ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾ ಹರಡಲು 'ತಬ್ಲೀಘ್ ಜಮಾತ್' ಕಾರಣ ಎಂದಿದ್ದಕ್ಕೆ ಗುಂಡಿಕ್ಕಿ ಕೊಲೆ

|
Google Oneindia Kannada News

ಲಕ್ನೌ, ಏಪ್ರಿಲ್ 5: ತಬ್ಲೀಘ್ ಜಮಾತ್ ಮರ್ಕಜ್‌ನಲ್ಲಿ ನಡೆದ ಧಾರ್ಮಿಕ ಸಭೆಯಿಂದಲೇ ದೇಶದಲ್ಲಿ ಕೊರೊನಾ ಸೋಂಕು ಹೆಚ್ಚು ಹರಡುತ್ತಿದೆ ಎಂದು ದೂಷಿಸಿದ್ದಕ್ಕೆ ವ್ಯಕ್ತಿಯೊಬ್ಬನನ್ನು ಗುಂಡಿಕ್ಕಿ ಕೊಂದಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.

ಪ್ರಯಾಗ್‌ರಾಜ್ ನಗರದ ಟೀ ಅಂಗಡಿ ಬಳಿ ಕೊಲೆಯಾದ ವ್ಯಕ್ತಿ ಇನ್ನೊಬ್ಬ ವ್ಯಕ್ತಿ ಜೊತೆ ತಬ್ಲೀಘ್ ಜಮಾತ್ ಮರ್ಕಜ್ ಘಟನೆಯಿಂದಲೇ ದೇಶದಲ್ಲಿ ಕೊರೊನಾ ಹೆಚ್ಚಾಗುತ್ತಿದೆ ಎಂದು ವಾಗ್ವಾದಕ್ಕಿಳಿದಿದ್ದನು. ಬಳಿಕ ಈ ಚರ್ಚೆ ಗಂಭೀರವಾಗಿದ್ದು ಆ ವ್ಯಕ್ತಿಯ ಮೇಲೆ ಗುಂಡು ಹಾರಿಸಿದ್ದಾನೆ ಎಂದು ತಿಳಿದು ಬಂದಿದೆ.

ನೋಟು ನೆಕ್ಕಿ ಕೊರೊನಾವೈರಸ್ ಹರಡಿಸಿ ಎಂದಿದ್ದ ವ್ಯಕ್ತಿ ಬಂಧನನೋಟು ನೆಕ್ಕಿ ಕೊರೊನಾವೈರಸ್ ಹರಡಿಸಿ ಎಂದಿದ್ದ ವ್ಯಕ್ತಿ ಬಂಧನ

ಭಾನುವಾರ ಬೆಳಿಗ್ಗೆ 9 ಗಂಟೆಯ ಸುಮಾರಿಗ ಈ ಘಟನೆ ನಡೆದಿದ್ದು. ಗುಂಡೇಟು ತಿಂದ ವ್ಯಕ್ತಿ ಸ್ಥಳದಲ್ಲೇ ಮೃತಪಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಘಟನೆ ಸಂಭವಿಸುತ್ತಿದ್ದಂತೆ ಸ್ಥಳೀಯರು ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ವಿಷಯ ತಿಳಿದ ಪೊಲೀಸರು ಕೂಡಲೇ ಸ್ಥಳಕ್ಕೆ ಬಂದು ಆರೋಪಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

Man Murdered For Blaming Tablighi Jamaat For Corona Spread

ಈ ಘಟನೆ ಪ್ರಯಾಗ್‌ರಾಜ್‌ ನಗರದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಿಸಿದ್ದು, ನಗರದಲ್ಲಿ ಶಾಂತಿ ಕಾಪಾಡಿಕೊಳ್ಳಿ ಎಂದು ಎಸ್‌ಪಿ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ. ಮೃತ ವ್ಯಕ್ತಿ ಕುಟುಂಬಕ್ಕೆ ಉತ್ತರ ಪ್ರದೇಶ ಸರ್ಕಾರ 5 ಲಕ್ಷ ಪರಿಹಾರ ಧನವನ್ನು ಘೋಷಿಸಿದೆ.

ಕೊರೊನಾ ವೈರಸ್ ಚಿಕಿತ್ಸೆಗೆ ಭಾರತದಲ್ಲಿ ಔಷಧಿ ಕೋರಿದ ಅಮೆರಿಕಾಕೊರೊನಾ ವೈರಸ್ ಚಿಕಿತ್ಸೆಗೆ ಭಾರತದಲ್ಲಿ ಔಷಧಿ ಕೋರಿದ ಅಮೆರಿಕಾ

ಸದ್ಯ ಉತ್ತರ ಪ್ರದೇಶದಲ್ಲಿ 334 ಜನರಿಗೆ ಸೋಂಕು ತಗುಲಿದ್ದು, ಇಬ್ಬರು ಸಾವನ್ನಪ್ಪಿದ್ದಾರೆ. ದೇಶಾದ್ಯಂತ 3000 ಕ್ಕೂ ಹೆಚ್ಚು ಜನರಲ್ಲಿ ಕೊರೊನಾ ಪತ್ತೆಯಾಗಿದ್ದು, ಸಾವಿನ ಸಂಖ್ಯೆಯೂ ಅಧಿಕವಾಗುತ್ತಿದೆ.

English summary
A man murdered at Uttar pradesh for blaming Tablighi Jamaat for coronavirus spread in across India.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X