ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗೌರವದ ಗಡಿಯನ್ನು ಮೀರಿದ ಬಿಜೆಪಿ ಬಗ್ಗೆ ಸೋನಿಯಾ ಗಾಂಧಿ ಆಕ್ರೋಶ

|
Google Oneindia Kannada News

Recommended Video

ಸೋನಿಯಾ ಗಾಂಧಿ ರಾಯ್ ಬರೇಲಿಯಲ್ಲಿ ನಡೆಸಿದ ಮೆರವಣಿಗೆ ವೇಳೆ ಅಕ್ರೋಶ | Oneindia Kannada

ರಾಯ್ ಬರೇಲಿ (ಉತ್ತರಪ್ರದೇಶ), ಜೂನ್ 13: ಆಡಳಿತಾರೂಢ ಬಿಜೆಪಿಯಿಂದ 'ಗೌರವದ ಗಡಿಯನ್ನು ಮೀರಲಾಗಿದೆ' ಎಂದು ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರು ರಾಯ್ ಬರೇಲಿಯಲ್ಲಿ ನಡೆಸಿದ ಮೆರವಣಿಗೆ ವೇಳೆ ಅಕ್ರೋಶ ವ್ಯಕ್ತಪಡಿಸಿದ್ದಾರೆ. ಲೋಕಸಭೆ ಚುನಾವಣೆ ಫಲಿತಾಂಶ ಬಂದ ನಂತರ ಮೊದಲ ಸಾರ್ವಜನಿಕ ಸಭೆಯಲ್ಲಿ ಅವರು ಮಾತನಾಡಿದರು.

ದೇಶದ ಚುನಾವಣೆ ಪ್ರಕ್ರಿಯೆ ಬಗ್ಗೆಯೇ 'ಹಲವು ಬಗೆಯ ಅನುಮಾನಗಳು' ಎದ್ದವು ಎಂದು ಆರೋಪಿಸಿದ ಅವರು, ಮತದಾರರ ಓಲೈಕೆಗೆ ಎಲ್ಲ ಬಗೆ ತಂತ್ರ ಅನುಸರಿಸಲಾಯಿತು. ಈ ದೇಶದ ಎಲ್ಲರಿಗೂ ಗೊತ್ತಿದೆ, ಚುನಾವಣೆಯಲ್ಲಿ ನಡೆದಿದ್ದು ನೈತಿಕ ಅಥವಾ ಅನೈತಿಕವೋ ಎಂಬ ಸಂಗತಿ ಎಂದು ಆಕೆ ಹೇಳಿದ್ದಾರೆ.

ಕಾಂಗ್ರೆಸ್ ಸಂಸದೀಯ ಪಕ್ಷದ ಅಧ್ಯಕ್ಷರಾಗಿ ಸೋನಿಯಾ ಗಾಂಧಿ ಆಯ್ಕೆಕಾಂಗ್ರೆಸ್ ಸಂಸದೀಯ ಪಕ್ಷದ ಅಧ್ಯಕ್ಷರಾಗಿ ಸೋನಿಯಾ ಗಾಂಧಿ ಆಯ್ಕೆ

ಮತ್ತೆ ಅಧಿಕಾರಕ್ಕೆ ಬರುವ ಸಲುವಾಗಿ ಎಲ್ಲ ಗೌರವ- ಪ್ರತಿಷ್ಠೆಗಳು ಗೌಣವಾಗಿದ್ದು ಹಾಗೂ ಮೀರಿದ್ದು ದುರದೃಷ್ಟಕರ ಸಂಗತಿ. ಚುನಾವಣೆ ಪ್ರಕ್ರಿಯೆಯೇ ನ್ಯಾಯಸಮ್ಮತವಾಗಿ ನಡೆದಿದೆಯೇ ಎಂಬ ಬಗ್ಗೆ ಅನುಮಾನವಿದೆ. ಕಳೆದ ಕೆಲವು ವರ್ಷಗಳಲ್ಲಿ ಚುನಾವಣೆ ಪ್ರಕ್ರಿಯೆ ಬಗ್ಗೆಯೇ ಹಲವು ಅನುಮಾನಗಳು ಉದ್ಭವವಾಗಿವೆ ಎಂದು ಅವರು ಹೇಳಿದ್ದಾರೆ.

Limits of dignity crossed during elections by BJP, alleged by Sonia Gandhi

ವಿದ್ಯುನ್ಮಾನ ಮತಯಂತ್ರಗಳನ್ನು ತಿರುಚಲಾಗಿದೆ ಎಂಬ ಆರೋಪ ಬಂದಿದ್ದರಿಂದ ಹಲವು ರಾಜ್ಯಗಳಲ್ಲಿ ಪ್ರಮುಖ ವಿಪಕ್ಷಗಳು ಅವುಗಳನ್ನು ಚುನಾವಣೆ ಫಲಿತಾಂಶಕ್ಕೆ ಮುನ್ನ ಹಗಲು- ರಾತ್ರಿ ಕಾಯಬೇಕಾಯಿತು ಎಂದು ಹೇಳಿದರು. ಇದೇ ವೇಳೆ ಸೋನಿಯಾ ಅವರ ಜತೆಗೆ ಮಗಳು ಪ್ರಿಯಾಂಕಾ ಗಾಂಧಿ ಸಹ ಇದ್ದರು.

ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯೊಂದೇ 303 ಸ್ಥಾನ ಗಳಿಸಿದರೆ, ಮಿತ್ರ ಪಕ್ಷಗಳೆಲ್ಲ ಸೇರಿ ಎನ್ ಡಿಎ ಲೆಕ್ಕಕ್ಕೆ 352 ಸ್ಥಾನಗಳು ಬಂದವು. ಕಾಂಗ್ರೆಸ್ 52 ಸ್ಥಾನಗಳಲ್ಲಿ ಗೆಲ್ಲಲು ಮಾತ್ರ ಸಾಧ್ಯವಾಯಿತು. 18 ರಾಜ್ಯ- ಕೇಂದ್ರಾಡಳಿತ ಪ್ರದೇಶಗಳಲ್ಲಿ ಕಾಂಗ್ರೆಸ್ ಧೂಳೀಪಟ ಆಯಿತು.

English summary
Limits of dignity crossed during elections by BJP, alleged by Sonia Gandhi in Raebareli constituency, Uttar Pradesh on Wednesday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X