ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೂರು ಜ್ಯೋತಿರ್ಲಿಂಗಗಳ ಸಂಪರ್ಕಕ್ಕೆ ಮಹಾಕಲ್ ಎಕ್ಸ್ ಪ್ರಸ್ ರೈಲು

|
Google Oneindia Kannada News

ವಾರಣಸಿ, ಫೆಬ್ರವರಿ.16: ಮೂರು ಪುಣ್ಯಕ್ಷೇತ್ರಗಳಿಗೆ ಸಂಪರ್ಕ ಕಲ್ಪಿಸುವ ಕಾಶಿ ಮಹಾಕಲ್ ಎಕ್ಸ್ ಪ್ರೆಸ್ ರೈಲು ಸಂಚಾರಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿ ಭಾನುವಾರ ವಾರಣಸಿಯಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ಚಾಲನೆ ನೀಡಿದರು.

ತಮ್ಮ ತವರು ಕ್ಷೇತ್ರವಾಗಿರುವ ವಾರಣಸಿ ಲೋಕಸಭಾ ವ್ಯಾಪ್ತಿಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಭಾನುವಾರ 30 ಯೋಜನೆಗಳಿಗೆ ಚಾಲನೆ ನೀಡಿದರು. ಈ ಪೈಕಿ ವಾರಣಸಿ ಮತ್ತು ಇಂದೋರ್ ನಡುವೆ ಚಲಿಸುವ ಕಾಶಿ ಮಹಾಕಲ್ ರೈಲು ಕೂಡಾ ಒಂದಾಗಿದೆ. ಈ ರೈಲು ಉತ್ತರ ಪ್ರದೇಶದಲ್ಲಿರುವ ಮೂರು ಜ್ಯೋತಿರ್ಲಿಂಗಗಳನ್ನು ಹೊಂದಿರುವ ವಾರಣಸಿ, ಉಜ್ಜೈನಿ ಮತ್ತು ಓಂಕಾರೇಶ್ವರ ಕ್ಷೇತ್ರಗಳ ನಡುವೆ ಸಂಪರ್ಕ ಕಲ್ಪಿಸಲಿದೆ.

Kashi Ek, Roop Anek, PM Modi Flaged Off To Kashi Mahakal Express Rail

ಕಾಶಿ ವಿಶ್ವನಾಥನ ದರ್ಶನಕ್ಕೆ ತೆರಳುವ ಮುನ್ನ ಈ ಸುದ್ದಿ ಓದಿಕಾಶಿ ವಿಶ್ವನಾಥನ ದರ್ಶನಕ್ಕೆ ತೆರಳುವ ಮುನ್ನ ಈ ಸುದ್ದಿ ಓದಿ

ಇನ್ನು, 430 ಬೆಡ್ ಗಳ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೂ ಪ್ರಧಾನಮಂತ್ರಿ ನರೇಂದ್ರ ಮೋದಿ ಚಾಲನೆ ನೀಡಿದರು. ಇದರ ಜೊತೆಗೆ ಬನಾರಸ್ ಹಿಂದೂ ವಿಶ್ವವಿದ್ಯಾಲಯದಲ್ಲಿ 74 ಬೆಡ್ ಗಳ ಮನೋವೈದ್ಯಶಾಸ್ತ್ರ ವಿಭಾಗಕ್ಕೆ ಚಾಲನೆ ನೀಡಲಾಯಿತು.

Kashi Ek, Roop Anek, PM Modi Flaged Off To Kashi Mahakal Express Rail

ಕಾಶಿ ಏಕ್, ರೂಪ್ ಅನೇಕ್:

ಕಾಶಿ ಏಕ್, ರೂಪ್ ಅನೇಕ್ ಎಂಬ ಶೀರ್ಷಿಕೆಯಡಿಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಭಾನುವಾರ ಹಲವು ಯೋಜನೆಗಳಿಗೆ ಚಾಲನೆ ನೀಡಿದರು. ಇದಕ್ಕೂ ಮೊದಲು ಭಾರತೀಯ ಜನಸಂಘ್ ಮುಖಂಡರಾದ ಪಂಡಿತ್ ದೀನ್ ದಯಾಳ್ ಉಪಾದ್ಯಾಯ ಅವರ 63 ಅಡಿ ಎತ್ತರದ ಪಂಚಲೋಧ ಪ್ರತಿಮೆಯನ್ನು ಪ್ರಧಾನಿ ಮೋದಿ ಉದ್ಘಾಟಿಸಿದರು. ಈ ಪ್ರತಿಮೆ ನಿರ್ಮಾಣ ಕಾರ್ಯದಲ್ಲಿ ಕಳೆದ ಒಂದು ವರ್ಷ 200ಕ್ಕೂ ಹೆಚ್ಚು ಶಿಲ್ಪಕಾರರು ತೊಡಗಿದ್ದರು.

English summary
"Kashi Ek, Roop Anek", PM Narendra Modi Flaged Off To Kashi Mahakal Express Rail. The Train Will Connect Three Jyotirling Pilgrim Centres.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X