ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನನಗೆ ಜೈಲೇ ಸುರಕ್ಷಿತ ಎಂದು ಪೆರೋಲ್ ನಿರಾಕರಿಸಿದ ಅಪರಾಧಿ!

|
Google Oneindia Kannada News

ಲಕ್ನೋ, ಮೇ 31: ಮೀರತ್ ಜೈಲಿನಲ್ಲಿ ಆರು ವರ್ಷಗಳ ಜೈಲು ಶಿಕ್ಷೆ ಅನುಭವಿಸುತ್ತಿರುವ ಆಶಿಶ್ ಕುಮಾರ್ ಎಂಬಾತ ತಾನು ವಿಶೇಷ ಪೆರೋಲ್‌ ಮೇಲೆ ಬಿಡುಗಡೆಯಾಗಲು ನಿರಾಕರಿಸಿದ್ದಾನೆ. ''ಈ ಕೊರೊನಾ ಸಾಂಕ್ರಾಮಿಕದ ಮಧ್ಯೆ ನಾನು ಬಿಡುಗಡೆಯಾಗಿ ಹೊರಗೆ ಹೋಗುವುದಕ್ಕಿಂತ ಇಲ್ಲೇ ಜೈಲಿನಲ್ಲಿರುವುದು ಸುರಕ್ಷಿತ'' ಎಂದು ಹೇಳಿದ್ದಾನೆ.

ಈ ಬಗ್ಗೆ ಮಾಹಿತಿ ನೀಡಿರುವ ಮೀರತ್ ಜೈಲಿನ ಹಿರಿಯ ಅಧೀಕ್ಷಕ ಬಿ.ಪಿ.ಪಾಂಡೆ, ''ಅಪರಾಧಿ ಆಶಿಶ್ ಕುಮಾರ್ ಮನವಿಯನ್ನು ಸರ್ಕಾರಕ್ಕೆ ಅನುಮೋದನೆಗಾಗಿ ಕಳುಹಿಸಿದ್ದು ಅನುಮೋದನೆ ದೊರೆತಿದೆ. ಆದ್ದರಿಂದ ಆಶಿಶ್ ಕುಮಾರ್ ಶಿಕ್ಷೆ ಪೂರ್ಣಗೊಳ್ಳುವವರೆಗೂ ಜೈಲಿನಲ್ಲಿಯೇ ಇರಲಿದ್ದಾರೆ'' ಎಂದು ತಿಳಿಸಿದ್ದಾರೆ.

ಯೋಗಿ ಆದಿತ್ಯನಾಥರ ಹೊಸ ಯೋಜನೆ: ಜೈಲಿನಲ್ಲಿ ಗೋಶಾಲೆಯೋಗಿ ಆದಿತ್ಯನಾಥರ ಹೊಸ ಯೋಜನೆ: ಜೈಲಿನಲ್ಲಿ ಗೋಶಾಲೆ

''ರಾಜ್ಯ ಸರ್ಕಾರದ ನಿರ್ದೇಶನದ ನಂತರ, ಮೀರತ್ ಜೈಲಿನಲ್ಲಿದ್ದ 43 ಕೈದಿಗಳನ್ನು ವಿಶೇಷ ಎಂಟು ವಾರಗಳ ಪೆರೋಲ್‌ನಲ್ಲಿ ಬಿಡುಗಡೆ ಮಾಡಲು ಆಯ್ಕೆ ಮಾಡಲಾಗಿತ್ತು. ಆಶಿಶ್ ಕುಮಾರ್ ಹೊರತುಪಡಿಸಿ ಉಳಿದ 42 ಮಂದಿ ಪೆರೋಲ್ ಸ್ವೀಕರಿಸಿ ಜೈಲಿನಿಂದ ಬಿಡುಗಡೆಯಾಗಿದ್ದಾರೆ. ಹಾಗೆಯೇ ಸಾಂಕ್ರಾಮಿಕದ ಹಿನ್ನೆಲೆ 326 ಮಂದಿ ಮಧ್ಯಂತರ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾರೆ'' ಎಂದು ಕೂಡಾ ಜೈಲಿನ ಹಿರಿಯ ಅಧೀಕ್ಷಕರು ವಿವರಿಸಿದ್ದಾರೆ.

Jail safer than outside in pandemic: Convict refuses parole in UP

ಶಿಕ್ಷಕನಾಗಿ ವೃತ್ತಿ ಜೀವನ ನಡೆಸುತ್ತಿದ್ದ ಆಶಿಶ್‌ನನ್ನು ಪತ್ನಿಗೆ ಆತ್ಮಹತ್ಯೆಗೆ ಪ್ರೇರೇಪಿಸಿದ ಆರೋಪದಲ್ಲಿ 2015 ರಲ್ಲಿ ಗಾಜಿಯಾಬಾದ್‌ನಲ್ಲಿ ಬಂಧಿಸಲಾಗಿತ್ತು.

ಪಿಟಿಐ ವರದಿಯ ಪ್ರಕಾರ, ಯುಪಿ ಒಂಬತ್ತು ಕಾರಾಗೃಹಗಳಲ್ಲಿನ 21 ಕೈದಿಗಳು ಕೋವಿಡ್ ಸಾಂಕ್ರಾಮಿಕ ಸಮಯದಲ್ಲಿ ಜೈಲುವಾಸ ಅನುಭವಿಸುವುದೇ ''ಸುರಕ್ಷಿತ ಮತ್ತು ಆರೋಗ್ಯಕರ'' ಎಂದು ಹೇಳಿ ಪೆರೋಲ್ ನಿರಾಕರಿಸಿ ಪತ್ರ ಬರೆದಿದ್ದಾರೆ.

ಕೃಷಿ ಮಾಡಬೇಕು, ಪೆರೋಲ್ ನೀಡಿ ಎಂದ ಅತ್ಯಾಚಾರ ಅಪರಾಧಿ ದೇವಮಾನವ!ಕೃಷಿ ಮಾಡಬೇಕು, ಪೆರೋಲ್ ನೀಡಿ ಎಂದ ಅತ್ಯಾಚಾರ ಅಪರಾಧಿ ದೇವಮಾನವ!

ಹೀಗೆ ಮನವಿ ಮಾಡಿದ ಕೈದಿಗಳನ್ನು ಗಾಜಿಯಾಬಾದ್, ಗೌತಮ್ ಬುದ್ಧ ನಗರ, ಮೀರತ್, ಮಹಾರಾಜಗಂಜ್, ಗೋರಖ್‌ಪುರ ಮತ್ತು ಲಖನೌ ಜೈಲುಗಳಲ್ಲಿ ಇರಿಸಲಾಗಿದೆ ಎಂದು ಜೈಲಿನ ಆಡಳಿತ ಮಹಾನಿರ್ದೇಶಕ ಆನಂದ್ ಕುಮಾರ್ ಮಾಹಿತಿ ನೀಡಿದ್ದಾರೆ.

''ಈ ಅಪರಾಧಿಗಳು ಬೇರೆ ಪ್ರಮುಖ ಕಾರಣಗಳನ್ನೂ ನೀಡಿದ್ದಾರೆ. ಹೊರಗೆ ಹೋದರೆ, ಜೈಲುಗಳಲ್ಲಿ ಸಿಗುವ ಆಹಾರ ಮತ್ತು ಇತರ ಆರೋಗ್ಯ ಸೌಲಭ್ಯಗಳು ಸಿಗುವುದಿಲ್ಲ. ಜೈಲುಗಳಲ್ಲಿ ನಿಯಮಿತವಾಗಿ ಆರೋಗ್ಯ ತಪಾಸಣೆ ನಡೆಸಲಾಗುತ್ತದೆ. ಹೊರಗೆ ಹೋದರೆ ನಮಗೆ ಅದ್ಯಾವದೂ ಉಚಿತವಲ್ಲ ಎಂದು ಹೇಳಿದ್ದಾರೆ. ಆಹಾರ ಸರಿಯಾಗಿ ದೊರೆಯುತ್ತದೆ, ಈ ಹಿನ್ನೆಲೆ ಜೈಲುಗಳು ಸುರಕ್ಷಿತ ಮತ್ತು ಆರೋಗ್ಯಕರ. ನಾವು ಈಗ ಜೈಲಿನಿಂದ ಹೊರಗೆ ಹೋದರೆ ಉದ್ಯೋಗವೂ ಇಲ್ಲದೆ ಏನೂ ಇಲ್ಲದೆ ಜೀವನ ದೂಡಲು ಕಷ್ಟಪಡಬೇಕಾಗುತ್ತದೆ ಎಂದು ಕೂಡಾ ಹೇಳಿದ್ದಾರೆ'' ಎಂದು ಆನಂದ್ ಕುಮಾರ್ ತಿಳಿಸಿದ್ದಾರೆ.

ಮೈಸೂರು: ಪೆರೋಲ್ ಮೇಲೆ ಹೊರಬಂದವ ಲಕ್ಷ ರೂಪಾಯಿ ದೋಚಿದ!ಮೈಸೂರು: ಪೆರೋಲ್ ಮೇಲೆ ಹೊರಬಂದವ ಲಕ್ಷ ರೂಪಾಯಿ ದೋಚಿದ!

ಇನ್ನು ಲಕ್ನೋ ಜೈಲಿನಿಂದ ನಾಲ್ಕು ಮಂದಿ, ಗಾಜಿಯಾಬಾದ್‌ನಲ್ಲಿ ಮೂರು ಮಂದಿ ಹಾಗೂ ಮಹಾರಾಜ್‌ಗಂಜ್ ಜೈಲಿನಲ್ಲಿ ಎರಡು ಮಂದಿ ಈ ರೀತಿಯ ಮನವಿ ಮಾಡಿದ್ದಾರೆ ಎಂದು ವರದಿಯಾಗಿದೆ.

ದೇಶದಲ್ಲಿ ಕೋವಿಡ್ -19 ಪ್ರಕರಣಗಳು ಹೆ‌ಚ್ಚುತ್ತಿರುವ ಹಿನ್ನೆಲೆ ಸುಪ್ರೀಂ ಕೋರ್ಟ್ ಮೇ 8 ರಂದು ಕಾರಾಗೃಹಗಳನ್ನು ವಜಾಗೊಳಿಸಲು ನಿರ್ದೇಶನ ನೀಡಿತ್ತು ಮತ್ತು ಸಾಂಕ್ರಾಮಿಕ ರೋಗದ ದೃಷ್ಟಿಯಿಂದ ಕಳೆದ ವರ್ಷ ಜಾಮೀನು ಅಥವಾ ಪೆರೋಲ್ ಪಡೆದ ಎಲ್ಲ ಕೈದಿಗಳನ್ನು ಕೂಡಲೇ ಬಿಡುಗಡೆ ಮಾಡಲು ಆದೇಶಿಸಿತ್ತು.

ಕಳೆದ ವರ್ಷ ಸಾಂಕ್ರಾಮಿಕ ರೋಗದ ಮೊದಲ ಅಲೆಯ ಸಂದರ್ಭದಲ್ಲಿ ಒಟ್ಟು 2,256 ಕೈದಿಗಳು ವಿಶೇಷ ಪೆರೋಲ್ ಮೇಲೆ ಬಿಡುಗಡೆಯಾಗಿದ್ದಾರೆ. ಈ ವರ್ಷ 2,456 ಕೈದಿಗಳನ್ನು ಬಿಡುಗಡೆ ಮಾಡಲು ರಾಜ್ಯ ಸರ್ಕಾರ ನಿರ್ಧರಿಸಿದೆ.

(ಒನ್ಇಂಡಿಯಾ ಸುದ್ದಿ)

English summary
Convict refuses parole in UP and Says Jail safer than outside in pandemic.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X