ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯುಪಿ ಚುನಾವಣೆಯತ್ತ ಮಾಯಾವತಿ ಚಿತ್ತ: ಬಿಎಸ್‌ಪಿಯಿಂದ ಬ್ರಾಹ್ಮಣ ಸಮ್ಮೇಳನ

|
Google Oneindia Kannada News

ಲಕ್ನೋ, ಜು.23: ಮಾಯಾವತಿ ನೇತೃತ್ವದ ಬಹುಜನ ಸಮಾಜ ಪಕ್ಷವು ಮುಂದಿನ ವರ್ಷ ರಾಜ್ಯದಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯ ಮೇಲೆ ಕಣ್ಣಿಟ್ಟು ಉತ್ತರಪ್ರದೇಶದಲ್ಲಿ ಸಮುದಾಯವನ್ನು ಗುರಿಯಾಗಿಟ್ಟುಕೊಂಡಿದೆ. ಬಹುಜನ ಸಮಾಜ ಪಕ್ಷವು ಬ್ರಾಹ್ಮಣ ಸಮ್ಮೇಳನ ಕಾರ್ಯಕ್ರಮವನ್ನು ಅಯೋಧ್ಯೆಯಲ್ಲಿ ನಡೆಸಲು ಶುಕ್ರವಾರ ಸಜ್ಜಾಗಿದೆ.

ಈ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ್ದ ಬಿಎಸ್‌ಪಿ ಮುಖ್ಯಸ್ಥೆ ಮಾಯಾವತಿ ಈ ಕಾರ್ಯಕ್ರಮವನ್ನು ಘೋಷಿಸಿದ್ದಾರೆ. 2022 ರಲ್ಲಿ ನಡೆಯಲಿರುವ ರಾಜ್ಯ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ (ಬಿಜೆಪಿ) ಬದಲಿಗೆ ಯುಪಿಯಲ್ಲಿರುವ ಬ್ರಾಹ್ಮಣರು ತಮ್ಮ ಪಕ್ಷಕ್ಕೆ ಮತ ಚಲಾಯಿಸುತ್ತಾರೆ ಎಂದು ಭರವಸೆ ಹೊಂದಿರುವುದಾಗಿ ಮಾಯಾವತಿ ಹೇಳಿದ್ದಾರೆ.

ಇನ್ನು ಉತ್ತರಪ್ರದೇಶದತ್ತ: ಬಿಎಸ್‌ಪಿಯಲ್ಲಿ ಜಾತವ ಸಮುದಾಯದ ನಾಯಕತ್ವದ ಇತಿಹಾಸ ಇಲ್ಲಿದೆಇನ್ನು ಉತ್ತರಪ್ರದೇಶದತ್ತ: ಬಿಎಸ್‌ಪಿಯಲ್ಲಿ ಜಾತವ ಸಮುದಾಯದ ನಾಯಕತ್ವದ ಇತಿಹಾಸ ಇಲ್ಲಿದೆ

ಕಳೆದ ಭಾನುವಾರ ಲಖನೌದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾಯಾವತಿ ಮಾತನಾಡಿ, ಜುಲೈ 23 ರಂದು ಅಯೋಧ್ಯೆಯಲ್ಲಿ ಬಿಎಸ್‌ಪಿ ಬ್ರಾಹ್ಮಣ ಸಮ್ಮೇಳನ ನಡೆಸಲಿದೆ. "ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಬ್ರಾಹ್ಮಣರು ಬಿಜೆಪಿಗೆ ಮತ ಚಲಾಯಿಸುವುದಿಲ್ಲ ಎಂದು ನಾನು ತುಂಬಾ ಭರವಸೆ ಹೊಂದಿದ್ದೇನೆ," ಎಂದು ತಿಳಿಸಿದ್ದಾರೆ.

 Mayawatis BSP holds Brahmin outreach event with an eye on 2022 UP polls

ನಿರೀಕ್ಷಿತ ಬಿಎಸ್‌ಪಿ ಆಡಳಿತದಲ್ಲಿ ಬ್ರಾಹ್ಮಣ ಸಮುದಾಯಕ್ಕೆ ಅವರ ಹಿತಾಸಕ್ತಿಗಳು ಸುರಕ್ಷಿತವಾಗಿರುತ್ತವೆ ಎಂದು ಭರವಸೆ ನೀಡುವ ಅಭಿಯಾನವನ್ನು ಪ್ರಾರಂಭಿಸಲಾಗುವುದು ಎಂದು ಮಾಯಾವತಿ ಹೇಳಿದ್ದಾರೆ.

ನಗರದ ರಾಮ್ ಲಲ್ಲಾ ತಾತ್ಕಾಲಿಕ ದೇವಾಲಯದಲ್ಲಿ ಬಿಎಸ್‌ಪಿ ಪ್ರಧಾನ ಕಾರ್ಯದರ್ಶಿ ಸತೀಶ್ ಚಂದ್ರ ಮಿಶ್ರಾ ಪ್ರಾರ್ಥನೆ ಸಲ್ಲಿಸಿದ ನಂತರ ಶುಕ್ರವಾರ ಬ್ರಾಹ್ಮಣ ಸಮ್ಮೇಳನ ಕಾರ್ಯಕ್ರಮಗಳ ಸರಣಿಯನ್ನು ಅಯೋಧ್ಯೆಯಲ್ಲಿ ಪ್ರಾರಂಭಿಸಲಾಗುವುದು ಎಂದು ಸುದ್ದಿ ಸಂಸ್ಥೆ ಪಿಟಿಐ ವಾರದ ಆರಂಭದಲ್ಲಿ ವರದಿ ಮಾಡಿದೆ.

ಸಣ್ಣ ಪಕ್ಷಗಳೊಂದಿಗೆ ಎಸ್‌ಪಿ ಮೈತ್ರಿ, ಇದು ಅಸಹಾಯಕತೆಯಲ್ಲದೇ ಮತ್ತೇನು ಎಂದ ಮಾಯಾವತಿಸಣ್ಣ ಪಕ್ಷಗಳೊಂದಿಗೆ ಎಸ್‌ಪಿ ಮೈತ್ರಿ, ಇದು ಅಸಹಾಯಕತೆಯಲ್ಲದೇ ಮತ್ತೇನು ಎಂದ ಮಾಯಾವತಿ

"ಮೊದಲನೆಯದಾಗಿ, ಹನುಮಂಗಾರ್ಹಿ (ಅಯೋಧ್ಯೆಯಲ್ಲಿ) ನಲ್ಲಿ ನಾವು ಹನುಮ ಭಗವಾನ್ ದರ್ಶನ ಪಡೆಯುತ್ತೇವೆ. ಇದರ ನಂತರ ರಾಮ ಲಲ್ಲಾ ದರ್ಶನ ನಡೆಯಲಿದೆ, ನಂತರ ಅಭಿಯಾನವು ಪ್ರಾರಂಭವಾಗುತ್ತದೆ," ಎಂದು ತಿಳಿಸಿದೆ. ಇನ್ನು ಸಮ್ಮೇಳನದಲ್ಲಿ ಮಾತನಾಡಿದ ಸತೀಶ್ ಚಂದ್ರ ಮಿಶ್ರಾ, ನಾವು ಅಧಿಕಾರಕ್ಕೆ ಬಂದರೆ ರಾಮ ಮಂದಿರ ಕಟ್ಟುತ್ತೇವೆ ಎಂದು ಭರವಸೆ ನೀಡಿದ್ದಾರೆ.

ಕಳೆದ ಯುಪಿ ವಿಧಾನಸಭಾ ಚುನಾವಣೆಯಲ್ಲಿ "ಮೇಲ್ಜಾತಿಗಳು" ಬಿಜೆಪಿಗೆ ಮತ ಚಲಾಯಿಸಿ ಈಗ ಪಶ್ಚಾತ್ತಾಪ ಪಡುತ್ತಿವೆ ಎಂದು ಮಾಯಾವತಿ ಹಲವಾರು ಸಂದರ್ಭಗಳಲ್ಲಿ ಹೇಳಿದ್ದಾರೆ. ಈಗ ಬಹುಜನ ಸಮಾಜ ಪಕ್ಷದ ಮೇಲೆ ಬ್ರಾಹ್ಮಣರು ನಂಬಿಕೆ ಇಟ್ಟಿದ್ದಾರೆ ಎಂದು ಕೂಡಾ ಹೇಳಿದ್ದಾರೆ.

ಇನ್ನೊಂದೆಡೆ ಬ್ರಾಹ್ಮಣ ಸಮ್ಮೇಳನ ಆಯೋಜಿಸಿರುವ ಬಿಎಸ್‌ಪಿ ಅವಕಾಶವಾದಿ ರಾಜಕಾರಣ ಮಾಡುತ್ತಿದೆ ಎಂದು ಬಿಜೆಪಿ ಆರೋಪಿಸಿದೆ. ಅಭಿವೃದ್ಧಿಯಲ್ಲಿ ನಂಬಿಕೆ ಇರುವುದರಿಂದ ಬ್ರಾಹ್ಮಣ ಸಮುದಾಯ ಬಿಎಸ್‌ಪಿ ಬಲೆಗೆ ಬೀಳಲ್ಲ ಎಂದು ಉತ್ತರ ಪ್ರದೇಶದ ಬಿಜೆಪಿ ಶಾಸಕ ರವಿ ಕಿಶನ್ ಸೋಮವಾರ ಹೇಳಿದ್ದಾರೆ. "ಒಬ್ಬ ಬ್ರಾಹ್ಮಣ ಜ್ಞಾನಕ್ಕೆ ಹೆಸರುವಾಸಿಯಾಗಿದ್ದಾನೆ ಮತ್ತು ದುರಾಶೆಗಾಗಿ ಅಲ್ಲ. ಬ್ರಾಹ್ಮಣ ಸಮುದಾಯವನ್ನು ಕೆಟ್ಟ ದಾರಿಗೆ ಎಳೆಯದಂತೆ ಮಾಯಾವತಿ ಜಿ ಮತ್ತು ಅಖಿಲೇಶ್ ಜಿಯನ್ನು ನಾನು ಒತ್ತಾಯಿಸುತ್ತೇನೆ," ಎಂದಿದ್ದಾರೆ.

ಇನ್ನು ಜಾತಿಯ ಆಧಾರದ ಮೇಲೆ ರಾಜಕೀಯ ಪಕ್ಷಗಳು rally ಮತ್ತು ಕಾರ್ಯಕ್ರಮಗಳನ್ನು ನಡೆಸುವುದನ್ನು ಹೈಕೋರ್ಟ್ ನಿಷೇಧಿಸಿದ ನಂತರ ಬ್ರಾಹ್ಮಣ ಸಮ್ಮೇಳನವನ್ನು ಪ್ರಬುದ್ಧ ವರ್ಗದ ಗೌರವಾರ್ಥ ಸೆಮಿನಾರ್ ಎಂದು ಮರುನಾಮಕರಣ ಮಾಡಲಾಗಿದೆ.

(ಒನ್‌ಇಂಡಿಯಾ ಸುದ್ದಿ)

English summary
Mayawati's BSP holds Brahmin outreach event with an eye on 2022 UP polls. Read on.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X