿನ್ನುತ್ತಿದ್ದೆ. ಆಗ ಯಾವ ರೈತರೂ ನಮ್ಮನ್ನು ತಡೆಯುತ್ತಿರಲಿಲ್ಲ. ಈ ರೀತಿ ತಿನ್ನುವುದು ನನಗೆ ಹೆಚ್ಚು ಇಷ್ಟವಾಗುತ್ತಿತ್ತು' ಎಂದು ಮೋದಿ ಹೇಳಿದ್ದರು.

English summary
A variety of mango named 'Modi Mango' with about 450 grams exhibited in Lucknow fruits festival.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X