ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕನಿಕಾ ಕಪೂರ್ ಪ್ಲಾಸ್ಮಾ ದಾನ ಮಾಡಲು ಮತ್ತಷ್ಟು ದಿನ ಕಾಯಬೇಕು

|
Google Oneindia Kannada News

ಲಕ್ನೌ, ಏಪ್ರಿಲ್ 28: ಭಾರತದಲ್ಲಿ ಕೊರೊನಾ ವೈರಸ್‌ ರೋಗಿಗಳ ಮೇಲೆ ಪ್ಲಾಸ್ಮಾ ಥೆರಪಿ ಚಿಕಿತ್ಸೆ ಪ್ರಯೋಗ ಮಾಡಲಾಗಿದ್ದು, ಭರವಸೆ ಹುಟ್ಟಿಸಿದೆ. ಕೊವಿಡ್ ಸೋಂಕಿನಿಂದ ಚೇತರಿಸಿಕೊಂಡ ವ್ಯಕ್ತಿಗಳು ಪ್ಲಾಸ್ಮಾ ದಾನ ಮಾಡಿದ್ರೆ ಬೇರೆ ರೋಗಿಗಳಿಗೆ ಅನುಕೂಲವಾಗುತ್ತೆ ಎಂದು ವೈದ್ಯರು ಸಲಹೆ ನೀಡಿದ್ದರು.

ಈ ಕಾರಣದಿಂದ ಸೋಂಕಿನಿಂದ ಚೇತರಿಸಿಕೊಂಡಿದ್ದ ಬಾಲಿವುಡ್ ಗಾಯಕಿ ಕನಿಕಾ ಕಪೂರ್ ಪ್ಲಾಸ್ಮಾ ದಾನ ಮಾಡಲು ಮುಂದಾಗಿದ್ದಾರೆ. ಖುದ್ದು ತಾವೇ ಕರೆ ಮಾಡಿ ಪ್ಲಾಸ್ಮಾ ದಾನ ಮಾಡಲು ನಾನು ಸಿದ್ಧವಿದ್ದೇನೆ ಎಂದು ಹೇಳಿದ್ದರು.

ಕೊವಿಡ್ ರೋಗಿಗಳ ಚಿಕಿತ್ಸೆಗಾಗಿ ಕನಿಕಾ ಕಪೂರ್ ರಕ್ತ (ಪ್ಲಾಸ್ಮಾ) ದಾನಕೊವಿಡ್ ರೋಗಿಗಳ ಚಿಕಿತ್ಸೆಗಾಗಿ ಕನಿಕಾ ಕಪೂರ್ ರಕ್ತ (ಪ್ಲಾಸ್ಮಾ) ದಾನ

ಆದರೆ, ಕನಿಕಾ ಕಪೂರ್ ಅವರ ರಕ್ತ ಪರೀಕ್ಷೆ ಮಾಡಿರುವ ವೈದ್ಯರು ಕನಿಕಾ ಪ್ಲಾಸ್ಮಾ ದಾನ ಮಾಡಲು ಇನ್ನು ಸ್ವಲ್ಪ ದಿನ ಕಾಯಬೇಕು ಎಂದು ಸೂಚಿಸಿದ್ದಾರೆ.

Kanika Kapoor Has To Wait For Some Time To Donate Plasma

"ಕನಿಕಾ ಕಪೂರ್ ಅವರ ರಕ್ತದ ಮಾದರಿಯನ್ನು ಪರೀಕ್ಷಿಸಲಾಯಿತು. ಪ್ಲಾಸ್ಮಾ ದಾನಕ್ಕೆ ಸಂಬಂಧಿಸಿದ ಎಲ್ಲಾ ಅಂಶಗಳು ಸೂಕ್ತವಾಗಿದೆ ಎಂದು ಕಂಡುಬಂದಿದೆ. ಆದರೆ, ಹಿಮೋಗ್ಲೋಬಿನ್ ಪ್ರಮಾಣ ಅಗತ್ಯಕ್ಕಿಂತ ಕಡಿಮೆ ಇರುವುದು ಕಂಡುಬಂದಿದೆ. ಆದ್ದರಿಂದ, ಸದ್ಯಕ್ಕೆ ಪ್ಲಾಸ್ಮಾ ದಾನ ಮಾಡಲು ಕಷ್ಟ. ಹಾಗಾಗಿ, ಅವರು ಕೆಲವು ದಿನಗಳವರೆಗೆ ಕಾಯಬೇಕಾಗಿದೆ'' ಎಂದು ಕಿಂಗ್ ಜಾರ್ಜ್ ಮೆಡಿಕಲ್ ಯುನಿವರ್ಸಿಟಿ ಉಪಕುಲಪತಿ ಪ್ರೊ.ಎಂ.ಎಲ್.ಬಿ ಭಟ್ ತಿಳಿಸಿದ್ದಾರೆ.

ಅಂದ್ಹಾಗೆ, ಕನಿಕಾ ಕಪೂರ್ ಅವರ ರಕ್ತದ ಮಾದರಿಯನ್ನು ಸೋಮವಾರ ಸಂಗ್ರಹಿಸಿದ್ದ ವೈದ್ಯರು ಪರೀಕ್ಷೆಗೆ ಕಳುಹಿಸಿದ್ದರು. ಇಂದು ಪರೀಕ್ಷೆ ವರದಿ ಬಂದಿದ್ದು, ಪ್ಲಾಸ್ಮಾ ದಾನ ಮಾಡಲು ಪಾಸಿಟಿವ್ ಬಂದಿದೆ. ಆದರೆ, ಹಿಮೋಗ್ಲೋಬಿನ್ ಕಾರಣದಿಂದ ಸದ್ಯಕ್ಕೆ ಬೇಡ ಎಂದು ನಿರ್ಧರಿಸಲಾಗಿದೆ.

ಮಾರ್ಚ್ 20 ರಂದು ಗಾಯಕಿ ಕನಿಕಾ ಕಪೂರ್‌ಗೆ ಕೊರೊನಾ ಪಾಸಿಟಿವ್ ಬಂದಿತ್ತು. ಆ ಬಳಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದರು. ಏಪ್ರಿಲ್ 6 ರಂದು ಕೊರೊನಾ ಸೋಂಕಿನಿಂದ ಚೇತರಿಸಿಕೊಂಡು ಡಿಸ್ಚಾರ್ಜ್ ಆಗಿದ್ದರು.

English summary
Bollywood singer Kanika Kapoor has to wait for some time to donate plasma, a senior official of King George’s Medical University said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X