ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೋದಿ ಅವರ ಸೇನೆ: ವಿವಾದ ಸೃಷ್ಟಿಸಿದ ಯೋಗಿ ಆದಿತ್ಯನಾಥ್ ಹೇಳಿಕೆ

|
Google Oneindia Kannada News

ಗಾಜಿಯಾಬಾದ್, ಏಪ್ರಿಲ್ 1: ಭಾರತೀಯ ಸೇನೆಯನ್ನು ಮೋದಿಯವರ ಸೇನೆ ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ವ್ಯಾಖ್ಯಾನಿಸಿರುವುದು ತೀವ್ರ ರಾಜಕೀಯ ಗದ್ದಲ ಸೃಷ್ಟಿಸಿದ್ದು, ಯೋಗಿ ಆದಿತ್ಯನಾಥ್ ಅವರ ಕ್ಷಮೆ ಕೋರಬೇಕು ಎಂದು ವಿರೋಧಪಕ್ಷಗಳು ಆಗ್ರಹಿಸಿವೆ.

ಸ್ವಚ್ಛಗಂಗೆಯಲ್ಲಿ ಪ್ರಿಯಾಂಕಾ ಗಾಂಧಿ ದೋಣಿ ವಿಹಾರ: ಯೋಗಿ ವ್ಯಂಗ್ಯ! ಸ್ವಚ್ಛಗಂಗೆಯಲ್ಲಿ ಪ್ರಿಯಾಂಕಾ ಗಾಂಧಿ ದೋಣಿ ವಿಹಾರ: ಯೋಗಿ ವ್ಯಂಗ್ಯ!

ಗಾಜಿಯಾಬಾದ್‌ನಲ್ಲಿ ಚುನಾವಣಾ ಪ್ರಚಾರ ನಡೆಸಿದ್ದ ಯೋಗಿ ಆದಿತ್ಯನಾಥ್, ಭಯೋತ್ಪಾದನೆ ಮತ್ತು ಭಯೋತ್ಪಾದಕರ ಬಗ್ಗೆ ಕಾಂಗ್ರೆಸ್ ಸದಾ ಮೃದು ಧೋರಣೆ ತಳೆಯುತ್ತಿತ್ತು ಎಂದು ಕಿಡಿಕಾರಿದ್ದಾರೆ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

'ಕಾಂಗ್ರೆಸ್ ನೇತೃತ್ವದ ಸರ್ಕಾರವು ಭಯೋತ್ಪಾದಕರಿಗೆ ಬಿರಿಯಾನಿ ಪೂರೈಸುತ್ತಿತ್ತು. ಆದರೆ, ಮೋದಿಜಿ ಅವರ ಸೇನೆ ಅವರಿಗೆ ಗುಂಡು ಮತ್ತು ಬಾಂಬುಗಳನ್ನು ನೀಡಿತು. ಇಬ್ಬರ ನಡುವೆ ಇರುವ ವ್ಯತ್ಯಾಸ. ಮಸೂದ್ ಅಜರ್‌ನಂತಹ ಉಗ್ರರಿಗೆ 'ಜಿ' ಎಂದು ಸಂಬೋಧಿಸುವ ಮೂಲಕ ಭಯೋತ್ಪಾದಕರನ್ನು ಕಾಂಗ್ರೆಸ್ ಉತ್ತೇಜಿಸುತ್ತಿದೆ. ಆದರೆ, ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಉಗ್ರರ ನೆಲೆಗಳಿಗೆ ನುಗ್ಗಿ ಅವರನ್ನು ಹೊಡೆದುರುಳಿಸಿದ್ದಾರೆ ಎಂದಿದ್ದಾರೆ.

ಕಾಂಗ್ರೆಸ್ ಸರ್ಕಾರಕ್ಕೆ ಸಾಧ್ಯವಾಗದೇ ಇರುವುದು ಮೋದಿ ಅವರ ಸರ್ಕಾರಕ್ಕೆ ಸಾಧ್ಯವಾಗಿದೆ. ಮೋದಿ ಅವರಿದ್ದಾಗ ಅಸಾಧ್ಯವಾದುದ್ದೆಲ್ಲವೂ ಸಾಧ್ಯವಾಗುತ್ತದೆ ಎಂದು ಹೇಳಿದ್ದಾರೆ.

Lok Sabha elections 2019: Modi sena remarks by Yogi adityanath sparked row

ಇದಕ್ಕೆ ವಿರೋಧಪಕ್ಷಗಳು ಭಾರಿ ಆಕ್ಷೇಪ ವ್ಯಕ್ತಪಡಿಸಿವೆ.

ಯೋಗಿ ಆದಿತ್ಯನ್ಯಾಥ್ ಅವರ ಹೇಳಿಕೆಗಳು ಆಘಾತಕಾರಿಯಾಗಿವೆ ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ. ನಮ್ಮ ಪ್ರೀತಿಯ ಭಾರತೀಯ ಸೇನೆಯನ್ನು ಅವಮಾನ ಮತ್ತು ತೇಜೋವಧೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.

ಉತ್ತರ ಪ್ರದೇಶ ರಾಜಕೀಯದಲ್ಲಿ ಪ್ರಿಯಾಂಕಾ ಪ್ರಭಾವ, ಯೋಗಿ ಏನಂತಾರೆ? ಉತ್ತರ ಪ್ರದೇಶ ರಾಜಕೀಯದಲ್ಲಿ ಪ್ರಿಯಾಂಕಾ ಪ್ರಭಾವ, ಯೋಗಿ ಏನಂತಾರೆ?

'ಇದು ನಮ್ಮ ಸಶಸ್ತ್ರ ಸೇನಾಪಡೆಗಳಿಗೆ ಅವಮಾನಕರ. ಅವರು ಭಾರತದ ಸೇನಾ ಪಡೆಗಳು. ಪ್ರಚಾರ ಮಂತ್ರಿಯ ಖಾಸಗಿ ಸೇನೆಯಲ್ಲ.ಆದಿತ್ಯನಾಥ್ ಕ್ಷಮೆ ಕೋರಬೇಕು' ಎಂದು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಚತುರ್ವೇದಿ ಆಗ್ರಹಿಸಿದ್ದಾರೆ.

English summary
Lok Sabha elections 2019: Uttar Pradesh Chief Minister Yogi Adityanath sparked a row by callign Indian Army as Modi Sena. Opposition seeks apology from Yogi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X