ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕುಂಭಮೇಳ: ಸಂಭ್ರಮಕ್ಕಿಲ್ಲ ಎಲ್ಲೆ... ಸಾಧು-ಸಂತರಿಗೆ ಸ್ವರ್ಗ ಇಲ್ಲೇ!"

|
Google Oneindia Kannada News

ಪ್ರಯಾಗರಾಜ್, ಜನವರಿ 16: "ಇದೇನು ಸುನಾಮಿಯೋ, ಅಥವಾ ಪ್ರವಾಹವೋ ಎಂದು ಗೊಂದಲ ಹುಟ್ಟುವ ಮಟ್ಟಿಗೆ ಹರಿದು ಬಂದ ಜನಸಾಗರ, ಕಣ್ಣು ಹಾಯಿಸಿದಷ್ಟು ದೂರವೂ ಕಾಣುವ ಕಾಷಾಯ ವಸ್ತ್ರ ಧರಿಸಿದ ಸಾಧು ಸಂತರು... ಎಲ್ಲೆಲ್ಲೂ ಮೊಳಗುವ ಜಯಘೋಷ, ಸಂಭ್ರಮಕ್ಕಿಲ್ಲ ಎಲ್ಲೆ... ಸಾಧು-ಸಂತರಿಗೆ ಸ್ವರ್ಗ ಇಲ್ಲೇ!"

ಉತ್ತರ ಪ್ರದೇಶದ ಪ್ರಯಾಗರಾಜ್ ನಲ್ಲಿ ಜನವರಿ 15 ರಿಂದ ಆರಂಭವಾಗಿರುವ ಅರ್ಧಕುಂಭಮೇಳದಲ್ಲಿ ಲಕ್ಷಾಂತರ ಜನ ಪಾಲ್ಗೊಳ್ಳುತ್ತಿದ್ದ, ಮಾರ್ಚ್ 5 ರವರೆಗೂ ಈ ಅದ್ಧೂರಿ ಕಾರ್ಯಕ್ರಮದಲ್ಲಿ ನಡೆಯಲಿದೆ.

ಬೃಹತ್ ಕುಂಭಮೇಳದಲ್ಲಿ ಸಾಧುಗಳ ಪುಣ್ಯ ಸ್ನಾನ: ಲಕ್ಷಾಂತರ ಭಕ್ತರು ಭಾಗಿಬೃಹತ್ ಕುಂಭಮೇಳದಲ್ಲಿ ಸಾಧುಗಳ ಪುಣ್ಯ ಸ್ನಾನ: ಲಕ್ಷಾಂತರ ಭಕ್ತರು ಭಾಗಿ

ಇದುವರೆಗಿನ ಕುಂಭಮೇಳಗಳಲ್ಲೇ ಅತೀ ಹೆಚ್ಚು ಹಣ ವೆಚ್ಚ ಮಾಡಿ ಈ ಕುಂಭಮೇಳವನ್ನು ಆಯೋಜಿಸಲಾಗಿದ್ದು, 4,236 ಕೋಟಿ ರೂ.ಗಳನ್ನು ಉತ್ತರ ಪ್ರದೇಶ ಸರ್ಕಾರ ಕುಂಭಮೇಳಕ್ಕೆಂದೇ ಖರ್ಚು ಮಾಡಿದೆ.

ಪ್ರಯಾಗದಲ್ಲಿ ಗಂಗಾ, ಯಮುನಾ ಮತ್ತು ಗುಪ್ತಗಾಮಿಸಿ ಸರಸ್ವತಿ ನದಿಗಳು ಸೇರುವ ತ್ರಿವೇಣಿ ಸಂಗಮ ಸ್ಥಳದಲ್ಲಿ ಕುಂಭಮೇಳ ನಡೆಯುತ್ತಿದ್ದು, ಭಕ್ತರು ನದಿಯಲ್ಲಿ ಪುಣ್ಯಸ್ನಾನ ಮಾಡಿ, ಗೊತ್ತಿದ್ದೋ, ಗೊತ್ತಿಲ್ಲದೆಯೋ ಮಾಡಿದ ಪಾಪವನ್ನು ತೊಳೆದುಹಾಕುವಂತೆ ಜಲದೇವತೆಯಲ್ಲಿ ಬೇಡಿಕೊಳ್ಳುತ್ತಿದ್ದಾರೆ.

ಕುಂಭಮೇಳಕ್ಕಾಗಿ 800ಕ್ಕೂ ಅಧಿಕ ರೈಲು, ಬೆಂಗಳೂರಿನಿಂದ ಎಷ್ಟು?ಕುಂಭಮೇಳಕ್ಕಾಗಿ 800ಕ್ಕೂ ಅಧಿಕ ರೈಲು, ಬೆಂಗಳೂರಿನಿಂದ ಎಷ್ಟು?

ಜಗತ್ತಿನಲ್ಲಿ ಅತೀ ಹೆಚ್ಚು ಜನರು ಸೇರುವ ಬೃಹತ್ ಕಾರ್ಯಕ್ರಮ ಎನ್ನಿಸಿಕೊಂಡ ಕುಂಭಮೇಳಕ್ಕೆ ಸಂಬಂಧಿಸಿದ ಕೆಲವು ಸುಂದರ ಚಿತ್ರಗಳು ಇಲ್ಲಿವೆ.

ಶಂಖಾನಾದ

ಶಂಖಾನಾದ

ಪ್ರಯಾಗರಾಜ್ ನಲ್ಲಿ ಶಂಖಾನಾದದ ಮೂಲಕ ಅದ್ಧೂರಿ ಕುಂಭಮೇಳಕ್ಕೆ ಶುಭನಾಂದಿ ಹಾಡಿದ ಸಂತರು. ಅರ್ಧ ಕುಂಭಮೇಳವು ಆರು ವರ್ಷಕ್ಕೊಮ್ಮೆ ನಡೆಯುತ್ತದೆ. ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥ್ ಮುಖ್ಯಮಂತ್ರಿಯಾದ ಮೇಲೆ ನಡೆಯುತ್ತಿರುವ ಮೊದಲ ಅರ್ಧ ಕುಂಭಮೇಳ ಇದಾಗಿದೆ.

ಜಲೇಸ್ಮಿನ್ ಸನ್ನಿಧಿಂ ಕುರು!

ಜಲೇಸ್ಮಿನ್ ಸನ್ನಿಧಿಂ ಕುರು!

ಗಂಗೇಚ ಯಮುನೇಚೈವ ಗೋದಾವರಿ ಸರಸ್ವತಿ ನರ್ಮದೇ ಸಿಂಧು ಕಾವೇರಿ ಜಲೇಸ್ಮಿನ್ ಸನ್ನಿಧಿಂ ಕುರು" ಎನ್ನುತ್ತ ಪವಿತ್ರಗಂಗೆಗೆ ನಮನ ಸಲ್ಲಿಸಿ, ಆ ತರಂಗಿಣಿಯಲ್ಲೇ ಸ್ನಾನ ಮಾಡುತ್ತಿರುವ ಸಂತರು.

ಎಲ್ಲೆಲ್ಲೂ ಕೇಸರಿಯ ಮಾತು! ವಿಶ್ವವಿಖ್ಯಾತ ಕುಂಭಮೇಳಕ್ಕೆ ಕ್ಷಣಗಣನೆ!ಎಲ್ಲೆಲ್ಲೂ ಕೇಸರಿಯ ಮಾತು! ವಿಶ್ವವಿಖ್ಯಾತ ಕುಂಭಮೇಳಕ್ಕೆ ಕ್ಷಣಗಣನೆ!

ಸಾಧ್ವಿಯರ ಸಂಖ್ಯೆಗೂ ಬರವಿಲ್ಲ

ಸಾಧ್ವಿಯರ ಸಂಖ್ಯೆಗೂ ಬರವಿಲ್ಲ

ಕುಂಭಮೇಳದಲ್ಲಿ ಸಾಧ್ವಿಯರ ಸಂಖ್ಯೆಗೂ ಯಾವುದೇ ಬರವಿಲ್ಲ. ಪವಿತ್ರ ಸ್ನಾನಕ್ಕೆಂದು ಬಂದಿದ್ದ ಸಾಧ್ವಿಯೊಬ್ಬರು ಸ್ನಾನದ ನಂತರ ತ್ರಿಶೂಲ ಹಿಡಿದು ಕಂಡಿದ್ದು ಹೀಗೆ.

ಎಲ್ಲೆಲ್ಲೂ ಕೇಸರಿ ಕಮಾಲು

ಎಲ್ಲೆಲ್ಲೂ ಕೇಸರಿ ಕಮಾಲು

ಸಾಧು-ಸಂತರೇ ಹೆಚ್ಚಾಗಿ ಕಂಡುಬರುವ ಕುಂಭಮೇಳದಲ್ಲಿ ಎಲ್ಲಿ ನೋಡಿದರಲ್ಲಿ ಕೇಸರಿವರ್ಣಣವೇ ಕಾಣುತ್ತಿದೆ. ಸುಮಾರು ಆರನೇ ಶತಮಾನದಿಂದ ಆರಂಭವಾದ ಕುಂಭಮೇಳ ನಾಲ್ಕು ರೀತಿಯಲ್ಲಿ ನಡೆಯುತ್ತದೆ. ಪೂರ್ಣಕುಂಭಮೇಳೆ 12 ವರ್ಷಕ್ಕೊಮ್ಮೆ ನಡೆಯುತ್ತದೆ.

ಸಂತರ ಸುನಾಮಿ

ಸಂತರ ಸುನಾಮಿ

ಪ್ರಯಾಗ್ ರಾಜ್ ನಲ್ಲಿ ಸಂತರು, ಭಕ್ತರು ತ್ರಿವೇಣಿ ಸಂಗಮದಲ್ಲಿ ಜಮಾಯಿಸಿದ ದೃಶ್ಯವಂತೂ ಇದು ಸುನಾಮಿಯೋ, ಪ್ರವಾಹವೋ ಎಂದು ಗೊಂದಲ ಮೂಡುವಂತಿತ್ತು.

ಕುಂಭಮೇಳದೆದುರು ಚಳಿ ಯಾವ ಲೆಕ್ಕ?

ಕುಂಭಮೇಳದೆದುರು ಚಳಿ ಯಾವ ಲೆಕ್ಕ?

ಕುಂಭಮೇಳಕ್ಕೆದು ಆಗಮಿಸಿದ ಭಕ್ತರು ಚಳ ಚಳಿ ಇದ್ದರೂ ಅದಕ್ಕೆಲ್ಲ ಕ್ಯಾರೆ ಎನ್ನದೆ ಕುಳಿತ ದೃಶ್ಯವೂ ಕಂಡುಬಂತು. ಕೊರೆವ ಚಳಿಯ ನಡುವೆಯೂ ಭಕ್ತರು ಕುಂಭಮೇಳದ ಅನನ್ಯತೆಯನ್ನು ಸಂಭ್ರಮಿಸಿದರು.

English summary
World famous Kumbh Mela has taken place from Jan 15th in Prayagraj in Uttar Pradesh. Here are beautiful pictures of the event.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X