ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮುಸ್ಲಿಮರೇ ದಯವಿಟ್ಟು ಕಾಂಗ್ರೆಸ್ಸಿಗೆ ಮತಹಾಕಬೇಡಿ: ಮಾಯಾವತಿ

|
Google Oneindia Kannada News

ಲಕ್ನೋ, ಏ 8: ತಮ್ಮ ಪ್ರಮುಖ ವಿರೋಧಿ ಬಿಜೆಪಿಯನ್ನು ಟೀಕಿಸುವುದಕ್ಕಿಂತ ಹೆಚ್ಚಾಗಿ ಕಾಂಗ್ರೆಸ್ ಅನ್ನು ತರಾಟೆಗೆ ತೆಗೆದುಕೊಳ್ಳುತ್ತಿರುವ ಬಿಎಸ್ಪಿ ನಾಯಕಿ ಮಾಯಾವತಿ, ಕಾಂಗ್ರೆಸ್ಸಿಗೆ ಯಾವ ಕಾರಣಕ್ಕೂ ಮತಹಾಕಬೇಡಿ ಎಂದು ಮುಸ್ಲಿಮರಲ್ಲಿ ಮನವಿ ಮಾಡಿದ್ದಾರೆ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಪಶ್ಚಿಮ ಉತ್ತರಪ್ರದೇಶದ ಸಹರಣಪುರದ ದಿಯೋಬಂದ್ ನಲ್ಲಿ ಜಂಟಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಮಾಯಾವತಿ, ಮುಸ್ಲಿಮರು ತಮ್ಮ ಮತವನ್ನು ಗಂಭೀರವಾಗಿ ಯೋಚಿಸಿ ಚಲಾಯಿಸಬೇಕಿದೆ. ನೀವು ಕಾಂಗ್ರೆಸ್ಸಿಗೆ ಮತಹಾಕುವುದೂ ಒಂದೇ, ಬಿಜೆಪಿಗೆ ಹಾಕುವುದೂ ಒಂದೇ ಎಂದು ಹೇಳಿದ್ದಾರೆ.

ಟಿಕೆಟ್ ಗಾಗಿ ನೋಟು, ಇದು ಮಾಯಾವತಿ ಸಿದ್ಧಾಂತ: ಮನೇಕಾ ಗಾಂಧಿಟಿಕೆಟ್ ಗಾಗಿ ನೋಟು, ಇದು ಮಾಯಾವತಿ ಸಿದ್ಧಾಂತ: ಮನೇಕಾ ಗಾಂಧಿ

ಮುಸ್ಲಿಮರ ಪ್ರಾಭಲ್ಯವಿರುವ ಈ ಕ್ಷೇತ್ರದಲ್ಲಿ ಎಸ್ಪಿ ಮತ್ತು RLD ಜೊತೆ ಜಂಟಿ ರ‍್ಯಾಲಿಯಲ್ಲಿ ಮಾತನಾಡುತ್ತಿದ್ದ ಮಾಯಾವತಿ, ಕಾಂಗ್ರೆಸ್ಸಿಗೆ ನೀವು ಮತಹಾಕಿದರೆ, ಅದು ಮತವಿಭನೆಯಾಗಿ ಬಿಜೆಪಿಗೆ ಅನುಕೂಲವಾಗುತ್ತದೆ. ಹಾಗಾಗಿ, ಯಾರೂ ಕಾಂಗ್ರೆಸ್ಸಿಗೆ ಮತಹಾಕಬಾರದು ಎಂದು ಮತದಾರರಲ್ಲಿ ಮಾಯಾವತಿ ಮನವಿ ಮಾಡಿದ್ದಾರೆ.

Mayawati, Akhilesh slam BJP, ask West UP to not split Muslim vote by voting for Congress

ಇತರ ಪಕ್ಷಗಳು ಮುಸ್ಲಿಂ ಅಭ್ಯರ್ಥಿಗಳನ್ನು ಅಂತಿಮಗೊಳಿಸುವ ಮೊದಲೇ, ಎಸ್ಪಿ ಮತ್ತು ಬಿಎಸ್ಪಿ ಪಟ್ಟಿಯನ್ನು ತಯಾರಿಸಿತ್ತು. ಈ ಚುನಾವಣೆಯಲ್ಲಿ ನಮ್ಮ ಮೈತ್ರಿ ಅಭ್ಯರ್ಥಿಗೆ ನೀವು ಮತ ಚಲಾಯಿಸಬೇಕೆಂದು ಮಾಯಾವತಿ, ಮತದಾರರಲ್ಲಿ ವಿನಂತಿಸಿಕೊಂಡಿದ್ದಾರೆ.

ತಾವೇ ಹಿಂದೂಗಳು ಎಂದು ಹೇಳಿಕೊಳ್ಳುವ ಬಿಜೆಪಿ ಮುಖಂಡರಿಗೆ, ಕುಂಭಮೇಳದಲ್ಲಿ ಯಾವರೀತಿ ಪುಣ್ಯಸ್ನಾನ ಮಾಡಬೇಕು ಎನ್ನುವ ಅರಿವಿಲ್ಲ. ಕಾಂಗ್ರೆಸ್ ಮತ್ತು ಬಿಜೆಪಿ ಒಂದೇ ನಾಣ್ಯದ ಎರಡು ಮುಖಗಳು ಎಂದು ಎಸ್ಪಿ ಮುಖಂಡ ಅಖಿಲೇಶ್ ಯಾದವ್ ಹೇಳಿದ್ದಾರೆ.

ಬಿಜೆಪಿ ಹೇಳಿದ್ದು ಸರಿಯಾಗಿದೆ: ಕಾಂಗ್ರೆಸ್ ವಿರುದ್ಧ ಮಾಯಾವತಿ ವಾಗ್ದಾಳಿಬಿಜೆಪಿ ಹೇಳಿದ್ದು ಸರಿಯಾಗಿದೆ: ಕಾಂಗ್ರೆಸ್ ವಿರುದ್ಧ ಮಾಯಾವತಿ ವಾಗ್ದಾಳಿ

ಈ ಸಾರ್ವಜನಿಕ ಸಭೆಯಲ್ಲಿ ಎಸ್ಪಿ, ಬಿಎಸ್ಪಿ ಮುಖಂಡರು ಆಡಿರುವ ಮಾತುಗಳ ವಿಡಿಯೋವನ್ನು ಚುನಾವಣಾ ಆಯೋಗಕ್ಕೆ ಕಳುಹಿಸಲು ಬಿಜೆಪಿ ನಿರ್ಧರಿಸಿದ್ದು, ಮುಖಂಡರ ಭಾಷಣ ಚುನಾವಣಾ ನೀತಿಸಂಹಿತೆಗೆ ವಿರುದ್ದವಾಗಿದೆ ಎಂದು ಬಿಜೆಪಿ ಆರೋಪಿಸಿದೆ. (ಚಿತ್ರ: ಪಿಟಿಐ)

English summary
BSP supremo Mayawati appealed to the Muslim voters saying the community should not split their mandate by voting for the Congress as it would only help the BJP.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X