ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಫಿರೋಜಾಬಾದ್‌ನಲ್ಲಿ ಅಧಿಕ ಮಕ್ಕಳು ಡೆಂಗ್ಯೂಗೆ ಬಲಿ: ಕೇಂದ್ರದ ತಂಡ

|
Google Oneindia Kannada News

ಲಕ್ನೋ, ಸೆಪ್ಟೆಂಬರ್‌ 07: ಉತ್ತರ ಪ್ರದೇಶದ ಫಿರೋಜಾಬಾದ್‌ನಲ್ಲಿ ವೈರಲ್‌ ಜ್ವರ ಹಾಗೂ ಡೆಂಗ್ಯೂ ಪ್ರಕರಣಗಳ ಸಂಖ್ಯೆ ತೀವ್ರತರವಾಗಿ ಏರಿಕೆಯಾಗುತ್ತಿದೆ. ಈ ಹಿನ್ನೆಲೆ ಕೇಂದ್ರ ಸರ್ಕಾರವು ತಂಡವನ್ನು ಫಿರೋಜಾಬಾದ್‌ಗೆ ಈ ಬಗ್ಗೆ ತನಿಖೆ ನಡೆಸಲು ಕಳುಹಿಸಿದೆ.

ಫಿರೋಜಾಬಾದ್‌ನಲ್ಲಿ ವೈರಲ್‌ ಜ್ವರ ತೀವ್ರವಾಗಿ ಏರಿಕೆಯಾಗುತ್ತಿರುವುದನ್ನು ಹಾಗೂ ಹಾಗೂ ಹಲವಾರು ಮಕ್ಕಳು ಡೆಂಗ್ಯೂ, ವೈರಲ್‌ ಜ್ವರದಿಂದ ಸಾವನ್ನಪ್ಪಿರುವ ಬಗ್ಗೆ ತನಿಖೆ ನಡೆಸಲು ಕೇಂದ್ರದಿಂದ ಬಂದಿರುವ ಈ ತಂಡವು ಉತ್ತರ ಪ್ರದೇಶದ ಫಿರೋಜಾಬಾದ್‌ನಲ್ಲಿ ಅಂಟುರೋಗದಂತಹ ಸೋಂಕು ಹಾಗೂ ಪ್ರಾಣಿಗಳ ಮೂತ್ರದಿಂದ ಮನುಷ್ಯರಿಗೆ ಬರುವ ರೋಗವನ್ನು ಪತ್ತೆ ಹಚ್ಚಿದೆ ಎಂದು ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಸಚಿವಾಲಯವು ತಿಳಿಸಿದೆ.

ಯುಪಿ ಫಿರೋಜಾಬಾದ್‌ನಲ್ಲಿ ಡೆಂಗ್ಯೂ, ವೈರಲ್‌ ಜ್ವರ ಮತ್ತಷ್ಟು ಹೆಚ್ಚಳ: ಪೂರ್ವದಲ್ಲೂ ಆತಂಕಯುಪಿ ಫಿರೋಜಾಬಾದ್‌ನಲ್ಲಿ ಡೆಂಗ್ಯೂ, ವೈರಲ್‌ ಜ್ವರ ಮತ್ತಷ್ಟು ಹೆಚ್ಚಳ: ಪೂರ್ವದಲ್ಲೂ ಆತಂಕ

ಇನ್ನು ಈ ಬಗ್ಗೆ ಮಾಹಿತಿ ನೀಡಿರುವ ಯುಪಿ ಮುಖ್ಯು ಕಾರ್ಯದರ್ಶಿ, ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ್‌ ಭೂಷಣ್‌, "ನ್ಯಾಷನಲ್‌ ಸೆಂಟರ್‌ ಫಾರ್‌ ಡಿಸೀಸ್‌ ಕಂಟ್ರೋಲ್‌ (ಎನ್‌ಸಿಡಿಸಿ) ಹಾಗೂ ನ್ಯಾಷನಲ್‌ ವೆಕ್ಟರ್‌ ಬಾರ್‍ನೆ ಡಿಸೀಸ್‌ ಕಂಟ್ರೋಲ್‌ ಪ್ರೊಗ್ರಾಮ್‌ (ಎನ್‌ವಿಬಿಡಿಸಿಪಿ) ಅಧಿಕಾರಿಗಳು, ಉತ್ತರ ಪ್ರದೇಶದ ಫಿರೋಜಾಬಾದ್‌ನಲ್ಲಿ ಅನೇಕ ಸಾವುಗಳು ಡೆಂಗ್ಯೂವಿನಿಂದ ಹಾಗೂ ಕೆಲವು ಸಾವುಗಳು ಸೋಂಕಿನಿಂದಾಗಿ ಅಥವಾ ಪ್ರಾಣಿಗಳ ಮೂತ್ರದಿಂದ ಉಂಟಾಗುವ ಸೋಂಕಿನಿಂದಾಗಿ ಸಂಭವಿಸಿದೆ ಎಂದು ಗಮನಿಸಿದೆ," ಎಂದು ಹೇಳಿದ್ದಾರೆ.

 Major death cases in Firozabad among children due to dengue, Central team finds out

ಕೇಂದ್ರದ ತಂಡವು ತನಿಖೆಯಲ್ಲಿ ಪತ್ತೆ ಮಾಡಿದಂತೆ, ಉತ್ತರ ಪ್ರದೇಶ ಸರ್ಕಾರವು ಎಲ್ಲಾ ರೋಗಿಗಳ ಡೆಂಗ್ಯೂ, ಮಲೇರಿಯಾ, ಸ್ಕ್ರಬ್‌ ಟೈಪೋಸ್‌ ಹಾಗೂ ಲೆಪ್ಟೊಸ್ಪಿರೊಸಿಸ್‌ ಪರೀಕ್ಷೆಗೆ ಒಳಪಡಿಸುವಂತೆ ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ್‌ ಭೂಷಣ್‌ ಪತ್ರದ ಮೂಲಕ ಒತ್ತಾಯ ಮಾಡಿದ್ದಾರೆ.

''ಕೇಂದ್ರ ತಂಡದಿಂದ ನೀಡಲಾದ ಸಣ್ಣ ಒಂದು ಯೋಜನೆಯ ಭಾಗವಾಗಿ ಜ್ವರದ ಕುರಿತಾದ ಸಮೀಕ್ಷೆಯು ಮುಂದುವರಿಯಬೇಕು. ಹಾಗೆಯೇ ಎಲಿಸಾ (ಕಿಣ್ವ-ಸಂಬಂಧಿತ ಇಮ್ಯುನೊಸರ್ಬೆಂಟ್ ವಿಶ್ಲೇಷಣೆ) ಅಡಿಯಲ್ಲಿ ಪರೀಕ್ಷೆಗಳನ್ನು ನಡೆಸಬೇಕು,'' ಎಂದು ತಿಳಿಸಿದ್ದಾರೆ.

ಡೆಂಗ್ಯೂ ಶಂಕೆ: ಯುಪಿಯ ಫಿರೋಜಾಬಾದ್‌ನಲ್ಲಿ ಕಳೆದ ಹತ್ತು ದಿನದಲ್ಲೇ 45 ಮಕ್ಕಳು ಸಾವುಡೆಂಗ್ಯೂ ಶಂಕೆ: ಯುಪಿಯ ಫಿರೋಜಾಬಾದ್‌ನಲ್ಲಿ ಕಳೆದ ಹತ್ತು ದಿನದಲ್ಲೇ 45 ಮಕ್ಕಳು ಸಾವು

ಉತ್ತರ ಪ್ರದೇಶದ ಫಿರೋಜಾಬಾದ್‌ನಲ್ಲಿ ಡೆಂಗ್ಯೂ ಹಾಗೂ ವೈರಲ್‌ ಜ್ವರದ ಪ್ರಕರಣಗಳು ದಿನ ಕಳೆದಂತೆ ಏರಿಕೆಯಾಗುತ್ತಿದೆ. ಈ ನಡುವೆ ಬೇಜವಾಬ್ದಾರಿ ತೋರಿದ ಆರೋಪದ ಮೇಲೆ ಮಸ್ತೇನ ಗ್ರಾಮದ ಪಂಚಾಯತ್‌ ಅಭಿವೃದ್ದಿ ಅಧಿಕಾರಿ ದೀಪಕ್‌ ಯಾದವ್‌ರನ್ನು ಅಮಾನತು ಮಾಡಲಾಗಿದೆ ಎಂದು ಜಿಲ್ಲಾಡಳಿತ ಮಾಹಿತಿ ನೀಡಿದೆ. ಗ್ರಾಮದಲ್ಲಿ ಈ ರೀತಿಯಾಗಿ ಡೆಂಗ್ಯೂ ಹಾಗೂ ವೈರಲ್‌ ಜ್ವರದ ಪ್ರಕರಣಗಳು ಏರಿಕೆಯಾಗುತ್ತಿದ್ದರೂ ಜವಾಬ್ದಾರಿಯುತವಾಗಿ ವರ್ತಿಸದ ಕಾರಣ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಜಿಲ್ಲಾಡಳಿತ ಹೇಳಿದೆ.

ಈ ನಡುವೆ ಪ್ರಗತಿಶೀಲ ಸಮಾಜವಾದಿ ಪಕ್ಷ (ಲೋಹಿಯಾ) ಮುಖ್ಯಸ್ಥ ಶಿವ್‌ಪಾಲ್‌ ಸಿಂಗ್‌ ಯಾದವ್‌, "ಪ್ರತಿದಿನ ಸುಮಾರು 200 ರಷ್ಟು ಡೆಂಗ್ಯೂ ರೋಗಿಗಳು ಹಾಗೂ ವೈರಲ್‌ ಜ್ವರದ ರೋಗಿಗಳು ಆಸ್ಪತ್ರೆಗೆ ಬರುತ್ತಿದ್ದಾರೆ," ಎಂದು ಹೇಳಿದ್ದಾರೆ. "ರೋಗಿಗಳು ಅಧಿಕ ಸಂಖ್ಯೆಯಲ್ಲಿ ಆಸ್ಪತ್ರೆಗೆ ದಾಖಲಾಗುತ್ತಿರುವ ಹಿನ್ನೆಲೆ ಆಸ್ಪತ್ರೆಯಲ್ಲಿ ಬೆಡ್‌ಗಳ ಕೊರತೆಯೂ ಕಾಣಿಸಿಕೊಂಡಿದೆ. ರೋಗಿಗಳಿಗೆ ನೀಡಲಾಗುತ್ತಿರುವ ಔಷಧೀಯು ಉತ್ತಮ ಗುಣಮಟ್ಟದ್ದು ಅಲ್ಲ," ಎಂದು ಆರೋಪ ಮಾಡಿದ್ದಾರೆ.

(ಒನ್‌ ಇಂಡಿಯಾ ಸುದ್ದಿ)

English summary
Major death cases in Firozabad among children due to dengue, Central team finds out.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X