• search
  • Live TV
ಲಕ್ನೋ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಕೊರೊನಾ ಸೋಂಕಿತರ ಶವವನ್ನು ಉಚಿತವಾಗಿ ಸ್ಮಶಾನಕ್ಕೆ ಕೊಂಡೊಯ್ಯುವ ಮಹಿಳೆ

|

ಲಕ್ನೋ, ಏಪ್ರಿಲ್ 22: ಲಕ್ನೋದ ರಾಮ್ ಮನೋಹರ್ ಲೋಹಿಯಾ ಆಸ್ಪತ್ರೆಯ ಮುಂಭಾಗ ಪಿಪಿಇ ಕಿಟ್ ಧರಿಸಿ ನಿಂತಿರುವ ಮಹಿಳೆ ಹೆಸರು ವರ್ಷಾ ವರ್ಮಾ.

ಇವರು ಕೊರೊನಾ ಸೋಂಕಿತರ ಶವವನ್ನು ಉಚಿತವಾಗಿ ಸ್ಮಶಾನಕ್ಕೆ ಕೊಂಡೊಯ್ಯುವ ಸೇವೆಯಲ್ಲಿ ನಿರತರಾಗಿದ್ದು, ಈವರ ಈ ಕಾರ್ಯಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಪ್ರಶಂಸೆ ವ್ಯಕ್ತವಾಗಿದೆ.

ಭಾರತದಲ್ಲಿ 13.22 ಕೋಟಿ ಫಲಾನುಭವಿಗಳಿಗೆ ಉಚಿತ ಕೊರೊನಾ ಲಸಿಕೆಭಾರತದಲ್ಲಿ 13.22 ಕೋಟಿ ಫಲಾನುಭವಿಗಳಿಗೆ ಉಚಿತ ಕೊರೊನಾ ಲಸಿಕೆ

ನಿತ್ಯ ಹಲವು ಕೊರೊನಾ ಸೋಂಕಿತರು ಸಾವನ್ನಪ್ಪುತ್ತಿದ್ದು, ಒಮ್ಮೆ ಲೋಹಿಯಾದಿಂದ ಕೆಜಿಎಂಯು, ಮತ್ತೊಮ್ಮೆ ವೈಕುಂಠಧಾಮ, ಇನ್ನೊಮ್ಮೆ ಗುಲಾಲಾ ಘಾಟ್, ಕಕೋರಿ, ಮಲೀಹಾಬಾದ್‌ನಿಂದ ಮೋಹನ್‌ಲಾಲ್‌ಗಂಜ್‌ಗೆ ತೆರಳಬೇಕಾಗುತ್ತದೆ.

ಕೊರೊನಾ ಎರಡನೇ ಅಲೆಯಲ್ಲಿ ಕೊರೊನಾ ಸೋಂಕಿತರು ಹೆಚ್ಚು ಮಂದು ಸಾವನ್ನಪ್ಪುತ್ತಿದ್ದಾರೆ, ಕೇವಲ ಉಚಿತವಾಗಿ ಶವವನ್ನು ಸ್ಮಶಾನಕ್ಕೆ ತೆಗೆದುಕೊಂಡು ಹೋಗುವುದಲ್ಲದೆ ಕೊರೊನಾ ಸೋಂಕಿನಿಂದ ಮೃತಪಟ್ಟವರ ಸಂಬಂಧಿಯನ್ನು ಚಿತಾಗಾರದ ಬಳಿ ಕರೆದುಕೊಂಡು ಹೋಗಿ ಕೊನೆಯದಾಗಿ ಮುಖದ ದರ್ಶನ ಮಾಡಿಸುತ್ತಿದ್ದಾರೆ.

ಕಳೆದ ಕೆಲ ದಿನಗಳ ಹಿಂದೆ ವರ್ಷಾ ಅವರ ಸ್ನೇಹಿತರೊಬ್ಬರು ಮೃತಪಟ್ಟಿದ್ದರು, ಆಗ ಆಸ್ಪತ್ರೆಯಿಂದ ಶವ ಸಾಗಿಸಲು ವಾಹನವಿಲ್ಲದೆ ಪರದಾಡುವಂತಾಯಿತು, ಅಂದು ಆ ಕಷ್ಟವನ್ನು ಅರಿತ ವರ್ಷ ಅದೇ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.

ಹಲವು ವಾಹನಗಳ ಚಾಲಕರು ದುಬಾರಿ ಹಣವನ್ನು ಕೇಳುತ್ತಿದ್ದು, ಸಾವಿನ ನೋವಿನ ಜತೆಗೆ ಇದೊಂದು ಸಂಕಷ್ಟವೇ ಸರಿ. ಆ ದಿನದಿಂದ ಇಲ್ಲಿಯವರೆಗೂ ಸ್ಮಶಾನದ ಬಳಿ ಶವವನ್ನು ಉಚಿತವಾಗಿ ತೆಗೆದುಕೊಂಡು ಹೋಗುತ್ತಿದ್ದಾರೆ.

ಈ ಸೇವೆ ಆರಂಭಿಸಿ ಐದು ದಿನಗಳು ಕಳೆದಿವೆ. ಅವರು ಕಾರು ಅರೇಂಜ್ ಮಾಡಿ ಅದಕ್ಕೊಬ್ಬ ಚಾಲಕರನ್ನು ನೇಮಿಸಿದ್ದಾರೆ.ಯಾರೇ ಕರೆ ಮಾಡಿದರೂ ಅವರಿಗೆ ಸಹಾಯ ಮಾಡುತ್ತಾರೆ. ಇದುವರೆಗೆ ಅವರು ಆಸ್ಪತ್ರೆಯಿಂದ ಸ್ಮಶಾನಕ್ಕೆ ತೆರಳಿರುವ ಟ್ರಿಪ್‌ಗಳ ಸಂಖ್ಯೆ ಎಣಿಕೆಗೆ ನಿಲುಕದ್ದು.

English summary
Outside the Ram Manohar Lohia hospital Lucknow, a woman wearing a PPE kit is seen providing free carriage service for bodies of covid19 victims these days.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X