ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲವ್ ಜಿಹಾದ್ ವದಂತಿ: ಮುಸ್ಲಿಂ ದಂಪತಿಯನ್ನು ಲಾಕ್‌ಅಪ್‌ನಲ್ಲಿಟ್ಟ ಪೊಲೀಸರು

|
Google Oneindia Kannada News

ಲಕ್ನೋ, ಡಿಸೆಂಬರ್ 11: ಲವ್ ಜಿಹಾದ್ ವದಂತಿ ಹಿನ್ನೆಲೆ ಮುಸ್ಲಿಂ ದಂಪತಿಯನ್ನು ಒಂದು ದಿನ ಪೂರ್ತಿ ಲಾಕ್‌ಅಪ್‌ನಲ್ಲಿ ಕಳೆಯುವಂತೆ ಮಾಡಿದೆ.

ಖುಷಿನಗರದಲ್ಲಿ ಮುಸಲ್ಮಾನ ಯುವಕ ಯುವತಿ ಮದುವೆ ಕಾರ್ಯ ನೆರವೇರುತ್ತಿತ್ತು. ಆದರೆ ಯಾರೋ ಕರೆ ಮಾಡಿ ವದಂತಿ ಹಬ್ಬಿಸಿದ್ದ ಹಿನ್ನೆಲೆಯಲ್ಲಿ ವಧುವನ್ನು ಇಸ್ಲಾಂ ಧರ್ಮಕ್ಕೆ ಮತಾಂತರ ಮಾಡುತ್ತಿದ್ದಾರೆ ಎನ್ನುವ ಸುಳ್ಳು ಸುದ್ದಿ ಪೊಲೀಸರ ಕಿವಿಗೆ ಬಿದ್ದಿತ್ತು.

ವಿವಾಹ ನೋಂದಣಿಗೆ ಬಂದಿದ್ದ ಯುವಕನ ಬಂಧಿಸಿದ ಮೊರಾದಾಬಾದ್ ಪೊಲೀಸರುವಿವಾಹ ನೋಂದಣಿಗೆ ಬಂದಿದ್ದ ಯುವಕನ ಬಂಧಿಸಿದ ಮೊರಾದಾಬಾದ್ ಪೊಲೀಸರು

ಮದುವೆ ಮನೆಗೆ ಹೋದವರೆ ಯಾರನ್ನೂ ವಿಚಾರಿಸಿದೆ ದಂಪತಿಯನ್ನು ಪೊಲೀಸ್‌ ಠಾಣೆಗೆ ಕರೆ ತಂದಿದ್ದರು.ಇಡೀ ದಿನ ಇಬ್ಬರನ್ನು ಲಾಕ್‌ಅಪ್‌ ಒಳಗೆ ಇಡಲಾಗಿತ್ತು. ಯುವತಿ ನಾನು ಮುಸ್ಲಿಂ ಸಮುದಾಯದವಳು, ನನ್ನನ್ನು ಯಾರೂ ಮತಾಂತರ ಮಾಡುತ್ತಿಲ್ಲ ಎಂದು ಕೇಳಿಕೊಂಡರೂ ಪೊಲೀಸರಿಗೆ ಅರಿವಾಗಲಿಲ್ಲ.

Love Jihad Rumour: Wedding Stopped In UP, Muslim Couple Kept Overnight At Police Station

ಬಳಿಕ ಮನೆಗೆ ಕರೆ ಮಾಡಿ ಪೋಷಕರ ಬಳಿ ವಿಚಾರಿಸಿ, ನನ್ನ ಆಧಾರ್ ಕಾರ್ಡ್ ನೀಡುತ್ತೇನೆ ಅದನ್ನೂ ನೋಡಿಕೊಳ್ಳಿ ಎಂದು ಅಂಗಲಾಚಿದ್ದಾಳೆ.ಅಷ್ಟೊರೊಳಗೆ ವಧು ಹಾಗೂ ವರರಿಗಿಬ್ಬರಿಗೂ ಪೊಲೀಸರು ಲಾಠಿ ರುಚಿ ತೋರಿಸಿದ್ದರು. ಇಬ್ಬರು ಕುಟುಂಬದವರು ಪೊಲೀಸ್ ಠಾಣೆಗೆ ಬರುವವರೆಗೂ ಅವರನ್ನು ಬಿಡುಗಡೆ ಮಾಡುವುದಿಲ್ಲ ಎಂದು ಪೊಲೀಸರು ಹೇಳಿದ್ದರು.

ಪೊಲೀಸ್ ಠಾಣೆಯಿಂದ 130 ಕಿ.ಮೀ ದೂರದಲ್ಲಿರುವ ವಧುವಿನ ಅಣ್ಣ ಕೊನೆಗೂ ಪೊಲೀಸ್ ಠಾಣೆಗೆ ಬಂದಿದ್ದು, ಆಕೆ ಮುಸ್ಲಿಂ ಸಮುದಾಯಕ್ಕೆ ಸೇರಿದವಳು, ಮದುವೆಗೆ ನಮ್ಮ ಯಾವುದೇ ಅಭ್ಯಂತರವಿಲ್ಲ ಎಂದು ತಿಳಿಸಿದ್ದಾರೆ ಬಳಿಕ ಅವರನ್ನು ಬಿಡುಗಡೆ ಮಾಡಲಾಗಿದೆ.

English summary
The police in Kushinagar, Uttar Pradesh, stopped a wedding ceremony on Tuesday and took away the couple following a phone call claiming that a Muslim man was marrying a Hindu woman after converting her, letting them go only the next day after finding that both were Muslims.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X