ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇಂಡಿಯಾ ಟಿವಿ-ಸಿಎನ್ಎಕ್ಸ್ ಸಮೀಕ್ಷೆ: ಉತ್ತರ ಪ್ರದೇಶದಲ್ಲಿ ಕುಸಿಯಲಿದೆ ಬಿಜೆಪಿ ಬಲ

|
Google Oneindia Kannada News

ನವದೆಹಲಿ, ನವೆಂಬರ್ 16: ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥ ಸರ್ಕಾರ ಅಧಿಕಾರದಲ್ಲಿದ್ದರೂ, ಲೋಕಸಭೆಯಲ್ಲಿ ಬಿಜೆಪಿಯ ಬಲ ಕುಸಿಯುವ ಸಾಧ್ಯತೆ ಹೆಚ್ಚಾಗಿದೆ.

2014ರ ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಉತ್ತರ ಪ್ರದೇಶದಲ್ಲಿ ಸಮಾಜವಾದಿ ಪಕ್ಷ ಅಧಿಕಾರದಲ್ಲಿ ಇದ್ದರೂ ಮೋದಿ ಅಲೆಯು 80 ಸೀಟುಗಳ ಪೈಕಿ 71 ಸೀಟುಗಳನ್ನು ಬಿಜೆಪಿಗೆ ತಂದುಕೊಟ್ಟಿತ್ತು. ಸಮಾಜವಾದಿ ಮತ್ತು ಕಾಂಗ್ರೆಸ್ ಸೇರಿದಂತೆ ವಿರೋಧ ಪಕ್ಷಗಳು ಇದರಿಂದ ಕಂಗೆಟ್ಟಿದ್ದವು.

ಆದರೆ, ಈ ಬಾರಿ ಇದೇ ರೀತಿಯ ಪರಿಸ್ಥಿತಿ ಬಿಜೆಪಿಗೆ ಎದುರಾಗಲಿದೆ ಎಂದು ಇಂಡಿಯಾ ಟಿವಿ-ಸಿಎನ್ಎಕ್ಸ್ ನಡೆಸಿದ ಜಂಟಿ ಸಮೀಕ್ಷೆ ಹೇಳಿದೆ.

ಇಂಡಿಯಾ ಟಿವಿ-ಸಿಎನ್ಎಕ್ಸ್ ಸಮೀಕ್ಷೆ : ಒರಿಸ್ಸಾದಲ್ಲಿ ಬಿಜೆಡಿನೇ ಕಿಂಗ್ ಇಂಡಿಯಾ ಟಿವಿ-ಸಿಎನ್ಎಕ್ಸ್ ಸಮೀಕ್ಷೆ : ಒರಿಸ್ಸಾದಲ್ಲಿ ಬಿಜೆಡಿನೇ ಕಿಂಗ್

ಈ ಬಾರಿ ವಿರೋಧಪಕ್ಷಗಳೆಲ್ಲವೂ ಒಂದಾಗಿ ರೂಪಿಸಲಿರುವ 'ಮಹಾಘಟಬಂಧನ್' ಮೈತ್ರಿಕೂಟ ಆಡಳಿತಾರೂಢ ಬಿಜೆಪಿಗೆ ಭಾರಿ ಹಿನ್ನಡೆ ಉಂಟುಮಾಡಲಿದ್ದು, ಉತ್ತರ ಪ್ರದೇಶದಲ್ಲಿಯೂ ಬಿಜೆಪಿ ತನ್ನ ಪ್ರಾಬಲ್ಯವನ್ನು ಕಳೆದುಕೊಳ್ಳುವಂತೆ ಮಾಡಲಿದೆ.

ಸಮೀಕ್ಷೆಯಲ್ಲಿ ಸಂಗ್ರಹಿಸಿರುವ ಅಭಿಪ್ರಾಯದ ಪ್ರಕಾರ, ಉತ್ತರ ಪ್ರದೇಶದಲ್ಲಿ ಬಿಜೆಪಿ ಮೇಲೆ ಮಹಾಮೈತ್ರಿಕೂಟ ಗದಾಪ್ರಹಾರ ನಡೆಸಲಿದ್ದು, ಬಿಜೆಪಿ ಈಗಿರುವ ತನ್ನ ಸಂಸತ್ ಸದಸ್ಯ ಬಲವನ್ನು ಹೆಚ್ಚೂ ಕಡಿಮೆ ಅರ್ಧದಷ್ಟು ಕಳೆದುಕೊಳ್ಳಲಿದೆ ಎನ್ನಲಾಗಿದೆ.

ಶಿವರಾಜ್ ಸಿಂಗ್ ಚೌಹಾಣ್ ಗೆ ಭರ್ಜರಿ ಗೆಲುವು: ಟೈಮ್ಸ್ ನೌ ಸಿಎನ್ಎಕ್ಸ್ಶಿವರಾಜ್ ಸಿಂಗ್ ಚೌಹಾಣ್ ಗೆ ಭರ್ಜರಿ ಗೆಲುವು: ಟೈಮ್ಸ್ ನೌ ಸಿಎನ್ಎಕ್ಸ್

2014ರ ಸಾರ್ವತ್ರಿಕ ಚುನಾವಣೆಯಂತೆಯೇ ಈ ಚುನಾವಣೆಯಲ್ಲಿಯೂ ಕಾಂಗ್ರೆಸ್ ಕಂಗೆಡಲಿದೆ. ಆದರೆ, ಮಹಾಮೈತ್ರಿಕೂಟ ಅದರ ನೆರವಿಗೆ ಬರಲಿದೆ. ಒಡಿಶಾದಲ್ಲಿ ಕಳೆದ ಬಾರಿ ಮೋದಿ ಅಲೆ ಇದ್ದರೂ ಬಿಜೆಪಿ ಒಂದೇ ಒಂದು ಸ್ಥಾನವನ್ನು ಗೆದ್ದುಕೊಂಡಿತ್ತು. ಬಿಜೆಡಿ 20 ಸ್ಥಾನಗಳನ್ನು ತನ್ನದಾಗಿಸಿಕೊಂಡಿತ್ತು.

ಆರು ರಾಜ್ಯಗಳ 171 ಸಂಸತ್ ಕ್ಷೇತ್ರಗಳಲ್ಲಿ ಅ.25ರಿಂದ ನ.12ರವರೆಗೆ ಇಂಡಿಯಾ ಟಿವಿ-ಸಿಎನ್ಎಕ್ಸ್ ಸಮೀಕ್ಷೆ ನಡೆಸಿದೆ.

ಕುಸಿಯಲಿದೆ ಬಿಜೆಪಿ ಶಕ್ತಿ

ಕುಸಿಯಲಿದೆ ಬಿಜೆಪಿ ಶಕ್ತಿ

ಉತ್ತರ ಪ್ರದೇಶದಲ್ಲಿ ವಿರೋಧ ಪಕ್ಷಗಳ ಮಹಾ ಮೈತ್ರಿಕೂಟ ದೊಡ್ಡ ಮಟ್ಟದಲ್ಲಿ ಕೆಲಸ ಮಾಡಲಿದ್ದು, ಲೋಕಸಭೆ ಚುನಾವಣೆಯಲ್ಲಿ ಮೈತ್ರಿಕೂಟ 49 ಸೀಟುಗಳನ್ನು ಪಡೆದುಕೊಳ್ಳಲಿದೆ. ಎನ್‌ಡಿಎ ಒಕ್ಕೂಟದ ಸಾಮರ್ಥ್ಯ 71ರಿಂದ 31ಕ್ಕೆ ಕುಸಿಯಲಿದೆ.

ಎಬಿಪಿ-ಸಿಎಸ್ ಡಿಎಸ್ ಸಮೀಕ್ಷೆ: ರಾಜಸ್ಥಾನದಲ್ಲಿ ಅಧಿಕಾರ ಕಳೆದುಕೊಳ್ಳಲಿದೆ ಬಿಜೆಪಿಎಬಿಪಿ-ಸಿಎಸ್ ಡಿಎಸ್ ಸಮೀಕ್ಷೆ: ರಾಜಸ್ಥಾನದಲ್ಲಿ ಅಧಿಕಾರ ಕಳೆದುಕೊಳ್ಳಲಿದೆ ಬಿಜೆಪಿ

ಯಾರಿಗೆ ಎಷ್ಟು ಸೀಟುಗಳು?

ಯಾರಿಗೆ ಎಷ್ಟು ಸೀಟುಗಳು?

ಉತ್ತರ ಪ್ರದೇಶದಲ್ಲಿ ಇಂಡಿಯಾ ಟುಡೆ-ಸಿಎನ್‌ಎಕ್ಸ್ ಸಮೀಕ್ಷೆ ಪ್ರಕಾರ ಮಹಾಮೈತ್ರಿಕೂಟ ಪಡೆಯುವ ಸೀಟುಗಳು ಹೀಗಿವೆ.
ಬಿಎಸ್ಪಿ- 18
ಎಸ್ಪಿ- 21
ಕಾಂಗ್ರೆಸ್- 8
ಆರ್‌ಎಲ್‌ಡಿ- 2

ಎನ್‌ಡಿಎ ಒಕ್ಕೂಟದ ಸೀಟುಗಳು
ಬಿಜೆಪಿ- 30
ಅಪ್ನಾದಳ್-1

ಮೋದಿ ಬಲಿಷ್ಠ, ಮಾಯಾ-ಅಖಿಲೇಶ್ ಕೈಜೋಡಿಸಿದರೆ ಬಿಜೆಪಿಗೆ ಕಷ್ಟಕಷ್ಟಮೋದಿ ಬಲಿಷ್ಠ, ಮಾಯಾ-ಅಖಿಲೇಶ್ ಕೈಜೋಡಿಸಿದರೆ ಬಿಜೆಪಿಗೆ ಕಷ್ಟಕಷ್ಟ

ಮಹಾಮೈತ್ರಿ ವಿಫಲವಾದರೆ?

ಮಹಾಮೈತ್ರಿ ವಿಫಲವಾದರೆ?

ಈ ಸಮೀಕ್ಷೆಯು ಒಂದು ವೇಳೆ ಮಹಾಮೈತ್ರಿಕೂಟ ವಿಫಲವಾದರೆ ಸೀಟುಗಳು ಯಾವ ರೀತಿ ಹಂಚಿಕೆಯಾಗಬಹುದು ಎಂಬ ಅಭಿಪ್ರಾಯವನ್ನೂ ಸಮೀಕ್ಷೆ ಸಂಗ್ರಹಿಸಿದೆ.

ಬಿಎಸ್ಪಿ, ಎಸ್ಪಿ, ಕಾಂಗ್ರೆಸ್ ಒಂದಾಗಿ ಚುನಾವಣೆಯನ್ನು ಎದುರಿಸದೆ ಪ್ರತ್ಯೇಕವಾಗಿ ಕಣಕ್ಕೆ ಇಳಿದರೆ ಬಿಜೆಪಿ 80 ಸೀಟುಗಳ ಪೈಕಿ 55ರಲ್ಲಿ ಗೆಲುವು ಸಾಧಿಸಲಿದೆ. ಬಿಎಸ್ಪಿ 9, ಎಸ್ಪಿ 9, ಕಾಂಗ್ರೆಸ್ 5, ಆರ್ಎಲ್ ಡಿ ಮತ್ತು ಅಪ್ನಾ ದಳ್ 1 ಸ್ಥಾನಗಳನ್ನು ಪಡೆದುಕೊಳ್ಳಲಿದೆ.

ಎಬಿಪಿ ಸಮೀಕ್ಷೆ: ಎನ್‌ಡಿಎಗೆ 300, ಯುಪಿಎಗೆ 116, ಇತರೆ 127 ಸ್ಥಾನಗಳುಎಬಿಪಿ ಸಮೀಕ್ಷೆ: ಎನ್‌ಡಿಎಗೆ 300, ಯುಪಿಎಗೆ 116, ಇತರೆ 127 ಸ್ಥಾನಗಳು

ಶೇಕಡಾವಾರು ಮತಹಂಚಿಕೆ

ಶೇಕಡಾವಾರು ಮತಹಂಚಿಕೆ

ಬಿಜೆಪಿ - 39.19%
ಬಿಎಸ್ಪಿ - 20%
ಎಸ್ಪಿ- 20.55%
ಕಾಂಗ್ರೆಸ್- 11.91%

English summary
The India TV-CNX Opinion Poll on Thursday has given a fair prediction for next year's Lok Sabha polls which clearly indicates that if the 'Mahagathbandhan' alliance of opposition parties materializes in Uttar Pradesh, then the strength of the ruling BJP party will reduce from the state in Parliament by almost half.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X