ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮನೆಗೆ ಬರಲು ಹತ್ತು ನಿಮಿಷ ತಡವಾಗಿದ್ದಕ್ಕೆ ಫೋನ್ ಮೂಲಕವೇ ತಲಾಖ್

|
Google Oneindia Kannada News

ಇತಾಹ್, ಜನವರಿ 30: ಪತ್ನಿ ಮನೆಗೆ ಬರಲು ಹತ್ತು ನಿಮಿಷ ತಡವಾಯಿತು ಎನ್ನುವ ಕ್ಷುಲ್ಲಕ ಕಾರಣಕ್ಕೆ ಪತಿ ಫೋನ್ ಮೂಲಕವೇ ತಲಾಖ್ ನೀಡಿರುವ ಘಟನೆ ಉತ್ತರ ಪ್ರದೇಶದ ಏತಾಹ್‌ನಲ್ಲಿ ನಡೆದಿದೆ.

ರಿವಳಿ ತಲಾಖ್ ಅನ್ನು ಅಪರಾಧವನ್ನಾಗಿ ಪರಿಗಣಿಸುವ ತ್ರಿವಳಿ ತಲಾಖ್ ಮಸೂದೆಯಲ್ಲಿನ ತಿದ್ದುಪಡಿಗೆ ಕೇಂದ್ರ ಸರ್ಕಾರ ಒಪ್ಪಿಗೆ ನೀಡಿದೆ. ಆದರೆ ತಲಾಖ್ ನೀಡುವುದು ಮಾತ್ರ ನಿಂತಿಲ್ಲ, ಆದರೆ ದಿನದಿಂದ ದಿನಕ್ಕೆ ಹೋದಂತೆ ತಲಾಖ್ ನೀಡುವ ವಿಧಾನ ಕೂಡ ಬದಲಾಗುತ್ತಿದೆ.

ಏನಿದು ತ್ರಿವಳಿ ತಲಾಖ್ ಕಾಯ್ದೆ: ಪ್ರಸ್ತುತ ತಿದ್ದುಪಡಿಯಲ್ಲೇನಿದೆ? ಏನಿದು ತ್ರಿವಳಿ ತಲಾಖ್ ಕಾಯ್ದೆ: ಪ್ರಸ್ತುತ ತಿದ್ದುಪಡಿಯಲ್ಲೇನಿದೆ?

ಇಂಥದ್ದೇ ಹಲವಾರು ಘಟನೆಗಳು ನಡೆದಿದೆ, ವ್ಯಕ್ತಿಯೊಬ್ಬ ಹೆಂಡತಿಗೆ ವಾಟ್ಸಪ್ ಮೂಲಕ ತಲಾಖ್ ನೀಡಿದ್ದ, ಫೋನ್ ಮೂಲಕ ತಲಾಖ್ ನೀಡಿದ್ದ, ತನಗೆ ಹೆಂಡತಿ ಜೊತೆಗೆ ಬಾಳಲು ಇಷ್ಟವೆಲ್ಲವೆಂದು ಕಾರಣ ನೀಡಿ ತಲಾಖ್ ನೀಡಿದ್ದರು ಆದರೆ ಈ ವಿಚಿತ್ರ ಘಟನೆಯಲ್ಲಿ ಹೆಂಡತಿ ಮನೆಗೆ ಬರಲು ತಡವಾಯಿತು ಎಂದು ತಲಾಖ್ ನೀಡಿ ಅಚ್ಚರಿ ಮೂಡಿಸಿದ್ದಾರೆ.

 Man gives triple talaq over phone to wife

ತನ್ನ ಅಜ್ಜಿಯನ್ನು ನೋಡಲು ಆಕೆ ತವರು ಮನೆಗೆ ಹೋಗಿದ್ದಳು, ಮನೆಗೆ ಬರುವುದು ಹತ್ತು ನಿಮಿಷ ತಡವಾಗಿದೆ ಅದೇ ಕಾರಣವನ್ನು ಮುಂದಿಟ್ಟುಕೊಂಡು ತಲಾಖ್ ನೀಡಿದ್ದಾರೆ ಎಂದು ಮಹಿಳೆ ಅಳಲು ತೋಡಿಕೊಂಡಿದ್ದಾಳೆ. ಅರ್ಧ ಗಂಟೆಯಲ್ಲಿ ಬರುವುದಾಗಿ ಹೇಳಿ ಹೋಗಿದ್ದೆ ಆದರೆ ಹತ್ತು ನಿಮಿಷ ತಡವಾಗಿ ಬಂದ. ನನ್ನ ಅಣ್ಣನ ಮೊಬೈಲ್ ಗೆ ಕರೆ ಮಾಡಿ ನನಗೆ ತಲಾಖ್ ನೀಡಿದ್ದಾರೆ.

ವರದಕ್ಷಿಣೆ ನೀಡದ ಕಾರಣ ಅತ್ತೆಯೂ ಕೂಡ ದಿನ ಹಿಂಸೆ ಮಾಡುತ್ತಿದ್ದರು. ನನ್ನ ಮನೆಯ ಕಡೆಯವರು ತುಂಬಾ ಬಡವರು ಇವರು ಹೇಳಿದಷ್ಟು ಹಣವನ್ನು ಅವರಿಗೆ ನೀಡಲು ಸಾಧ್ಯವಾಗಿಲ್ಲ.

ನೀನು ನೋಡಲು ಚೆನ್ನಾಗಿಲ್ಲ:ವಾಟ್ಸ್‌ಆಪ್‌ನಲ್ಲೇ ಹೆಂಡತಿಗೆ ತಲಾಖ್ನೀನು ನೋಡಲು ಚೆನ್ನಾಗಿಲ್ಲ:ವಾಟ್ಸ್‌ಆಪ್‌ನಲ್ಲೇ ಹೆಂಡತಿಗೆ ತಲಾಖ್

ಮುಸ್ಲಿಂ ಪತಿಯು, ತನ್ನ ಪತ್ನಿಗೆ ಮೂರು ಬಾರಿ ತಲಾಖ್ ಎನ್ನುವ ಮೂಲಕ ಯಾವುದೇ ಲಿಖಿತ ದಾಖಲೆಗಳಿಲ್ಲದೆ ವಿಚ್ಛೇದನ ನೀಡುವುದಕ್ಕೆ ತ್ರಿವಳಿ ತಲಾಖ್ ನಲ್ಲಿ ಅವಕಾಶವಿತ್ತು. ಆದರೆ ತ್ರಿವಳಿ ತಲಾಖ್ ನಿಂದಾಗಿ ಮುಸ್ಲಿಂ ಮಹಿಳೆಯರ ಹಕ್ಕನ್ನು ಕಸಿಯಲಾಗುತ್ತಿದೆ, ಮತ್ತು ಅವರ ಮೇಲೆ ನಿರಂತರ ದೌರ್ಜನ್ಯ ನಡೆಯುತ್ತಿದೆ ಎಂಬುದನ್ನು ಮನಗಂಡ ಸರ್ಕಾರ, ತ್ರಿವಳಿ ತಲಾಖ್ ಅನ್ನು ಅಪರಾಧವನ್ನಾಗಿ ಪರಿಗಣಿಸುವಂತೆ ಮುಸ್ಲಿಂ ಮಹಿಳೆಯರ ಕಾಯ್ದೆಯಲ್ಲಿ ತಿದ್ದುಪಡಿ ತರಲು ನಿರ್ಧರಿಸಿತ್ತು.

ಈ ಮಸೂದೆಗೆ ಲೋಕಸಭೆಯ ಒಪ್ಪಿಗೆ ಸಿಕ್ಕರೂ, ಈ ಬಾರಿಯ ಮುಂಗಾರು ಅಧಿವೇಶನದಲ್ಲಿ ಕೆಲವು ಧ್ವಂಧ್ವಂಗಳಿಂದಾಗಿ ರಾಜ್ಯಸಭೆಯಲ್ಲಿ ಅದು ಮಂಡನೆಯಾಗದೆ ಉಳಿದಿತ್ತು. ಆದರೆ ಇದೀಗ ಈ ಕಾಯ್ದೆಯಲ್ಲಿ ಮಹತ್ವದ ಮೂರು ತಿದ್ದುಪಡಿಯನ್ನು ತರಲಾಗಿದ್ದು, ಅದನ್ನೇ ಇಂದು ಕೇಂದ್ರ ಸರ್ಕಾರ ಒಪ್ಪಿಗೆ ಸೂಚಿಸಿರುವುದನ್ನು ಮುಸ್ಲಿಂ ಮಹಿಳೆಯರು ಕೂಡ ಇದನ್ನು ಸ್ವಾಗತಿಸಿದ್ದರು.

English summary
weeks after bill criminalising instant triple talaq was passed in lok sabha a woman in Etah was allegedly given triple talaq by her husband over the phone for not returning home on time.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X