ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉ.ಪ್ರ ಚುನಾವಣೆ: ಯಾವ ಪಕ್ಷದೊಂದಿಗೂ ಮೈತ್ರಿ ಇಲ್ಲ ಎಂದ ಮಾಯಾವತಿ

|
Google Oneindia Kannada News

ಲಕ್ನೋ, ನವೆಂಬರ್ 11: ಮುಂಬರುವ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಬಹುಜನ ಸಮಾಜವಾದಿ ಪಕ್ಷ(ಬಿಎಸ್‌ಪಿ) ಯಾವ ಪಕ್ಷದೊಂದಿಗೂ ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂದು ಬಿಎಸ್‌ಪಿ ಮುಖ್ಯಸ್ಥೆ ಮಾಯಾವತಿ ತಿಳಿಸಿದ್ದಾರೆ.

ನಮಗೆ ಯಾವುದೇ ಪಕ್ಷದ ನೆರವು ಬೇಕಿಲ್ಲ, ನಾವು ಸಮಾಜದ ಎಲ್ಲಾ ವಿಭಾಗದ ಜನತೆಯೊಂದಿಗೆ ಮೈತ್ರಿ ಮಾಡಿಕೊಳ್ಳುತ್ತೇವೆ. ಅದು ಶಾಶ್ವತ ಮೈತ್ರಿ. ಈ ಮೈತ್ರಿಯೊಂದಿಗೇ ನಾವು 2007ರಂತೆಯೇ ಈ ಬಾರಿಯೂ ಬಹುಮತದೊಂದಿಗೆ ಗೆಲ್ಲುತ್ತೇವೆ ಎಂದು ಅವರು ಹೇಳಿದ್ದಾರೆ.

ರಾಜ್ಯಗಳ ಚುನಾವಣೆ ಬಳಿಕ ಮತ್ತೆ ಇಂಧನ ದರ ಏರಲಿದೆ: ಮಾಯಾವತಿರಾಜ್ಯಗಳ ಚುನಾವಣೆ ಬಳಿಕ ಮತ್ತೆ ಇಂಧನ ದರ ಏರಲಿದೆ: ಮಾಯಾವತಿ

ಇದೇ ವೇಳೆ ಬಿಜೆಪಿ, ಕಾಂಗ್ರೆಸ್ ಮತ್ತು ಸಮಾಜವಾದಿ ಪಕ್ಷದ ವಿರುದ್ಧವೂ ಹರಿಹಾಯ್ದಿದ್ದಾರೆ. ಮತ್ತೊಂದೆಡೆ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಅವರ ವಿರುದ್ಧ ಮತ್ತೆ ಗುಡುಗಿದ್ದಾರೆ.

Mayawati Rules Out Alliance With Any Party For 2022 UP Polls

ಲಖಿಂಪುರ್ ಖೇರಿ ಪ್ರಕರಣದಲ್ಲಿ ಹೈಕೋರ್ಟ್‌ಗಳ ನಿವೃತ್ತ ನ್ಯಾಯಾಧೀಶರಿಂದ ವಿಚಾರಣೆ ನಡೆಸಲು ಸುಪ್ರೀಂ ನೀಡಿರುವ ಆದೇಶದ ಬಗ್ಗೆ ಮಾತನಾಡಿರುವ ಅಖಿಲೇಶ್ ಸುಪ್ರೀಂಕೋರ್ಟ್‌ಗೆಬಿಜೆಪಿ ಬಗ್ಗೆ ನಂಬಿಕೆ ಇಲ್ಲ. ದೆಹಲಿ, ಲಕ್ನೋ ಹಾಗೂ ಲಖಿಂಪುರ ಖೇರಿಯ ಬಿಜೆಪಿ ಇಂಜಿನ್‌ಗಳು ಸೇರಿಕೊಂಡು ನ್ಯಾಯಾಂಗವನ್ನೇ ಹಾಳುಮಾಡಲು ಯತ್ನಿಸುತ್ತಿವೆ ಎಂದರು.

ದಲಿತ-ಹಿಂದುಳಿದ ವರ್ಗಗಗಳು ಸಮಾಜವಾದಿ ಪಕ್ಷದಿಂದ ಏನನ್ನೂ ನಿರೀಕ್ಷಿಸಬಾರದು: ದಲಿತರು ಹಾಗೂ ಹಿಂದುಳಿದ ವರ್ಗಗಳಲ್ಲಿ ಹುಟ್ಟಿದ ಮಹಾನ್ ನಾಯಕರನ್ನು ಸಮಾಜವಾದಿ ಪಕ್ಷವು ಅವಹೇಳನ ಮಾಡಿದೆ ಎಂದು ಮಾಯಾವತಿ ಈ ಹಿಂದೆ ಆರೋಪಿಸಿದ್ದರು.

ಈ ವರ್ಗಗಳ ಜನರು ಅಖಿಲೇಶ್ ಯಾದವ್ ಅವರ ಪಕ್ಷದಿಂದ ಏನ್ನನೂ ನಿರೀಕ್ಷಿಸಬಾರದು ಎಂದು ಹೇಳಿದ್ದರು. ಜಾತಿಯ ದ್ವೇಷ ರಾಜಕಾರಣದಿಂದ ರಾಜ್ಯದಲ್ಲಿ ಅನೇಕ ಸಂಸ್ಥೆಗಳು ಹಾಗೂ ಯೋಜನೆಗಳ ಹೆಸರನ್ನು ಬದಲಿಸಲಾಗಿದೆ ಎಂದಿದ್ದರು. ದಲಿತರು ಹಾಗೂ ಹಿಂದುಳಿದ ವರ್ಗಗಳಲ್ಲಿ ಹುಟ್ಟಿದ ಮಹಾನ್ ಸಂತರು, ಗುರುಗಳು ಹಾಗೂ ಮಹಾಪುರುಷರನ್ನು ಎಸ್‌ಪಿ ಮೊದಲಿನಿಂದಲೂ ಅವಹೇಳನ ಮಾಡುತ್ತಿದೆ.

ಫೈಜಾಬಾದ್‌ ಜಿಲ್ಲೆಯ ಹೊರಗೆ ರಚಿಸಲಾದ ಹೊಸ ಅಂಬೇಡ್ಕರ್ ನಗರ ಜಿಲ್ಲೆಯು ತಾಜಾ ಉದಾಹರಣೆ. ಸಂತ ರವಿದಾಸ ನಗರದಿಂದ ಭದೋಹಿ ಎಂಬ ಹೊಸ ಜಿಲ್ಲೆಯನ್ನು ರಚಿಸುವುದನ್ನು ಅವರು ವಿರೋಧಿಸಿದರು ಹಾಗೂ ಅದರ ಹೆಸರನ್ನೂ ಬದಲಿಸಿದರು ಎಂದು ಹೇಳಿದ್ದಾರೆ.

ರಾಜ್ಯಗಳ ಚುನಾವಣೆ ಮುಗಿದ ಬಳಿಕ ಇಂಧನ ದರ ಮತ್ತೆ ಏರಿಕೆ: ಹಲವು ರಾಜ್ಯಗಳಲ್ಲಿ ವಿಧಾನಸಭೆ ಚುನಾವಣೆಯಲ್ಲಿ ಸೋಲುವ ಭೀತಿಯಿಂದ ಕೇಂದ್ರ ಸರ್ಕಾರವು ಪೆಟ್ರೋಲ್, ಡೀಸೆಲ್ ಬೆಲೆ ಇಳಿಕೆ ಮಾಡಿವೆ. ಚುನಾವಣೆಗಳು ಮುಗಿಯುತ್ತಿದ್ದಂತೆ ಈ ಪಕ್ಷವು ಬೆಲೆ ಇಳಿಕೆ ನಿರ್ಧಾರವನ್ನು ಹಿಂಪಡೆಯಲಿದೆ. ಜನರು ಇದನ್ನು ನೆನಪಿನಲ್ಲಿಟ್ಟುಕೊಳ್ಳಬೇಕು ಎಂದು ಹೇಳಿದ್ದಾರೆ.

ಮಾಯಾವತಿಗೆ ಪರ್ಯಾಯವಾಗಿ ದಲಿತ ನಾಯಕಿಯನ್ನು ಹುಡುಕಿದ ಬಿಜೆಪಿಮಾಯಾವತಿಗೆ ಪರ್ಯಾಯವಾಗಿ ದಲಿತ ನಾಯಕಿಯನ್ನು ಹುಡುಕಿದ ಬಿಜೆಪಿ

ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯು ಕಳೆದ ಕೆಲವು ದಿನಗಳಿಂದ ದಾಖಲೆ ಮಟ್ಟಕ್ಕೆ ಏರಿಕೆಯಾದ ರೀತಿ ಹಾಗೂ ದೇಶದಲ್ಲಿ ಹಣದುಬ್ಬರ ಹೆಚ್ಚಾಗುತ್ತಿರುವ ಬಗೆಯನ್ನು ಜನರು ಅಷ್ಟು ಸುಲಭವಾಗಿ ಮರೆಯುವುದಿಲ್ಲ ಎಂದರು.

2022ರಲ್ಲಿ ಮಣಿಪುರ, ಗೋವಾ, ಉತ್ತರ ಪ್ರದೇಶ, ಉತ್ತರಾಖಂಡ, ಹಿಮಾಚಲಪ್ರದೇಶ ಹಾಗೂ ಗುಜರಾತ್ ವಿಧಾನಸಭೆ ಚುನಾವಣೆ ನಡೆಯಲಿದೆ.

403 ಸದಸ್ಯ ಬಲದ ಉತ್ತರ ಪ್ರದೇಶ ವಿಧಾನಸಭೆಗೆ 2017ರಲ್ಲಿ ನಡೆದ ಚುನಾವಣೆಯಲ್ಲಿ ಶೇ.39.67ರಷ್ಟು ಮತಗಳನ್ನು ಪಡೆದುಕೊಂಡಿದ್ದ ಬಿಜೆಪಿ, ಬರೋಬ್ಬರಿ 312 ಸ್ಥಾನಗಳನ್ನು ಗೆದ್ದು ಅಧಿಕಾರದ ಗದ್ದುಗೆ ಏರಿತ್ತು.

ಸದ್ಯ ಯಾವೆಲ್ಲಾ ಉತ್ಪನ್ನಗಳ ಬೆಲೆ ಇಳಿಕೆ ಮಾಡಲಾಗಿದೆಯೋ ಅವು, ವಿವಿಧ ರಾಜ್ಯಗಳಲ್ಲಿ ಮುಂಬರುವ ವಿಧಾನಸಭೆ ಚುನಾವಣೆಗಳು ಮುಗಿಯುತ್ತಿದ್ದಂತೆಯೇ ಮತ್ತೆ ಏರಿಕೆಯಾಗಲಿವೆ ಎಂದು ಹೇಳಿದರು.

ಇನ್ನೂ ಕಸ್‌ಗಂಜ್ ಜಿಲ್ಲೆಯಲ್ಲಿ ಪೊಲೀಸ್ ವಶದಲ್ಲಿದ್ದ ವ್ಯಕ್ತಿಯ ಸಾವಿನ ಕುರಿತು ಉನ್ನತ ಮಟ್ಟದ ತನಿಖೆ ನಡೆಸಬೇಕು ಎಂದೂ ಕೂಡ ಮಾಯಾವತಿ ಹೇಳಿದ್ದಾರೆ.

English summary
Ahead of the 2022 Uttar Pradesh polls, Bahujan Samaj Party chief Mayawati on Tuesday said that the BSP will not enter into an alliance with any political party and will get an absolute majority just like they did in the 2007 assembly elections.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X