ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉ.ಪ್ರ. ಬಿಜೆಪಿ ಮುಖಂಡನ ವಿರುದ್ಧ ದೂರು ನೀಡಿದ್ದ ಮಹಿಳೆಯ ಬಂಧನ

|
Google Oneindia Kannada News

ಲಖನೌ, ಸೆಪ್ಟೆಂಬರ್ 25: ಕೇಂದ್ರದ ಮಾಜಿ ಸಚಿವ- ಬಿಜೆಪಿ ಮುಖಂಡ ಸ್ವಾಮಿ ಚಿನ್ಮಯಾನಂದ ವಿರುದ್ಧ ಅತ್ಯಾಚಾರ ಆರೋಪ ಮಾಡಿದ್ದ ಇಪ್ಪತ್ಮೂರು ವರ್ಷದ ಎಲ್ ಎಲ್ ಎಂ ವಿದ್ಯಾರ್ಥಿನಿಯನ್ನು ವಿಶೇಷ ತನಿಖಾ ತಂಡ ಬಂಧಿಸಿದೆ. ಪ್ರಮುಖ ಬೆಳವಣಿಗೆಯೊಂದರಲ್ಲಿ ಬುಧವಾರ ಬೆಳಗ್ಗೆ ಆಕೆಯನ್ನು ವಶಕ್ಕೆ ಪಡೆಯಲಾಯಿತು. ಚಿನ್ಮಯಾನಂದ ಅವರಿಂದ ಐದು ಕೋಟಿ ರುಪಾಯಿ ಹಣ ಸುಲಿಗೆಗೆ ಯತ್ನಿಸಿದ ಆರೋಪ ಆಕೆ ಮೇಲಿದೆ.

ಮಹಿಳೆಯಿಂದ ಮಸಾಜ್ ಮಾಡಿಸಿಕೊಂಡಿದ್ದನ್ನು ಒಪ್ಪಿಕೊಂಡ ಬಿಜೆಪಿ ಮುಖಂಡಮಹಿಳೆಯಿಂದ ಮಸಾಜ್ ಮಾಡಿಸಿಕೊಂಡಿದ್ದನ್ನು ಒಪ್ಪಿಕೊಂಡ ಬಿಜೆಪಿ ಮುಖಂಡ

ಆಕೆಯ ಇತರ ಮೂವರು ಸಹಚರರಾದ ಸಂಜಯ್ ಸಿಂಗ್, ಸಚಿನ್ ಸೆಂಗರ್, ವಿಕ್ರಮ್ ಸಿಂಗ್ ಈಗಾಗಲೇ ಹಣ ಸುಲಿಗೆ ಪ್ರಕರಣದಲ್ಲೇ ಜೈಲಲ್ಲಿ ಇದ್ದಾರೆ. ಮಂಗಳವಾರದಂದು ವಿದ್ಯಾರ್ಥಿನಿ ನಿರೀಕ್ಷಣಾ ಜಾಮೀನಿಗಾಗಿ ಅರ್ಜಿ ಹಾಕಿಕೊಂಡಿದ್ದಾರೆ. ಆದರೆ ಅರ್ಜಿ ಸ್ವೀಕರಿಸಿದ ಕೋರ್ಟ್, ಸೆಪ್ಟೆಂಬರ್ ಇಪ್ಪತ್ತಾರಕ್ಕೆ ಮುಂದಿನ ವಿಚಾರಣೆ ಎಂದು ಮುಂದೂಡಿತು.

Law Student Who Accused Against BJP Leader, Arrested By Police In U.P.

ಸ್ವಾಮಿ ಚಿನ್ಮಯಾನಂದ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪ ಹೊರೆಸಿದ್ದ ಮಹಿಳೆಯನ್ನುಹಣ ಸುಲಿಗೆಗೆ ಯತ್ನಿಸಿದ ಆರೋಪದಲ್ಲಿ ಬಂಧಿಸಲಾಗಿದೆ ಎಂದು ಉತ್ತರಪ್ರದೇಶ ಡಿಜಿಪಿ ಒ. ಪಿ. ಸಿಂಗ್ ಹೇಳಿದ್ದಾರೆ. ಆಕೆಯನ್ನು ಬಂಧಿಸಿದ ನಂತರ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಿದ್ದು, ಆ ನಂತರ ಕೋರ್ಟ್ ಮುಂದೆ ಹಾಜರುಪಡಿಸಲಾಗುವುದು.

ಬಿಜೆಪಿ ನಾಯಕ ಅತ್ಯಾಚಾರ ಮಾಡಿದ್ದಕ್ಕೆ ಬಿಜೆಪಿ ನಾಯಕ ಅತ್ಯಾಚಾರ ಮಾಡಿದ್ದಕ್ಕೆ "ಸ್ಫೋಟಕ ವಿಡಿಯೋ ಸಾಕ್ಷ್ಯ"

ಸೆಪ್ಟೆಂಬರ್ ಇಪ್ಪತ್ತರಂದು ಚಿನ್ಮಯಾನಂದ ಅವರನ್ನು ಬಂಧಿಸಿ, ಹದಿನಾಲ್ಕು ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಸದ್ಯಕ್ಕೆ ಚಿನ್ಮಯಾನಂದ ಎದೆ ನೋವಿನಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ.

English summary
23 year old LLM student who accused against BJP leader Swami Chinmayananda, arrested by Uttar Pradesh police on Wednesday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X