ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಾಯಿಗೆ ಹೆದರಿ ಅಡಗಿ ಕುಳಿತ ವ್ಯಕ್ತಿ: ಕಳ್ಳ ಎಂದು ಗ್ರಾಮಸ್ಥರು ಮಾಡಿದ್ದೇನು?

|
Google Oneindia Kannada News

ಲಕ್ನೋ, ಜುಲೈ 20: ಪ್ರತ್ಯಕ್ಷವಾಗಿ ಕಂಡರೂ ಪ್ರಮಾಣಿಸಿ ನೋಡಬೇಕೆಂಬ ಗಾದೆ ಮಾತಿದೆ ಆದರೆ ಅದನ್ನು ಎಷ್ಟು ಜನರು ತಮ್ಮ ಜೀವನದಲ್ಲಿ ಅಳವಡಿಸಿಕೊಂಡಿದ್ದಾರೆ ಎನ್ನುವುದು ಕೂಡ ಮುಖ್ಯವಾಗುತ್ತದೆ.

ವ್ಯಕ್ತಿಯೊಬ್ಬ ಅತ್ತೆಯ ಮನೆಗೆ ಹೊರಟಿದ್ದ ಮಧ್ಯೆ ಹಲವು ನಾಯಿಗಳು ಅಟ್ಟಿಸಿಕೊಂಡು ಬಂದ ಕಾರಣ ಆತನ ನಾಯಿಗಳಿಗೆ ಹೆದರಿ ಒಂದು ಕಡೆ ಅಡಗಿ ಕುಳಿತಿದ್ದ.
ಇದನ್ನು ಕಂಡ ಗ್ರಾಮಸ್ಥರು ಆತ ಕಳ್ಳನೆಂದು ಭಾವಿಸಿ ಬೆಂಕಿ ಹಚ್ಚಿರುವ ಘಟನೆ ಉತ್ತರ ಪ್ರದೇಶದ ಲಕ್ನೋನಲ್ಲಿ ನಡೆದಿದೆ.

ನಾಯಿ ಕಚ್ಚಿದ್ದನ್ನು ಪ್ರಶ್ನಿಸಿ ಒಡತಿಯಿಂದ ಕೈಕಚ್ಚಿಸಿಕೊಂಡ ಮಹಿಳೆನಾಯಿ ಕಚ್ಚಿದ್ದನ್ನು ಪ್ರಶ್ನಿಸಿ ಒಡತಿಯಿಂದ ಕೈಕಚ್ಚಿಸಿಕೊಂಡ ಮಹಿಳೆ

ಉತ್ತರ ಪ್ರದೇಶದ ಬಾರಾಬಂಕಿ ಬಳಿಯ ರಾಘೋಪುರ್​ ಎಂಬ ಗ್ರಾಮದಲ್ಲಿ ಶುಕ್ರವಾರ ತಡರಾತ್ರಿ ನಡೆದಿದ್ದು, ತಿಂದೋಲಾ ಗ್ರಾಮದ ನಿವಾಸಿ ಸುಜಿತ್​ ಕುಮಾರ್ ಎಂಬಾತ ಇಲ್ಲಿನ​ ಟಾಯಿ ಕಲಾ ಗ್ರಾಮದಲ್ಲಿರುವ ತನ್ನ ಅತ್ತೆ ಮನೆಗೆ ತೆರಳುತ್ತಿದ್ದ.

Man thrashed and set ablaze in Lucknow

ವೃತ್ತಿಯಲ್ಲಿ ಪೇಂಟರ್​ ಆಗಿರುವ ಸುಜಿತ್ ಕುಮಾರ್ ಶುಕ್ರವಾರ ರಾತ್ರಿ ಹೋಗುತ್ತಿದ್ದಾಗ ನಾಯಿಗಳು ಬೆನ್ನಟ್ಟಿವೆ. ಅದರಿಂದ ಭಯಗೊಂಡ ಸುಜಿತ್ ಕುಮಾರ್, ನಾಯಿಗಳಿಂದ ತಪ್ಪಿಸಿಕೊಳ್ಳಲು ಪಕ್ಕದಲ್ಲೇ ಇದ್ದ ಮನೆಯೊಳಗೆ ನುಗ್ಗಿ ಅವಿತುಕೊಂಡಿದ್ದಾನೆ. ಈ ವೇಳೆ ಮನೆಯವರು ಈತನನ್ನು ಕಂಡು ಕಳ್ಳ ಕಳ್ಳ ಎಂದು ಕೂಗಿದ್ದಾರೆ.

ಕೂಡಲೇ ಅಕ್ಕಪಕ್ಕದ ಮನೆಯವರು ಸೇರಿಕೊಂಡು ಸುಜಿತ್ ಕುಮಾರ್ ರನ್ನು ಹಿಡಿದು ಕಟ್ಟಿಹಾಕಿ ಮನಸೋ ಇಚ್ಛೆ ಥಳಿಸಿದ್ದಾರೆ. ಬಳಿಕ ಗ್ರಾಮಸ್ಥರು ಆತನ ಮೇಲೆ ಪೆಟ್ರೋಲ್​ ಸುರಿದು ಬೆಂಕಿ ಹಚ್ಚಲು ಯತ್ನಿಸಿದ್ದಾರೆ.

ಪ್ರಕರಣ ಸಂಬಂಧ ಪೊಲೀಸರು ಉಮೇಶ್​ ಯಾದವ್​ ಮತ್ತು ಶ್ರವಣ್​ ಯಾದವ್​ ಅವರನ್ನು ಬಂಧಿಸಿದ್ದು, ಉಳಿದವರಿಗಾಗಿ ಶೋಧ ಕಾರ್ಯಾಚರಣೆ ನಡೆಸಿದ್ದಾರೆ.
ಸುಜಿತ್ ಕುಮಾರ್ ರನ್ನು ಗುರುತಿಸಿದ ಸ್ಥಳೀಯರೊಬ್ಬರು ಈ ವಿಚಾರವನ್ನು ಗ್ರಾಮಸ್ಥರಿಗೆ ಹೇಳಿ ಅವರನ್ನು ರಕ್ಷಿಸಿದ್ದಾರೆ.

ಬಳಿಕ ತೀವ್ರವಾಗಿ ಗಾಯಗೊಂಡಿದ್ದ ಸುಜಿತ್ ಕುಮಾರ್ ರನ್ನು ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ. ಇದೀಗ ಸುಜಿತ್ ಕುಮಾರ್ ಪತ್ನಿ ಪೂನಂ ಗ್ರಾಮಸ್ಥರ ವಿರುದ್ಧ ದೂರು ನೀಡಿದ್ದು, ಪೊಲೀಸರು ಎಫ್​ಐಆರ್​ ದಾಖಲಿಸಿಕೊಂಡಿದ್ದಾರೆ.

English summary
Man thrashed and set ablaze in Lucknow, This mishappening occurred after he was mistaken to be a thief when he hid in a house after being chased by dogs. He is now being admitted in a hospital.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X