ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉ. ಪ್ರದೇಶ; ಗುಂಡಿನ ದಾಳಿಯಿಂದ ಗಾಯಗೊಂಡಿದ್ದ ಪತ್ರಕರ್ತ ಸಾವು

|
Google Oneindia Kannada News

ಲಕ್ನೋ, ಜುಲೈ 22 : ಉತ್ತರ ಪ್ರದೇಶದಲ್ಲಿ ಅಪರಿಚಿತರ ಗುಂಡಿನ ದಾಳಿಯಿಂದ ಗಾಯಗೊಂಡಿದ್ದ ಪತ್ರಕರ್ತ ವಿಕ್ರಮ್ ಜೋಶಿ ನಿಧನ ಹೊಂದಿದ್ದಾರೆ. ಈ ಗುಂಡಿನ ದಾಳಿಗೆ ಸಂಬಂಧಿಸಿದಂತೆ ಇದುವರೆಗೂ 9 ಜನರನ್ನು ಬಂಧಿಸಲಾಗಿದೆ.

ಘಜಿಯಾಬಾದ್‌ನ ಪತ್ರಕರ್ತ ವಿಕ್ರಮ್ ಜೋಶಿ ಮೇಲೆ ಜುಲೈ 20ರಂದು ಗುಂಡಿನ ದಾಳಿ ನಡೆಸಲಾಗಿತ್ತು. ಆಸ್ಪತ್ರೆಯಲ್ಲಿ ಅವರು ಚಿಕಿತ್ಸೆ ಪಡೆಯುತ್ತಿದ್ದರು. ಬುಧವಾರ ಮುಂಜಾನೆ ಅವರು ಮೃತಪಟ್ಟಿದ್ದಾರೆ.

ಚಿಕಾಗೋದಲ್ಲಿ ಗುಂಡಿನ ದಾಳಿ; 14 ಜನರಿಗೆ ಗಾಯ ಚಿಕಾಗೋದಲ್ಲಿ ಗುಂಡಿನ ದಾಳಿ; 14 ಜನರಿಗೆ ಗಾಯ

Journalist Vikram Joshi No More

ಜುಲೈ 20ರಂದು ತಂಗಿಯ ಮನೆಯಿಂದ ಇಬ್ಬರು ಹೆಣ್ಣು ಮಕ್ಕಳ ಜೊತೆ ಬೈಕ್‌ನಲ್ಲಿ ಬರುವಾಗ ವಿಕ್ರಮ್ ಜೋಶಿ ಮೇಲೆ ಗುಂಡಿನ ದಾಳಿ ನಡೆಸಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ 9 ಜನರನ್ನು ಪೊಲೀಸರು ಬಂಧಿಸಿದ್ದು, ವಿಚಾರಣೆ ನಡೆಸುತ್ತಿದ್ದಾರೆ.

ಉತ್ತರ ಪ್ರದೇಶ ಸಿಎಂ ಕಚೇರಿ ಎದುರು ಬೆಂಕಿ ಹಚ್ಚಿಕೊಂಡ ಅಮ್ಮ-ಮಗಳುಉತ್ತರ ಪ್ರದೇಶ ಸಿಎಂ ಕಚೇರಿ ಎದುರು ಬೆಂಕಿ ಹಚ್ಚಿಕೊಂಡ ಅಮ್ಮ-ಮಗಳು

ಬೈಕ್‌ನಲ್ಲಿ ಬರುತ್ತಿದ್ದ ವಿಕ್ರಮ್ ಜೋಶಿಯನ್ನು ಕಾರಿನಲ್ಲಿ ಬಂದವರು ಅಡ್ಡಗಟ್ಟಿದ್ದರು. ಅವರನ್ನು ಎಳೆದಾಡಿ ಹಲ್ಲೆ ಮಾಡಿದ್ದರು. ಗುಂಪಿನಲ್ಲಿದ್ದ ಒಬ್ಬ ವ್ಯಕ್ತಿ ಗುಂಡು ಹಾರಿಸಿದ್ದ. ಸಿಸಿಟಿವಿಯಲ್ಲಿ ದೃಶ್ಯಾವಳಿಗಳು ಸೆರೆಯಾಗಿತ್ತು. ಇದರ ಆಧಾರದ ಮೇಲೆ 9 ಜನರನ್ನು ಪೊಲೀಸರು ಬಂಧಿಸಿದ್ದರು.

ವಿಕಾಸ್ ದುಬೆ ಸಾವು; ಯುಪಿ ಸರ್ಕಾರಕ್ಕೆ ಸುಪ್ರೀಂ ಮಹತ್ವದ ಸೂಚನೆ ವಿಕಾಸ್ ದುಬೆ ಸಾವು; ಯುಪಿ ಸರ್ಕಾರಕ್ಕೆ ಸುಪ್ರೀಂ ಮಹತ್ವದ ಸೂಚನೆ

ಕೆಲವು ದಿನಗಳ ಹಿಂದೆ ವಿಕ್ರಂ ಜೋಶಿ ತಮ್ಮ ಮನೆಯ ಮಹಿಳೆಯರಿಗೆ ಕೆಲವರು ತೊಂದರೆ ನೀಡುತ್ತಿದ್ದಾರೆ ಎಂದು ಪೊಲೀಸರಿಗೆ ದೂರು ಸಲ್ಲಿಸಿದ್ದರು. ದೂರು ನೀಡಿದ ಕಾರಣದಿಂದಾಗಿಯೇ ದಾಳಿ ನಡೆದಿರಬಹುದು ಎಂದು ಶಂಕಿಸಲಾಗಿದೆ.

ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಪತ್ರಕರ್ತನ ಮೇಲೆ ನಡೆದ ಗುಂಡಿನ ದಾಳಿಯನ್ನು ಖಂಡಿಸಿದ್ದರು. ಉತ್ತರ ಪ್ರದೇಶದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂದು ಟ್ವೀಟ್ ಮಾಡಿದ್ದರು.

English summary
Uttar Pradesh Ghaziabad based journalist Vikram Joshi passed away on July 22, 2020. He was shot at in Vijay Nagar area on 20th July. Nine people have been arrested in the case so far.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X