ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಾಮಪತ್ರ ಸಲ್ಲಿಸಿದರೂ ರಾಜನಾಥ್ ಸಿಂಗ್ ಪ್ರತಿಸ್ಪರ್ಧಿ ಯಾರು ಗೊತ್ತಿಲ್ಲ!

|
Google Oneindia Kannada News

ಲಕ್ನೋ, ಏಪ್ರಿಲ್ 16: ಉತ್ತರ ಪ್ರದೇಶದ ಲಕ್ನೋ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಗೃಹಸಚಿವ ರಾಜನಾಥ್ ಸಿಂಗ್ ಮಂಗಳವಾರ ನಾಮಪತ್ರ ಸಲ್ಲಿಸಿದ್ದಾರೆ. ಆದರೆ ನಾಮಪತ್ರ ಸಲ್ಲಿಸಿದ ನಂತರವೂ ಅವರಿಗೆ ತಮ್ಮ ಪ್ರತಿಸ್ಪರ್ಧಿ ಯಾರು ಎಂಬುದು ಇನ್ನೂ ಗೊತ್ತಾಗಿಲ್ಲ! ಯಾಕಂದ್ರೆ ಕಾಂಗ್ರೆಸ್ ಆಗಲೀ, ಅಥವಾ ಬೇರೆ ಪಕ್ಷಗಳಾಗಲೀ ಅವರ ವಿರುದ್ಧ ತಮ್ಮ ಅಭ್ಯರ್ಥಿಯನ್ನು ಇನ್ನೂ ಘೋಷಿಸಿಲ್ಲ!

ಬಿಜೆಪಿ, ಕಾಂಗ್ರೆಸ್, ಸಿಪಿಎಂ ಪ್ರಣಾಳಿಕೆಯ ತುಲನೆ. ಯಾವ ಪಕ್ಷದ ಪ್ರಣಾಳಿಕೆ ಉತ್ತಮವಾಗಿದೆ?

ಮೇ 6 ಕ್ಕೆ ಲಕ್ನೋದಲ್ಲಿ ಚುನಾವಣೆ ನಡೆಯಲಿದ್ದು, ನಾಮಪತ್ರ ಸಲ್ಲಿಸಲು ಏಪ್ರಿಲ್ 18 ಕೊನೇ ದಿನ. ಆದರೂ ಇನ್ನೂ ಅಭ್ಯರ್ಥಿಗಳನ್ನೇ ಘೋಷಿಸಿಲ್ಲ.

ಉತ್ತರ ಪ್ರದೇಶ ರಾಜಧಾನಿ ಲಕ್ನೊ ಲೋಕಸಭಾ ಕ್ಷೇತ್ರ ಪರಿಚಯಉತ್ತರ ಪ್ರದೇಶ ರಾಜಧಾನಿ ಲಕ್ನೊ ಲೋಕಸಭಾ ಕ್ಷೇತ್ರ ಪರಿಚಯ

2009 ರಲ್ಲಿ ಗಾಜಿಯಾಬಾದ್ ನಿಂದ ಸ್ಪರ್ಧಿಸಿ ಗೆದ್ದಿದ್ದ ರಾಜನಾಥ್ ಸಿಂಗ್, 2014 ರಲ್ಲಿ ಲಕ್ನೋ ದಿಂದ ಸ್ಪರ್ಧಿಸಿದ್ದರು.

LS polls: Rajnath Singh does not have a opponent yet in Lucknow

2014 ರಲ್ಲಿ ಸಿಂಗ್, 561106 ಮತಗಳನ್ನು ಪಡೆಯುವ ಮೂಲಕ ಜಯಗಳಿಸಿದ್ದರು. ಇವರ ವಿರುದ್ಧ ಸ್ಪರ್ಧಿಸಿದ್ದ ರಿತಾ ಬಹುಗುಣ ಅವರು 272749 ಮತಗಳನ್ನು ಪಡೆದಿದ್ದರು. ಮೂರನೇ ಸ್ಥಾನ ಗೆದ್ದಿದ್ದ ನಕುಲ್ ದುಬೆ 64,449 ಮತಗಳನ್ನು ಪಡೆದಿದ್ದರು.

2014 ರ ಲೋಕಸಭಾ ಚುನಾವಣೆಯಲ್ಲಿ ಈ ಕ್ಷೇತ್ರದ ಒಟ್ಟು ಮತದಾರರ ಸಂಖ್ಯೆ 1,949,956. ಇವರಲ್ಲಿ 1,052,171 ಪುರುಷರು, 897,785 ಮಹಿಳೆಯರು.

ಜನರ ಖಾತೆಗಳಿಗೆ 15 ಲಕ್ಷ ಬರುತ್ತದೆ ಎಂದು ಹೇಳಿಯೇ ಇಲ್ಲ; ರಾಜನಾಥ್ ಸಿಂಗ್

1991 ರ ಆಚೆಯಿಂದಲೂ ಈ ಕ್ಷೇತ್ರ ಭಾರತೀಯ ಜನತಾ ಪಕ್ಷದ ಭದ್ರಕೋಟೆಯಾಗಿದೆ.

English summary
Lok Sabha elections 2019: Home Minister Rajnath Singh does not know who is his opponent in Lucknow constituency in Uttara Pradesh, even after filing his nomination!
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X