• search
  • Live TV
ಲಕ್ನೋ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಉತ್ತರ ಪ್ರದೇಶ ಸಾಮೂಹಿಕ ಅತ್ಯಾಚಾರ, ಕೊಲೆ: ಪ್ರಮುಖ ಆರೋಪಿಯ ಬಂಧನ

|

ಲಕ್ನೋ, ಜನವರಿ 08: ಉತ್ತರ ಪ್ರದೇಶದಲ್ಲಿ ನಡೆದ ನಿರ್ಭಯಾ ಮಾದರಿಯ ಸಾಮೂಹಿಕ ಅತ್ಯಾಚಾರ ಕೊಲೆಗೆ ಸಂಬಂಧಿಸಿದಂತೆ ಪ್ರಮುಖ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ದೆಹಲಿಯ ನಿರ್ಭಯಾ ಸಾಮೂಹಿಕ ಅತ್ಯಾಚಾರ ಪ್ರಕರಣದ ನೆನಪಿಸುವಂತಹ ಮತ್ತೊಂದು ಪೈಶಾಚಿಕ ಕೃತ್ಯ ಉತ್ತರ ಪ್ರದೇಶದ ಬದೌನ್ ಜಿಲ್ಲೆಯ ಉಘೈತಿ ಪೊಲೀಸ್ ಠಾಣಾ ವ್ಯಾಪ್ತಿಯ ಮೇವಾಲಿ ಗ್ರಾಮದಲ್ಲಿ ನಡೆದಿತ್ತು.

ಉತ್ತರ ಪ್ರದೇಶದಲ್ಲಿ 'ನಿರ್ಭಯಾ' ಮಾದರಿಯಲ್ಲಿ ಭೀಕರ ಸಾಮೂಹಿಕ ಅತ್ಯಾಚಾರ, ಕೊಲೆ

ಮಹಿಳೆಯೊಬ್ಬರ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿ ಮಹಿಳೆಯ ಖಾಸಗಿ ಅಂಗಕ್ಕೆ ರಾಡ್‌ನಿಂದ ಕ್ರೂರವಾಗಿ ಹೊಡೆದು ಮಹಿಳೆಯನ್ನು ಹತ್ಯೆಗೈಯಲಾಗಿತ್ತು.

ಪ್ರಮುಖ ಆರೋಪಿ ಸತ್ಯನಾರಾಯಣನನ್ನು ಪೊಲೀಸರು ಬಂಧಿಸಿದ್ದಾರೆ.ವರದಿಗಳ ಪ್ರಕಾರ ಮಹಿಳೆಯು ರವಿವಾರ ಸಂಜೆ ಸಮೀಪದ ದೇವಸ್ಥಾನವೊಂದಕ್ಕೆ ತೆರಳಿದ್ದು ಮನೆಗೆ ವಾಪಾಸ್‌ ಬಂದಿರಲಿಲ್ಲ. ರವಿವಾರ ರಾತ್ರಿ ಸುಮಾರು 12 ಗಂಟೆಗೆ ಮಹಿಳೆಯ ಶವ ಮನೆಯ ಹೊರಗೆ ಆರೋಪಿಗಳು ಎಸೆದಿದ್ದರು.

ಮೃತ ಮಹಿಳೆಯ ಶವವನ್ನು ಮಹಿಳಾ ವೈದ್ಯರು ಸೇರಿದಂತೆ ಮೂವರು ವೈದ್ಯರ ತಂಡವು ಮರಣೋತ್ತರ ಪರೀಕ್ಷೆ ನಡೆಸಿದ್ದು ದುಷ್ಕರ್ಮಿಗಳು ಆಕೆಯ ಶ್ವಾಸಕೋಶಕ್ಕೆ ಹಾನಿ ಮಾಡಿದ್ದಾರೆ. ಕಾಲು ಮತ್ತು ಪಕ್ಕೆಲುಬುಗಳನ್ನು ಮುರಿದಿದೆ. ಖಾಸಗಿ ಅಂಗಗಳಿಗೆ ಕಬ್ಬಿಣದ ರಾಡಿನಿಂದ ಹಲ್ಲೆ ನಡೆಸಿದ್ದರು..

English summary
The main accused in the gang-rape and murder case of a 50-year-old woman has been arrested in western Uttar Pradesh's Budaun, the district magistrate said on Thursday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X