ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಾತಾಡುತ್ತಾ ಒಂದೇ ವ್ಯಕ್ತಿಗೆ 5 ನಿಮಿಷದಲ್ಲಿ ಎರಡೂ ಡೋಸ್ ಲಸಿಕೆ ಕೊಟ್ಟ ಸಿಬ್ಬಂದಿ

|
Google Oneindia Kannada News

ಲಖ್ನೋ, ಜೂನ್ 11: ಒಬ್ಬ ವ್ಯಕ್ತಿಗೆ ಐದು ನಿಮಿಷಗಳ ಅಂತರದಲ್ಲೇ ಕೊರೊನಾ ಲಸಿಕೆಯ ಎರಡೂ ಡೋಸ್‌ಗಳನ್ನು ನೀಡಿದ ಸಂಗತಿ ಉತ್ತರ ಪ್ರದೇಶದ ಲಲಿತಪುರ ಜಿಲ್ಲೆಯಲ್ಲಿ ನಡೆದಿದೆ.

ಬುಧವಾರ ಲಲಿತಪುರ ಜಿಲ್ಲೆಯ ರಾವರ್ಪುರದ ನರ್ಸಿಂಗ್ ಹೋಂಗೆ ಲಸಿಕೆ ಪಡೆಯಲು ವ್ಯಕ್ತಿಯೊಬ್ಬರು ಹೋಗಿದ್ದಾರೆ. ಮಾತುಕತೆಯಲ್ಲಿ ತಲ್ಲೀನರಾಗಿದ್ದ ನರ್ಸಿಂಗ್ ಸಿಬ್ಬಂದಿ ಐದು ನಿಮಿಷಗಳಲ್ಲಿಯೇ ಎರಡೂ ಡೋಸ್‌ಗಳ ಲಸಿಕೆ ನೀಡಿದ್ದಾರೆ ಎಂದು ಆ ವ್ಯಕ್ತಿ ಆರೋಪಿಸಿದ್ದಾರೆ.

 ಕೋವಿಡ್-19 ಲಸಿಕೆ ಕುರಿತು FAQs, ಡಾ. ವಿಕೆ ಪಾಲ್ ಸಲಹೆಗಳು ಕೋವಿಡ್-19 ಲಸಿಕೆ ಕುರಿತು FAQs, ಡಾ. ವಿಕೆ ಪಾಲ್ ಸಲಹೆಗಳು

ಲಸಿಕೆಯ ಎರಡನೇ ಡೋಸ್ ಅದು ಎಂಬುದು ನನಗೆ ತಿಳಿದಿರಲಿಲ್ಲ ಎಂದು ವ್ಯಕ್ತಿ ಹೇಳಿಕೊಂಡಿದ್ದಾರೆ.

Man Given 2 Doses Of Vaccine Within 5 Minutes At UP

ಮನೆಗೆ ಹೋದ ನಂತರ ಅವರ ಆರೋಗ್ಯದಲ್ಲಿ ವ್ಯತ್ಯಯ ಕಾಣಿಸಿಕೊಂಡಿದೆ. ಆಮೇಲೆ ಮನೆಯವರಿಗೆ ಈ ವಿಷಯ ಹೇಳಿಕೊಂಡಿದ್ದು, ಅವರು ಮುಖ್ಯ ವೈದ್ಯಾಧಿಕಾರಿಗೆ ದೂರು ನೀಡಿದ್ದಾರೆ. ನಂತರ ಅವರನ್ನು ತುರ್ತು ಚಿಕಿತ್ಸೆಗೆ ದಾಖಲಿಸಲಾಗಿದೆ.

ಜಿಲ್ಲಾಧಿಕಾರಿಗಳಿಗೆ ಈ ಮಾಹಿತಿ ನೀಡಿದ್ದು, ವೈದ್ಯಕೀಯ ಸಿಬ್ಬಂದಿ ಬೇಜವಾಬ್ದಾರಿ ಕುರಿತು ತನಿಖೆಗೆ ಆದೇಶಿಸಲಾಗಿದೆ. ಎರಡು ಡೋಸ್‌ಗಳನ್ನು ಒಟ್ಟಿಗೆ ನೀಡುವುದರಿಂದ ಯಾವುದೇ ತೊಂದರೆಯಾಗುವುದಿಲ್ಲ ಎಂದು ಅವರು ಹೇಳಿದ್ದಾರೆ. ಆದರೆ ನಿಯಮದ ಪ್ರಕಾರ ಲಸಿಕೆಯ ಎರಡು ಡೋಸ್‌ಗಳ ನಡುವೆ ಕನಿಷ್ಠ ನಾಲ್ಕು ವಾರಗಳ ಅಂತರವಿರಬೇಕು ಎಂದು ಹೇಳಲಾಗಿದೆ.

Recommended Video

ಯಾವ್ಯಾವ ಜಿಲ್ಲೆಗಳು Unlock: ಹೊಸ ಮಾರ್ಗಸೂಚಿಯಲ್ಲೇನಿದೆ? | CM Yediyurappa | Oneindia Kannada

English summary
A man in Lalitpur district of uttar pradesh was given both doses of the Covid vaccine within five minutes,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X