ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕನಿಕಾ ಕಪೂರ್ ವಿಚಾರದಲ್ಲಿ ತಪ್ಪು ಆಗಿದ್ದೆಲ್ಲಿ? ಕೊರೊನಾ ಸೋಂಕಿತೆ ಬಚ್ಚಿಟ್ಟ ಸತ್ಯ

|
Google Oneindia Kannada News

ಲಕ್ನೌ, ಮಾರ್ಚ್ 21: ಬಾಲಿವುಡ್ ಗಾಯಕಿ ಕನಿಕಾ ಕಪೂರ್‌ಗೆ ಕೊರೊನಾ ಸೋಂಕು ತಗುಲಿದ್ದು, ಶುಕ್ರವಾರ ಖಚಿತವಾಗಿದೆ. 'ನಾನು ಥರ್ಮಿಲ್ ಸ್ಕ್ರೀನಿಂಗ್ ಪರೀಕ್ಷೆಯಿಂದ ತಪ್ಪಿಸಿಕೊಳ್ಳಲು ಪ್ರಯತ್ನ ಪಟ್ಟಿಲ್ಲ ಹಾಗೂ ಟೆಸ್ಟ್ ಮಾಡಿ ಎಂದು ಅಧಿಕಾರಿಗಳ ಬಳಿ ಕೇಳಿಕೊಂಡಿದ್ದೇ ನಾನು' ಎಂದು ಬಹಿರಂಗಪಡಿಸಿದ್ದಾರೆ.

ಲಂಡನ್‌ನಿಂದ ಭಾರತಕ್ಕೆ ಬಂದಿದ್ದ ಕನಿಕಾ ಕಪೂರ್ ಕೊರೊನಾ ಬಗ್ಗೆ ನಿರ್ಲಕ್ಷ್ಯ ತೋರಿದ್ದಾರೆ. ಈ ಬಗ್ಗೆ ಎಚ್ಚರ ವಹಿಸಿದೆ ಪಾರ್ಟಿಗಳಲ್ಲಿ ಭಾಗವಹಿಸಿ, ಹಲವು ಕಡೆ ಸುತ್ತಾಡಿದ್ದಾರೆ ಎಂದು ಜನರು ಟೀಕಿಸಿದ್ದಾರೆ. ಮಾರ್ಚ್ 11ರಂದು ಲಂಡನ್‌ನಿಂದ ಬಂದ ಬಳಿ ಮೂರು ಕಡೆ ಪಾರ್ಟಿ ಮಾಡಿದ್ದಾರೆ ಎಂದು ದೂರಿದ್ದಾರೆ.

ಲಕ್ನೌನಲ್ಲಿರುವ ಮುಖ್ಯ ವೈದ್ಯಕೀಯ ಅಧಿಕಾರಿಯ ದೂರಿನ ಅನ್ವಯ ಸರೋಜಿನಿ ನಗರ ಪೊಲೀಸ್ ಠಾಣೆಯಲ್ಲಿ ಕನಿಕಾ ಕಪೂರ್ ವಿರುದ್ಧ ಐಪಿಸಿ ಸೆಕ್ಷನ್ 188, 269, 270 ಅಡಿ ಕೇಸ್ ದಾಖಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಖಚಿತಪಡಿಸಿದ್ದಾರೆ. ಬಹುಶಃ ಇನ್ನು ಎರಡು ಪೊಲೀಸ್ ಠಾಣೆಯಲ್ಲಿ ಕನಿಕಾ ವಿರುದ್ಧ ದೂರು ದಾಖಲಾಗುವ ಸಾಧ್ಯತೆ ಇದೆ ಎಂದು ತಿಳಿಸಿದ್ದಾರೆ. ಮುಂದೆ ಓದಿ...

ತಪ್ಪಿಸಿಕೊಳ್ಳಲು ಯತ್ನಿಸಿಲ್ಲ

ತಪ್ಪಿಸಿಕೊಳ್ಳಲು ಯತ್ನಿಸಿಲ್ಲ

ಈ ಬಗ್ಗೆ ಇಂಡಿಯಾ ಟುಡೇ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿರುವ ಕನಿಕಾ ಕಪೂರ್ ''ನಾನು ಥರ್ಮಲ್ ಸ್ಕ್ರೀನಿಂಗ್ ತಪ್ಪಿಸಿಕೊಳ್ಳಲು ಬಾತ್‌ರೂಂನಲ್ಲಿ ಬಚ್ಚಿಟ್ಟುಕೊಂಡಿದ್ದೇ ಎಂಬುದು ವದಂತಿ. ಅಂತರರಾಷ್ಟ್ರೀಯ ವಿಮಾನದಲ್ಲಿ ಬಂದ ಬಳಿಕ ಸ್ಕ್ರೀನಿಂಗ್‌ನಿಂದ ತಪ್ಪಿಸಿಕೊಳ್ಳಲು ಸಾಧ್ಯವಾ ಹೇಳಿ...? ಮುಂಬೈನಲ್ಲಿ ನನ್ನನ್ನು ಪರೀಕ್ಷೆ ಒಳಪಡಿಸಲಾಯಿತು. ನಾನು ಒಂದು ದಿನ ಪೂರ್ತಿ ಮುಂಬೈನಲ್ಲೇ ಇದ್ದೆ'' ಎಂದು ಘಟನೆ ಬಗ್ಗೆ ವಿವರಿಸಿದ್ದಾರೆ.

ಪರೀಕ್ಷಿಸಿದಾಗ ನನ್ನ ಆರೋಗ್ಯ ಚೆನ್ನಾಗಿತ್ತು

ಪರೀಕ್ಷಿಸಿದಾಗ ನನ್ನ ಆರೋಗ್ಯ ಚೆನ್ನಾಗಿತ್ತು

''ಮುಂಬೈನಲ್ಲಿ ಯಾವ ಕೆಲಸವೂ ನಡೆಯುತ್ತಿರಲಿಲ್ಲ. (ಕೊರೊನಾ ವೈರಸ್ ಭೀತಿಯಿಂದ ಉದ್ಯಮ ಸ್ವಯಂಪ್ರೇರಿತವಾಗಿ ಸ್ತಬ್ದವಾಗಿತ್ತು) ಹಾಗಾಗಿ, ಪೋಷಕರ ಸೂಚನೆ ಮೆರೆಗೆ ನಾನು ಲಕ್ನೌಗೆ ಮಾರ್ಚ್ 11ರಂದು ವಿಮಾನದಲ್ಲಿ ಬಂದೆ. ಅಲ್ಲಿ ಒಬ್ಬರು ಪರೀಕ್ಷಿಸಿದರು. ಆದರೆ, ವಿದೇಶದಿಂದ ಬಂದವರು ಗೃಹ ದಿಗ್ಬಂಧನಲ್ಲಿರಬೇಕು ಎಂದು ಹೇಳಲು ಅಲ್ಲಿ ಯಾರೂ ಕೂಡ ಇರಲಿಲ್ಲ ಮತ್ತು ಹೇಳಲಿಲ್ಲ. ನಾನು ಮುಂಬೈನಿಂದ ಬಂದಾಗ ಮತ್ತು ಪರೀಕ್ಷಿಸಿದಾಗ ನನ್ನ ಆರೋಗ್ಯದಲ್ಲಿ ಯಾವುದೇ ವ್ಯತ್ಯಾಸವಿರಲಿಲ್ಲ. ನಾಲ್ಕು ದಿನಗಳ ಹಿಂದೆಯಷ್ಟೆ ನನ್ನಲ್ಲಿ ರೋಗದ ಲಕ್ಷಣಗಳು ಕಾಣಿಸಿಕೊಂಡಿದೆ' ಎಂದು ನಡೆದ ಘಟನೆಯನ್ನು ಬಿಚ್ಚಿಟ್ಟಿದ್ದಾರೆ.

ನಾನು ಪಾರ್ಟಿ ಆಯೋಜಿಸಿಲ್ಲ

ನಾನು ಪಾರ್ಟಿ ಆಯೋಜಿಸಿಲ್ಲ

ಇನ್ನು ಪಾರ್ಟಿ ಆಯೋಜಿಸಿದ್ದರ ಬಗ್ಗೆ ಮಾಹಿತಿ ನೀಡಿದ ಕನಿಕಾ ''ನಾನು ಯಾವತ್ತೂ ಪಾರ್ಟಿ ಆಯೋಜಿಸಿಲ್ಲ. ಸಣ್ಣದೊಂದು ಹುಟ್ಟುಹಬ್ಬದ ಸಂಭ್ರಮದಲ್ಲಿ ಭಾಗಿಯಾಗಿದ್ದೆ. ಈ ಬಗ್ಗೆ ವಸುಂಧರಾ ರಾಜೇ ಅವರು ಟ್ವೀಟ್ ಮಾಡಿದ್ದಾರೆ. ಅವರ ಮಗ ದುಶ್ಯಂತ್ ಸೇರಿದಂತೆ ಹಲವು ರಾಜಕಾರಣಿಗಳು ಅಲ್ಲಿದ್ದರು. ಅದು ದೊಡ್ಡ ಪಾರ್ಟಿಯಲ್ಲಿ, ಸಣ್ಣ ಪಾರ್ಟಿ. ನಾನು ಆಯೋಜಿಸಿದ್ದಲ್ಲ, ನಾನು ಅತಿಥಿ ಅಷ್ಟೆ. ಪಾರ್ಟಿಯಲ್ಲಿದ್ದ ಎಲ್ಲರ ಹೆಸರನ್ನು ನಾನು ಆರೋಗ್ಯ ಅಧಿಕಾರಿಗಳಿಗೆ ನೀಡಿದ್ದೇನೆ'' ಎಂದು ತಿಳಿಸಿದ್ದಾರೆ.

ನನ್ನ ಸ್ನೇಹಿತನಿಗೆ ಹೇಳಿದ್ದೆ

ನನ್ನ ಸ್ನೇಹಿತನಿಗೆ ಹೇಳಿದ್ದೆ

''ನನ್ನ ರಕ್ತದ ಮಾದರಿಯನ್ನು ಪರೀಕ್ಷಿಸಲು ಸ್ಥಳೀಯ ಆಸ್ಪತ್ರೆಯ ಮುಖಸ್ಥಯಾಗಿದ್ದ ನನ್ನ ಸ್ನೇಹಿತಯನ್ನು ಕರೆದಿದ್ದೆ. ರಾಜ್ಯ ಆರೋಗ್ಯ ಅಧಿಕಾರಿಗಳನ್ನು ಸಂಪರ್ಕಿಸು ಎಂದು ಆತ ಸಲಹೆ ನೀಡಿದ. ನಂತರ ನಾನು ಸಹಾಯವಾಣಿಗೆ ಕರೆ ಮಾಡಿದೆ. ನನ್ನ ರೋಗ ಲಕ್ಷಣ ಕೇಳಿದ ಬಳಿಕ, ಇದು ಕೊರೊನಾ ವೈರಸ್ ಲಕ್ಷಣದಂತೆ ಕಾಣಿಸುತ್ತಿಲ್ಲ, ಸಹಜ ಜ್ವರ ಇರಬಹುದು ಎಂದರು. ಆದರೂ ನಾನು ಒತ್ತಡ ಹಾಕಿದೆ'' ಎಂದು ಕನಿಕಾ ಹೇಳಿಕೊಂಡಿದ್ದಾರೆ.

ಅವರೇ ನನ್ನ ಕುರಿತು ನಿರ್ಲಕ್ಷ್ಯ ಮಾಡಿದ್ರು

ಅವರೇ ನನ್ನ ಕುರಿತು ನಿರ್ಲಕ್ಷ್ಯ ಮಾಡಿದ್ರು

''ನಾನು ಅವರನ್ನು ಪೀಡಿಸಿದರು ನನ್ನ ಬಗ್ಗೆ ನಿರ್ಲಕ್ಷ್ಯ ವಹಿಸಿದಂತೆ ಕಂಡು ಬಂತು. ನಾಲ್ಕು ದಿನ ನಾನು ರೂಂನಲ್ಲೆ ಇದ್ದೆ. ಕೊನೆಗೆ ಸೋಮವಾರ ಅವರು ಸಿಬ್ಬಂದಿಯನ್ನು ಕಳುಹಿಸಿದರು. ನನ್ನಲ್ಲಿ ರೋಗದ ಲಕ್ಷಣ ಕಂಡಿದ ತಕ್ಷಣ ನಾನು ಆರೋಗ್ಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದೇನೆ. ಹಾಗಿದ್ರೆ ಹೇಳಿ ಯಾರು ನಿರ್ಲಕ್ಷ್ಯಸಿದ್ದಾರೆ? ಎಂದು ಕನಿಕಾ ಪ್ರಶ್ನಿಸಿದ್ದಾರೆ.

ಗೃಹ ದಿಗ್ಬಂಧನದಲ್ಲಿ ವಸುಂಧರಾ ರಾಜೇ

ಗೃಹ ದಿಗ್ಬಂಧನದಲ್ಲಿ ವಸುಂಧರಾ ರಾಜೇ

ರಾಜಸ್ಥಾನದ ಮಾಜಿ ಮುಖ್ಯಮಂತ್ರಿ ವಸುಂಧರಾ ರಾಜೇ ಹಾಗೂ ಆಕೆಯ ಪುತ್ರ ಬಿಜೆಪಿ ಸಂಸದ ದುಶ್ಯಂತ್, ಆತನ ಪತ್ನಿ, ತೃಣಮೂಲ ಕಾಂಗ್ರೆಸ್ ಸಂಸದ ಡರಿಕ್ ಓಬ್ರೇನ್, ಅನುಪ್ರಿಯ ಪಟೇಲ್ ಸೇರಿದಂತೆ ಹಲವು ಸಂಸದರು ಹಾಗೂ ರಾಜಕಾರಣಿಗಳು ಈ ಪಾರ್ಟಿಯಲ್ಲಿದ್ದರು. ನಂತರ ಸಂಸದ ದುಶ್ಯಂತ್ ಅವರು ಸಂಸತ್‌ಗೆ ಹಾಗೂ ರಾಷ್ಟ್ರಪತಿ ಏರ್ಪಡಿಸಿದ್ದ ಭೋಜನಕೂಟದಲ್ಲೂ ಭಾಗಿಯಾಗಿದ್ದರು. ಹಾಗಾಗಿ, ಆ ಎಲ್ಲರಿಗೂ ಈಗ ಕೊರೊನಾ ಭೀತಿ ಕಾಡುತ್ತಿದೆ.

English summary
Bollywood singer Kanika Kapoor, who tested coronavirus positive on friday. she did not try to skip any screening in airport.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X