• search
 • Live TV
ಲಕ್ನೋ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಕೊವಿಡ್ ರೋಗಿಗಳ ಚಿಕಿತ್ಸೆಗಾಗಿ ಕನಿಕಾ ಕಪೂರ್ ರಕ್ತ (ಪ್ಲಾಸ್ಮಾ) ದಾನ

|
Google Oneindia Kannada News

ಲಕ್ನೌ, ಏಪ್ರಿಲ್ 27: ಬಾಲಿವುಡ್ ಗಾಯಕಿ ಕನಿಕಾ ಕಪೂರ್‌ಗೆ ಕೊರೊನಾ ವೈರಸ್‌ ತಗುಲಿದ್ದು, ಆಕೆಯ ಟ್ರಾವಲ್ ಹಿಸ್ಟರಿ ಬಹಳ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿತ್ತು. ವಿದೇಶದಿಂದ ಭಾರತಕ್ಕೆ ಬಂದ ಬಳಿಕ, ಕ್ವಾರೆಂಟೈನ್‌ ಆಗದೆ ಪಾರ್ಟಿಗಳಲ್ಲಿ ಭಾಗಿಯಾಗಿದ್ದರು.

   Mummy or Papa? Shahid Kapoor on Picking Between MS Dhoni and Virat Kohli | Oneindia kannada

   ನಂತರ ಆಕೆಗೆ ಕೊವಿಡ್ ಸೋಂಕು ತಗುಲಿರುವುದು ದೃಢವಾಗಿತ್ತು. ಅದಕ್ಕೂ ಮುಂಚೆ ಆಕೆ ಭಾಗವಹಿಸಿದ್ದ ಪಾರ್ಟಿಗಳಲ್ಲಿ ಉತ್ತರ ಪ್ರದೇಶ ಹಾಗೂ ರಾಜಸ್ಥಾನದ ಗಣ್ಯರು ಇದ್ದರು ಎನ್ನುವುದು ತೀರಾ ಆತಂಕ ಸೃಷ್ಟಿಯಾಗಿತ್ತು. ಅದೃಷ್ಟವಶಾತ್ ಬೇರೆ ಯಾರಿಗೂ ಸೋಂಕು ಹರಡಿರಲಿಲ್ಲ.

   ಕೊರೊನಾ ನೆಗೆಟಿವ್: ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ಗಾಯಕಿ ಕನ್ನಿಕಾ ಕಪೂರ್ಕೊರೊನಾ ನೆಗೆಟಿವ್: ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ಗಾಯಕಿ ಕನ್ನಿಕಾ ಕಪೂರ್

   ಅಂತಿಮವಾಗಿ ಕನಿಕಾ ಕಪೂರ್ ಕೊವಿಡ್ ಸೋಂಕಿನಿಂದ ಚೇತರಿಸಿಕೊಂಡು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಏಪ್ರಿಲ್ 6 ರಂದೇ ಕನಿಕಾ ಮನೆಗೆ ಮರಳಿದ್ದರು. ಇದೀಗ, ಪ್ಲಾಸ್ಮಾ ದಾನ ಮಾಡಲು ಕನಿಕಾ ಕಪೂರ್ ಸಜ್ಜಾಗಿದ್ದಾರೆ.

   ಭಾರತದಲ್ಲಿ ಕೊರೊನಾ ರೋಗಿಗಳ ಮೇಲೆ ಪ್ಲಾಸ್ಮಾ ಚಿಕಿತ್ಸೆ ಪ್ರಯೋಗ ಮಾಡಲಾಗಿತ್ತು. ಈ ಚಿಕಿತ್ಸೆ ಯಶಸ್ಸಾಗಿದ್ದು, ಕೊವಿಡ್‌ನಿಂದ ಚೇತರಿಸಿಕೊಂಡವರಿಗೆ ಪ್ಲಾಸ್ಮಾ ದಾನ ಮಾಡಲು ಸರ್ಕಾರಗಳು ವಿನಂತಿಸಿಕೊಂಡಿದ್ದವು. ಈ ಹಿನ್ನೆಲೆಯಲ್ಲಿ ಕನಿಕಾ ಕಪೂರ್ ರಕ್ತದಾನ ಮಾಡಲು ಮುಂದಾಗಿದ್ದಾರೆ.

   ಲಕ್ನೌನ ಕಿಂಗ್ ಜಾರ್ಜ್ ಮೆಡಿಕಲ್ ಯುನಿವರ್ಸಿಟಿ ವೈದ್ಯರು ಕನಿಕಾ ಕಪೂರ್ ಅವರ ರಕ್ತ ಪರೀಕ್ಷೆ ಮಾಡಲಿದ್ದು, ಏಪ್ರಿಲ್ 28 ಅಥವಾ 29 ರಂದು ಪ್ಲಾಸ್ಮಾ ಸಂಗ್ರಹಿಸಲಿದ್ದಾರೆ ಎನ್ನಲಾಗಿದೆ. ಪ್ಲಾಸ್ಮಾ ಪಡೆಯುವುದಕ್ಕೂ ಮೊದಲು ಕನಿಕಾ ಕಪೂರ್ ಅವರ ರಕ್ತ ಪರೀಕ್ಷೆ ಆಗಬೇಕಿದೆ. ಆ ವರದಿ ಬಂದ ನಂತರ ಪ್ಲಾಸ್ಮಾ ಸಂಗ್ರಹಿಸಲಿದ್ದಾರೆ.

   ಸದ್ಯ ಕನಿಕಾ ಕಪೂರ್ ಲಕ್ನೌನಲ್ಲಿರುವ ತಮ್ಮ ನಿವಾಸದಲ್ಲಿದ್ದಾರೆ. ಸೋಂಕಿನಿಂದ ಚೇತರಿಸಿಕೊಂಡ ಬಳಿಕ, ತಮ್ಮ ಕುಟುಂಬದ ಜೊತೆ ಸಮಯ ಕಳೆಯುತ್ತಿರುವುದಾಗಿ ಸೋಶಿಯಲ್ ಮೀಡಿಯಾದಲ್ಲಿ ಸಂತಸ ಹಂಚಿಕೊಂಡಿದ್ದರು.

   English summary
   Bollywood singer Kanika kapoor to donate plasma after she recovered from covid 19.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X