ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಲಹಾಬಾದ್ ಅಲ್ಲಲ್ಲ, ಪ್ರಯಾಗರಾಜ್! ಯಾವೆಲ್ಲ ನಗರಗಳ ಹೆಸರು ಬದಲಾಗಿದೆ?

|
Google Oneindia Kannada News

ಹೆಸರಿನಲ್ಲಿ ಒಂದು ಊರಿನ ಹಿನ್ನೆಲೆ, ಕತೆಯೇ ಅಡಗಿರುತ್ತದೆ ಅನ್ನೋದು ಭಾರತೀಯರ ನಂಬಿಕೆ. ಊರಿನ ಹೆಸರುಗಳು ಆಡುಭಾಷೆಯಲ್ಲಿ ಅಪಭೃಂಶವಾಗಿರಬಹುದು. ಆದರೆ ಪ್ರತಿ ಊರಿನ, ಸ್ಥಳದ ಹೆಸರಿನ ಹಿಂದೆಯೂ ಆ ಊರಿನ ಅಸ್ಮಿತೆಯ ಹೆಗ್ಗುರುತಾದ ಕತೆಯೊಂದಿದೆ.

ಉತ್ತರ ಪ್ರದೇಶದ ಅಲಹಾಬಾದ್ ಅನ್ನು ಪ್ರಯಾಗರಾಜ್ ಎಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅಧಿಕೃತವಾಗಿ ಬದಲಿಸಿದ್ದಾರೆ.

ಮೈಸೂರು ದಸರಾ - ವಿಶೇಷ ಪುರವಣಿ

ಕೇಸರೀಕರಣ ಎಂಬುದಕ್ಕಿಂತ ಹೆಚ್ಚಾಗಿ ಇದನ್ನು ರಾಷ್ಟ್ರೀಕರಣ ಎಂಬುದು ಸೂಕ್ತ ಎಂದು ಹಲವರು ಅಭಿಪ್ರಾಯ ಪಟ್ಟಿದ್ದಾರೆ. ಶತಮಾನಗಳ ಕಾಲ ಭಾರತವನ್ನು ಆಳಿದ ಬ್ರಿಟಿಷರು, ಮೊಘಲರು ಸೇರಿದಂತೆ ಹಲವು ದೊರೆಗಳ ಬಾಯಲ್ಲಿ ಭಾರತದ ಹಲವು ಸ್ಥಳಗಳು ಅಪಭೃಂಶಗೊಂಡು ಅರ್ಥ ಕಳೆದುಕೊಂಡಿವೆ. ಮೊಘಲರು ಎಷ್ಟೋ ನಗರಗಳಿಗೆ ತಮಗಿಷ್ಟಬಂದ ಹೆಸರನ್ನಿಟ್ಟಿದ್ದಾರೆ. ಕಾಲಾಂತರಗಳಿಂದಲೂ ಜನರ ಬಾಯಲ್ಲಿ ಅದೇ ಹೆಸರುಗಳು ಉಚ್ಚರಣೆಯಾಗುತ್ತ ಬಂದು ನಿಜವಾದ ಹೆಸರೇ ಮರೆಯುವಂತಾಗಿದೆ.

ನರೇಂದ್ರಮೋದಿ ನಗರ, ಅಮಿತ್ ಶಾ ನಗರ!18 ನಗರಕ್ಕೆ ಹೆಸರು ಸೂಚಿಸಿದ ಕಟ್ಜು!ನರೇಂದ್ರಮೋದಿ ನಗರ, ಅಮಿತ್ ಶಾ ನಗರ!18 ನಗರಕ್ಕೆ ಹೆಸರು ಸೂಚಿಸಿದ ಕಟ್ಜು!

ಇಂಥ ಸಂದರ್ಭದಲ್ಲಿ ಭಾರತೀಯತೆಯನ್ನು ಸ್ಫುರಿಸುವ ಅವುಗಳ ಹಳೆಯ ಹೆಸರನ್ನೇ ಅಧಿಕೃತವಾಗಿ ಮರುನಾಮಕರಣ ಮಾಡುವ ಕೆಲಸವನ್ನು ಕೆಲವು ಸರ್ಕಾರಗಳು ಮಾಡುತ್ತಿವೆ. ಅದಕ್ಕೆ ಹೊಸ ಸೇರ್ಪಡೆ ಪ್ರಯಾಗರಾಜ್. ಈ ಮರುನಾಮಕರಣ ಇಂದು ನಿನ್ನೆಯದಲ್ಲ, ಸ್ವಾತಂತ್ರ್ಯ ಸಿಕ್ಕ ಮರುವರ್ಷವೇ, ಅಂದರೆ 1948 ರಂದೇ ಕಾವನ್ಪೊರ್ ಅನ್ನು ಕಾನ್ಪುರ ಎಂದು ಬದಲಾಯಿಸುವ ಮೂಲಕ ಈ ಹೆಸರು ಬದಲಾವಣೆಯ ಪರ್ವಕ್ಕೆ ನಾಂದಿ ಹಾಡಲಾಯಿತು.

ಇದುವರೆಗೂ ದೇಶದಲ್ಲಿ ಯಾವೆಲ್ಲ ಪ್ರಮುಖ ನಗರಗಳ ಹೆಸರು ಬದಲಾಗಿದೆ? ಇಲ್ಲಿದೆ ನೋಡಿ ಮಾಹಿತಿ

ಕಾನ್ಪುರ, ಗುರುಗ್ರಾಮ, ವಡೋದರಾ

ಕಾನ್ಪುರ, ಗುರುಗ್ರಾಮ, ವಡೋದರಾ

ಕಾವನ್ಪೊರ್ - ಕಾನ್ಪುರ (1948)
ಬರೋಡಾ- ವಡೋದರಾ(1974)
ಟ್ರಿವಂಡ್ರಂ- ತಿರುವನಂತಪುರಂ(1991)
ಬಾಂಬೆ- ಮುಂಬೈ(1995)
ಮದ್ರಾಸ್- ಚೆನ್ನೈ (1996)

ಕೊಚ್ಚಿ, ಕೊಲ್ಕತ್ತಾ, ಪುದುಚೇರಿ

ಕೊಚ್ಚಿ, ಕೊಲ್ಕತ್ತಾ, ಪುದುಚೇರಿ

ಕೊಚ್ಚಿನ್-ಕೊಚ್ಚಿ(1996)
ಕಲ್ಕಟ್ಟ- ಕೊಲ್ಕತ್ತಾ(2001)
ಪಾಂಡಿಚೆರ್ರಿ-ಪುದುಚೇರಿ(2006)
ಬೆಳಗಾಂ-ಬೆಳಗಾವಿ(2014)
ಮ್ಯಾಂಗಲೋರ್-ಮಂಗಳೂರು (2014)

ಅಲಹಾಬಾದ್ ಅಲ್ಲ ಪ್ರಯಾಗ್‌ರಾಜ್: ಹೆಸರು ಬದಲಿಸಲು ಯೋಗಿ ಚಿಂತನೆಅಲಹಾಬಾದ್ ಅಲ್ಲ ಪ್ರಯಾಗ್‌ರಾಜ್: ಹೆಸರು ಬದಲಿಸಲು ಯೋಗಿ ಚಿಂತನೆ

ಬೆಂಗಳೂರು, ಚಿಕ್ಕಮಗಳೂರು, ಮೈಸೂರು

ಬೆಂಗಳೂರು, ಚಿಕ್ಕಮಗಳೂರು, ಮೈಸೂರು

ಬ್ಯಾಂಗಲೋರ್-ಬೆಂಗಳೂರು(2014)
ಮೈಸೋರ್-ಮೈಸೂರು(2014)
ಚಿಕ್ಮಗಲೂರ್-ಚಿಕ್ಕಮಗಳೂರು(2014)
ಹುಬ್ಳಿ-ಹುಬ್ಬಳ್ಳಿ(2014)

ಕಲಬುರಗಿ, ಗುರುಗ್ರಾಮ, ವಿಜಯಪುರ

ಕಲಬುರಗಿ, ಗುರುಗ್ರಾಮ, ವಿಜಯಪುರ

ಗುಲ್ಬರ್ಗಾ-ಕಲಬುರಗಿ (2014)
ಬಿಜಾಪುರ್-ವಿಜಯಪುರ (2014)
ಗುರ್ಗಾಂವ್-ಗುರುಗ್ರಾಮ(2016)
ಅಲಹಾಬಾದ್-ಪ್ರಯಾಗರಾಜ್(2018)

English summary
Uttar Pradesh government renamed Allahabad to Prayagraj to keep its historical importance. Here are the list of Indian cities, which are renamed
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X