ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಹುಲ್ ಗಾಂಧಿಗೆ ನೋಟಿಸ್: 'ಕ್ಯಾ ಬಕ್ವಾಸ್ ಹೈ ಯೇ?' ಎಂದ ಪ್ರಿಯಾಂಕಾ

|
Google Oneindia Kannada News

ಅಮೇಥಿ, ಏಪ್ರಿಲ್ 30: ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರ ಭಾರತದ ನಾಗರಿಕತ್ವಕ್ಕೆ ಸಂಬಂಧಿಸಿದಂತೆ ಗೃಹ ಸಚಿವಾಲಯ ನೋಟಿಸ್ ನೀಡಿರುವುದರ ವಿರುದ್ಧ ಅವರ ಸಹೋದರಿ ಪ್ರಿಯಾಂಕಾ ಗಾಂಧಿ ಕಿಡಿಕಾರಿದ್ದಾರೆ. ಇದೆಂತಹ ಅಸಂಬದ್ಧ? ಎಂದು ಕೇಂದ್ರ ಸರ್ಕಾರದ ಮೇಲೆ ಅಸಮಾಧಾನ ಹೊರಹಾಕಿದ್ದಾರೆ.

ರಾಹುಲ್ ಗಾಂಧಿ ಅವರ ವಿದೇಶಿ ಪೌರತ್ವದ ಆರೋಪಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ನೋಟಿಸ್ ನೀಡಿದೆ. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಪ್ರಿಯಾಂಕಾ ಗಾಂಧಿ, 'ಅವರು ಇಲ್ಲಿಯೇ ಹುಟ್ಟಿ ಬೆಳೆದಿರುವುದು ಎನ್ನುವುದು ಇಡೀ ದೇಶಕ್ಕೇ ಗೊತ್ತು' ಎಂದು ಹೇಳಿದ್ದಾರೆ.

kya bakwaas hai yeh Priyanka Gandhi response to home ministry notice to rahul gandhi citizenship

ರಾಹುಲ್ ಗಾಂಧಿಗೆ ಭಾರೀ ಹಿನ್ನಡೆ: ಮತ್ತೆ ಶುರು ನಾಗರಿಕತ್ವದ ಸಂಕಟ!ರಾಹುಲ್ ಗಾಂಧಿಗೆ ಭಾರೀ ಹಿನ್ನಡೆ: ಮತ್ತೆ ಶುರು ನಾಗರಿಕತ್ವದ ಸಂಕಟ!

'ರಾಹುಲ್ ಗಾಂಧಿ ಭಾರತೀಯ ಎನ್ನುವುದು ಇಡೀ ಭಾರತಕ್ಕೇ ತಿಳಿದಿದೆ. ಅವರು ಭಾರತದಲ್ಲಿಯೇ ಹುಟ್ಟಿ ಬೆಳೆದಿರುವುದನ್ನು ಜನರು ನೋಡಿದ್ದಾರೆ. ಕ್ಯಾ ಬಕ್ವಾಸ್ ಹೈ ಯೇ?' ಎಂದು ಪ್ರಿಯಾಂಕಾ ಕೋಪ ವ್ಯಕ್ತಪಡಿಸಿದ್ದಾರೆ.

ರಾಹುಲ್ ಗಾಂಧಿ ನಾಮಪತ್ರದ ಬಗ್ಗೆ ಆಕ್ಷೇಪಣೆ; ಸೋಮವಾರ ಉತ್ತರಿಸಬೇಕುರಾಹುಲ್ ಗಾಂಧಿ ನಾಮಪತ್ರದ ಬಗ್ಗೆ ಆಕ್ಷೇಪಣೆ; ಸೋಮವಾರ ಉತ್ತರಿಸಬೇಕು

"ಇಂಗ್ಲೆಂಡ್ ನಲ್ಲಿ 2003 ರಲ್ಲಿಬ್ಯಾಕಾಪ್ಸ್ ಲಿ. ಎಂಬ ಹೆಸರಿನಲ್ಲಿ ಕಂಪನಿಯೊಂದನ್ನು ರಿಜಿಸ್ಟರ್ ಮಾಡಲಾಗಿದೆ. ಆ ಕಂಪನಿಗೆ ನೀವು ಸಹ ಒಬ್ಬ ನಿರ್ದೇಶಕರು ಮತ್ತು ಕಾರ್ಯದರ್ಶಿ. ನೀವು ಕಂಪನಿಗೆ ನೀಡಿದ ಜನ್ಮ ವಿವರದಲ್ಲಿ ನಿಮ್ಮ ರಾಷ್ಟ್ರೀಯತೆಯನ್ನು 'ಬ್ರಿಟಿಷ್' ಎಂದು ಘೋಷಿಸಿದ್ದೀರಿ. 17/02/2009 ರ ಈ ಕಂಪನಿಯ ದಾಖಲೆಗಳಲ್ಲೂ ನಿಮ್ಮದು ಬ್ರಿಟಿಷ್ ನಾಗರಿಕತ್ವ ಎಂದೇ ಉಲ್ಲೇಖಿಸಲಾಗಿದೆ. ಈ ಕುರಿತು ಎರಡೂ ವಾರಗಳೊಳಗೆ ಸ್ಪಷ್ಟೀಕರಣ ನೀಡಿ" ಎಂದು ಗೃಹ ಸಚಿವಾಲಯ ನೋಟಿಸ್‌ನಲ್ಲಿ ಸೂಚನೆ ನೀಡಿದೆ.

English summary
Lok Sabha elections 2019: Congress leader Priyanka Gandhi said, 'Rahul Gandhi was born and grown up in India. The whole India knows it. Kya bakwaas hai yeh'. Her response to MHA notice to Rahul Gandhi over foreign citizenship.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X