ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಮಲೇಶ್ ತಿವಾರಿ ಹತ್ಯೆ ಪ್ರಕರಣ: ಪಿಸ್ತೂಲ್ ಪೂರೈಸಿದವನ ಬಂಧನ

|
Google Oneindia Kannada News

ಲಕ್ನೋ, ನವೆಂಬರ್ 02: ಹಿಂದು ಸಮಾಜ ಪಕ್ಷದ ಮುಖಂಡ ಕಮಲೇಶ್ ತಿವಾರಿ ಹತ್ಯೆಗೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿದ್ದ ಪೊಲೀಸರ ತಂಡ ಹತ್ಯೆಗೆ ಪಿಸ್ತೂಲ್ ಪೂರೈಸಿದ ಯೂಸಫ್ ಖಾನ್ ಎಂಬಾತನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.

ಗುಜರಾತ್ ನ ಭಯೋತ್ಪಾದನಾ ವಿರೋಧಿ ದಳ ಮತ್ತು ಉತ್ತರ ಪ್ರದೇಶ ಪೊಲೀಸರು ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಆತನನ್ನು ಬಂಧಿಸಲಾಗಿದೆ.

ಯೂಸಫ್ ನಿಂದ ಎರಡು ಮೊಬೈಲ್ ಫೋನ್ ಮತ್ತಿತರ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಯೂಸಫ್ ನನ್ನು ಪೊಲೀಸರು ಹುಡುಕುತ್ತಿದ್ದಾರೆ ಎಂಬುದು ತಿಳಿಯುತ್ತಿದ್ದಂತೆಯೇ ಆತನ್ನು ಪರಾರಿಯಾಗಲು ಪ್ರೇರೇಪಿಸಿದ ಕಮ್ರಾನ್ ಎಂಬಾತನ್ನೂ ಪೊಲೀಸರು ಬಂಧಿಸಿದ್ದಾರೆ.

ಜೊಮ್ಯಾಟೋ ಡೆಲಿವರಿ ಬಾಯ್ ಕಮಲೇಶ್ ಹತ್ಯೆ ಆರೋಪಿಜೊಮ್ಯಾಟೋ ಡೆಲಿವರಿ ಬಾಯ್ ಕಮಲೇಶ್ ಹತ್ಯೆ ಆರೋಪಿ

 Kamalesh Tiwari Murder Case: Man Provided Pistol Arrested

ಅಕ್ಟೋಬರ್ 18 ರಂದು ಉತ್ತರ ಪ್ರದೇಶದ ನಾಕಾ ಎಂಬಲ್ಲಿ 43 ವರ್ಷ ವಯಸ್ಸಿನ ತಿವಾರಿ ಅವರನ್ನು ಕತ್ತು ಸೀಳಿ ಕೊಲೆ ಮಾಡಲಾಗಿತ್ತು.

ಕಮಲೇಶ್ ಅವರ ಮನೆಯ ಹೊರಗೇ ಅವರನ್ನು ಕೊಲೆ ಮಾಡಲಾಗಿದ್ದು, ಈ ಘಟನೆಯು ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿತ್ತು. ಸಿಸಿಟಿವಿ ಕ್ಯಾಮರಾ ಫೂಟೇಜ್ ಅನ್ನು ವಶಕ್ಕೆ ಪಡೆದ ಪೊಲೀಸರು ಅದನ್ನು ಪರಿಶೀಲಿಸಿದಾಗ ಕೊಲೆ ನಡೆಯುವ ಮುನ್ನ ಕಮಲೇಶ್ ಮನೆಯ ಬಳಿ ಮೂವರು ಆಗಮಿಸಿದ್ದು ಸರೆಯಾಗಿತ್ತು. ಅದರಲ್ಲಿ ಇಬ್ಬರು ಪುರುಷರಿದ್ದರೆ, ಓರ್ವ ಮಹಿಳೆ ಇದ್ದರು.

ಕಮಲೇಶ್ ತಿವಾರಿ ಮರಣೋತ್ತರ ವರದಿ: 15 ಬಾರಿ ಇರಿತ, ಒಮ್ಮೆ ಗುಂಡೇಟು!ಕಮಲೇಶ್ ತಿವಾರಿ ಮರಣೋತ್ತರ ವರದಿ: 15 ಬಾರಿ ಇರಿತ, ಒಮ್ಮೆ ಗುಂಡೇಟು!

ಮಹಿಳೆ ತಂದಿದ್ದ ಸ್ವೀಟ್ ಬಾಕ್ಸಿನಲ್ಲೇ ಕೊಲೆಗೆ ಬಳಸಲಾಗಿದ್ದ ಆಯುಧವನ್ನು ತರಲಾಗಿತ್ತು ಎಂಬುದು ಸಾಬೀತಾಗಿತ್ತು.

ಘಟನೆಗೆ ಸಂಬಂಧಿಸಿದಂತೆ ಈಗಾಗಲೇ ಹತ್ತಕ್ಕೂ ಹೆಚ್ಚು ಜನರನ್ನು ಬಂಧಿಸಲಾಗಿದೆ.

English summary
Kamalesh Tiwari Murder Case: Man Provided Pistol Arrested
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X