ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶ್ರೀಕೃಷ್ಣ ಜನ್ಮಸ್ಥಾನದಲ್ಲಿ ಮಸೀದಿಗೆ ವಿರೋಧ: ಅರ್ಜಿ ವಿಚಾರಣೆಗೆ ಒಪ್ಪಿಗೆ

|
Google Oneindia Kannada News

ನವದೆಹಲಿ, ಅಕ್ಟೋಬರ್ 16: ಶ್ರೀಕೃಷ್ಣ ಜನ್ಮಭೂಮಿ ದೇವಸ್ಥಾನದ ಆವರಣದಲ್ಲಿರುವ 17ನೇ ಶತಮಾನದ ಮಸೀದಿಯನ್ನು ತೆರವುಗೊಳಿಸುವಂತೆ ಕೋರಿ ಸಲ್ಲಿಸಲಾಗಿರುವ ಅರ್ಜಿಯನ್ನು ಮಥುರಾದ ನ್ಯಾಯಾಲಯವೊಂದು ವಿಚಾರಣೆಗೆ ಪರಿಗಣಿಸಿದೆ.

ಶಹಿ ಈದ್ಗಾ ಮಸೀದಿ ಟ್ರಸ್ಟ್, ಸುನ್ನಿ ವಕ್ಫ್ ಮಂಡಳಿ ಸೇರಿದಂತೆ ಎಲ್ಲ ಸಂಬಂಧಿತ ಕಕ್ಷಿದಾರರಿಗೂ ನೋಟಿಸ್ ನೀಡಿರುವ ನ್ಯಾಯಾಲಯವು, ನವೆಂಬರ್ 18ರಂದು ಹಾಜರಾಗುವಂತೆ ಸೂಚನೆ ನೀಡಿದೆ.

ಶ್ರೀಕೃಷ್ಣ ಜನ್ಮಸ್ಥಳ ವಿವಾದ: ಮಸೀದಿ ತೆರವುಗೊಳಿಸಲು ನ್ಯಾಯಾಲಯಕ್ಕೆ ಅರ್ಜಿಶ್ರೀಕೃಷ್ಣ ಜನ್ಮಸ್ಥಳ ವಿವಾದ: ಮಸೀದಿ ತೆರವುಗೊಳಿಸಲು ನ್ಯಾಯಾಲಯಕ್ಕೆ ಅರ್ಜಿ

ಕಳೆದ ತಿಂಗಳು ಕೆಲವು ಜನರ ತಂಡವೊಂದು ಮಥುರಾದ ಹಿರಿಯ ವಿಭಾಗೀಯ ಸಿವಿಲ್ ನ್ಯಾಯಾಧೀಶರಿಗೆ ಅರ್ಜಿ ಸಲ್ಲಿಸಿತ್ತು. ಶ್ರೀಕೃಷ್ಣನ ಜನ್ಮಸ್ಥಳದಲ್ಲಿ, ಕಾತ್ರ ಕೇಶವ ದೇವ ದೇವಸ್ಥಾನದ 13.37 ಎಕರೆ ಪ್ರದೇಶದಲ್ಲಿ ಮಸೀದಿಯನ್ನು ನಿರ್ಮಿಸಲಾಗಿದೆ ಎಂದು ಆರೋಪಿಸಿದ್ದರು. ಈ ಅರ್ಜಿಯನ್ನು ಸೆ. 30ರಂದು ಹಿರಿಯ ವಿಭಾಗೀಯ ಸಿವಿಲ್ ನ್ಯಾಯಾಧೀಶರು ವಜಾಗೊಳಿಸಿದ್ದರು. ಈ ಆದೇಶವು ವಾಸ್ತವಕ್ಕೆ ವಿರುದ್ಧ ಹಾಗೂ ತಪ್ಪಾದ ಅಂಶಗಳನ್ನು ಒಳಗೊಂಡಿದೆ ಎಂದು ಅಕ್ಟೋಬರ್ 12ರಂದು ಜಿಲ್ಲಾ ನ್ಯಾಯಾಲಯಕ್ಕೆ ಮನವಿ ಮಾಡಿದ್ದರು.

Mathura Court Admits Plea Seeking Removal Of Mosque Near Krishna Janmabhoomi

ಕೆಳ ನ್ಯಾಯಾಲಯದ ದಾಖಲೆಗನ್ನು ಪಡೆದುಕೊಂಡ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರಾದ ಸುಧಾನ ಠಾಕೂರ್, ಶುಕ್ರವಾರ ಈ ಅರ್ಜಿಯನ್ನು ಪರಿಗಣಿಸಲು ಒಪ್ಪಿದರು.

ಬಾಬ್ರಿ ಮಸೀದಿ ಧ್ವಂಸ ಮಾಡಿದ್ದು ನಾವಲ್ಲ, ಕಾಂಗ್ರೆಸ್: ಬಿಜಿಪಿ ಮುಖಂಡ ವಿನಯ್ ಕಟಿಯಾರ್ಬಾಬ್ರಿ ಮಸೀದಿ ಧ್ವಂಸ ಮಾಡಿದ್ದು ನಾವಲ್ಲ, ಕಾಂಗ್ರೆಸ್: ಬಿಜಿಪಿ ಮುಖಂಡ ವಿನಯ್ ಕಟಿಯಾರ್

ಬಾಲ ಭಕ್ತ ಭಗವಾನ್ ಶ್ರೀಕೃಷ್ಣ ವಿರಾಜಮಾನ್ ಅವರ ಪರವಾಗಿ ರಂಜನಾ ಅಗ್ನಿಹೋತ್ರಿ ಮತ್ತು ಇತರರು 'ನಂತರದ ಸ್ನೇಹಿತರ' ಮೂಲಕ ಈ ಅರ್ಜಿ ಸಲ್ಲಿಸಲಾಗಿದೆ. ವ್ಯಕ್ತಿಯೊಬ್ಬರು ನೇರವಾಗಿ ಅರ್ಜಿಯೊಂದನ್ನು ನಿಭಾಯಿಸಲು ಸಾಧ್ಯವಾಗದ ಸಂದರ್ಭದಲ್ಲಿ ಅವರನ್ನು ಪ್ರತಿನಿಧಿಸುವವರನ್ನು ಕಾನೂನಿನ ಪರಿಭಾಷೆಯಲ್ಲಿ 'ನಂತರದ ಸ್ನೇಹಿತ' ಎಂದು ಉಲ್ಲೇಖಿಸಲಾಗುತ್ತದೆ.

English summary
A Court in Mathura has admitted a plea seeking removal of a mosque near Sri Krishna Janmabhoomi temple.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X