ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತಂದೆಗೆ ಮೋಸ ಮಾಡಿದ್ದಕ್ಕೆ ಮಾಯಾರಿಂದ ಅಖಿಲೇಶ್ ಗೆ ಶಿಕ್ಷೆ: ಬಿಜೆಪಿ

|
Google Oneindia Kannada News

ಲಕ್ನೋ, ಜೂನ್ 25: ಉತ್ತರ ಪ್ರದೇಶದ ಉಪಚುನಾವಣೆ ಮತ್ತಿತರ ಸಣ್ಣಪುಟ್ಟ ಚುನಾವಣೆಗಳಲ್ಲಿ ತಾನು ಏಕಾಂಗಿಯಾಗಿ ಸ್ಪರ್ಧಿಸುತ್ತೇನೆ ಎಂದು ಸಮಾಜವಾದಿ ಪಕ್ಷ ಮತ್ತು ಬಹುಜನ ಸಮಾಜ ಪಕ್ಷದ ನಡುವೆ ಮೈತ್ರಿ ಮುರಿದು ಬಿದ್ದ ಸೂಚನೆಯನ್ನು ಮಾಯಾವತಿ ನೀಡಿದ್ದಾರೆ.

ಈ ನಡೆಯನ್ನು ಸ್ವಾಗತಿಸಿರುವ ಬಿಜೆಪಿ, "ಅಖಿಲೇಶ್ ಯಾದವ್ ಅವರು ಅಧಿಕಾರಕ್ಕಾಗಿ ತಮ್ಮ ತಂದೆ, ಚಿಕ್ಕಪ್ಪರಿಗೇ ಮೋಸ ಮಾಡಿದ್ದರು. ಆದ್ದರಿದಕೇ ಮಾಯಾವತಿ ಅವರಿಗೆ ಈ ಶಿಕ್ಷೆ ನೀಡಿದ್ದಾರೆ" ಎಂದು ಉತ್ತರ ಪ್ರದೇಶ ಬಿಜೆಪಿ ವಕ್ತಾರ ಹರೀಶ್ ಶ್ರೀವಾತ್ಸವ್ ಹೇಳಿದ್ದಾರೆ.

ಮಾಯಾವತಿ ಕೆಂಡಾಮಂಡಲ, ಅಖಿಲೇಶ್ ಯಾದವ್ ವಿರುದ್ಧ ವಾಗ್ದಾಳಿಮಾಯಾವತಿ ಕೆಂಡಾಮಂಡಲ, ಅಖಿಲೇಶ್ ಯಾದವ್ ವಿರುದ್ಧ ವಾಗ್ದಾಳಿ

Mayawati punished Akhulesh Yadav fior betraying his father for power: BJP

ಎಸ್ಪಿ-ಬಿಎಸ್ಪಿ ಎರಡೂ ಪಕ್ಷಗಳೂ ಅವಕಾಶವಾದಿಗಳೇ. ಲೋಕಸಭೆ ಚುನಾಣೆಗೋಸ್ಕರವಷ್ಟೇ ಅವರು ಒಂದಾಗಿದ್ದರು ಎಂದು ಶ್ರೀವಾಸ್ತವ್ ಹೇಳಿದರು.

ಮೈತ್ರಿಗೆ ಗುಡ್ ಬೈ ಎಂದ ಮಾಯಾವತಿ: ಮೌನ ಮುರಿದ ಅಖಿಲೇಶ್ಮೈತ್ರಿಗೆ ಗುಡ್ ಬೈ ಎಂದ ಮಾಯಾವತಿ: ಮೌನ ಮುರಿದ ಅಖಿಲೇಶ್

"ಬಿಎಸ್ಪಿ ನಾಯಕಿ ಮಾಯಾವತಿ ದಲಿತರಿಂದ ಮತ ಪಡೆದರು. ಆದರೆ ಅದವರ ಸ್ಥಿತಿಯನ್ನು ಸುಧಾರಿಸುವ ಪ್ರಯತ್ನ ಮಾಡಲಿಲ್ಲ. ಅವರು ತಮ್ಮ ಕುಟುಂಬವನ್ನು ಮೀರಿ ಯೋಚಿಸುವುದಿಲ್ಲ. ಆಕೆಯ ಇತಿಹಾಸವನ್ನು ನೋಡಿದರೆ ಮೋಸದ ಇತಿಹಾಸವೇ ಸಿಗುತ್ತದೆ. ಇನ್ನು ಅಖಿಲೇಶ್ ಬಗ್ಗೆ ಹೇಳುವುದಾದರೆ ಅವರೊಬ್ಬ ಭ್ರಷ್ಟ. ಅವರು ಮಾಯಾವತಿ ಜೊತೆ ಕೈಜೋಡಿಸುವ ಮುಂಚೆ ನೂರು ಬಾರಿ ಯೋಚಿಸಬೇಕಿತ್ತು" ಎಂದು ಶ್ರೀವಾಸ್ತವ್ ಹೇಳಿದರು.

English summary
BJP on SP-BSP break up in Uttar Pradesh said, 'Akhilesh Yadav betrayed his father, uncle for power. Now Mayawati punished him'
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X