ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಾರಣಾಸಿಯಲ್ಲಿ ಮೋದಿ ವಿರುದ್ಧ ಕಾಂಗ್ರೆಸ್ ನಿಂದ ಅಜಯ್ ರೈ ಕಣಕ್ಕೆ

|
Google Oneindia Kannada News

ವಾರಣಾಸಿ, ಏಪ್ರಿಲ್ 25: ಉತ್ತರ ಪ್ರದೇಶದ ವಾರಣಾಸಿಯಲ್ಲಿ ಬಿಜೆಪಿಯ ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಕಾಂಗ್ರೆಸ್ ಅಜಯ್ ರೈ ಅವರನ್ನು ತನ್ನ ಅಭ್ಯರ್ಥಿಯನ್ನಾಗಿ ಘೋಷಿಸಿದೆ.

2014 ರ ಲೋಕಸಭೆ ಚುನಾವಣೆಯಲ್ಲೂ ನರೇಂದ್ರ ಮೋದಿ ಅವರ ವಿರುದ್ಧ 49 ವರ್ಷ ವಯಸ್ಸಿನ ಅಜಯ್ ರೈ ಅವರನ್ನೇ ಕಾಂಗ್ರೆಸ್ ಕಣಕ್ಕಿಳಿಸಿತ್ತು.

ವಾರಣಾಸಿಯಲ್ಲಿ ಕೊನೇ ಕ್ಷಣದ ಆಘಾತ? ಅಡಕತ್ತರಿಯಲ್ಲಿ ಮೋದಿ?ವಾರಣಾಸಿಯಲ್ಲಿ ಕೊನೇ ಕ್ಷಣದ ಆಘಾತ? ಅಡಕತ್ತರಿಯಲ್ಲಿ ಮೋದಿ?

ಈ ಚುನಾವಣೆಯಲ್ಲಿ ನರೇಂದ್ರ ಮೋದಿ ಅವರು 5,81,022 ಮತಗಳನ್ನು ಪಡೆದರೆ, ಅರವಿಂದ್ ಕೇಜ್ರಿವಾಲ್ 2,09,238 ಮತಗಳನ್ನು ಪಡೆದಿದ್ದರು. ಅಜಯ್ ರೈ ಕೇವಲ 75,614 ಮತಗಳನ್ನು ಪಡೆದು ಮೂರನೇ ಸ್ಥಾನದಲ್ಲಿದ್ದರು.

LS polls: Ajay Rai to be the Congress candidate from Varanasi

ಐದು ಬಾರಿ ಶಾಸಕರಾಗಿದ್ದ ಅಜಯ್ ರೈ ಮೊದಲಿಗೆ ಬಿಜೆಪಿಯಲ್ಲೇ ಇದ್ದವರು. 2009 ರ ಲೋಕಸಭಾ ಚುನಾವಣೆಯಲ್ಲಿ ತಮಗೆ ಟಿಕೆಟ್ ಸಿಗದ ಕಾರಣ, ಸಮಾಜವಾದಿ ಪಕ್ಷದಿಂದ ವಾರಣಾಸಿಯಿಂದಲೇ ಸ್ಪರ್ಧಿಸಿ ಸೋತಿದ್ದರು.

ವಾರಣಾಸಿಯಿಂದ ಪ್ರಿಯಾಂಕವಾದ್ರಾ ಸ್ಪರ್ಧಿಸದಿರಲು ಕಾರಣವೇನು?ವಾರಣಾಸಿಯಿಂದ ಪ್ರಿಯಾಂಕವಾದ್ರಾ ಸ್ಪರ್ಧಿಸದಿರಲು ಕಾರಣವೇನು?

ನಂತರ 2014 ರ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ನಿಂದ ವಾರಣಾಸಿ ಕ್ಷೇತ್ರದಿಂದ ಸ್ಪರ್ಧಿಸಿದ್ದರು.

1996 ರಿಂದ 2007 ರವರೆಗೆ ಉತ್ತರ ಪ್ರದೇಶದ ಕೊಲಸ್ಲಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ, ಮೂರು ಬಾರಿಯೂ ಗೆಲುವು ಸಾಧಿಸಿದ್ದರು ಅಜಯ್ ರೈ.

English summary
Lok Sabha elections 2019: Ajay Rai to be the Congress candidate from Varanasi
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X