• search
  • Live TV
ಲಕ್ನೋ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಉತ್ತರ ಪ್ರದೇಶದಲ್ಲಿ ಬಿಜೆಪಿ ಮಣಿಸಲು ಸಾಧ್ಯವೇ ಇಲ್ಲ; ಏನಿದರ ಹಿಂದಿನ ಕಾರಣ?

|
Google Oneindia Kannada News

ಲಖ್ನೋ, ಜುಲೈ 22: ಭಾರತದ ದೊಡ್ಡ ರಾಜ್ಯ ಎಂದೇ ಕರೆಸಿಕೊಂಡಿರುವ ಉತ್ತರ ಪ್ರದೇಶ ಬಿಜೆಪಿಗೆ 2017ರಿಂದಲೂ ಭದ್ರಕೋಟೆ. ಹೀಗಿದ್ದರೂ ಮುಂದಿನ ವರ್ಷ ಉತ್ತರ ಪ್ರದೇಶದಲ್ಲಿ ನಡೆಯಲಿರುವ ವಿಧಾನಸಭೆ ಚುನಾವಣೆ ಬಿಜೆಪಿ ಪಾಲಿಗೆ ದೊಡ್ಡ ಪರೀಕ್ಷೆ ಎಂದೇ ಹೇಳಬಹುದು. ಬಿಜೆಪಿ ಪರ ಇಲ್ಲಿನ ಜನರು ಹೆಚ್ಚು ಭರವಸೆ ಇಟ್ಟಿರುವುದಾಗಿ ಈಚೆಗಿನ ಸಮೀಕ್ಷೆಯೊಂದು ವರದಿ ಮಾಡಿರುವುದು ಬಿಜೆಪಿಗೆ ಎಲ್ಲಾ ರೀತಿಯಿಂದಲೂ ಬಲ ತಂದುಕೊಟ್ಟಿದೆ.

ಆದರೆ ರಾಜ್ಯ ಬಿಜೆಪಿ ಸರ್ಕಾರದ ಮೇಲೆ ಈಚೆಗೆ ಕೆಲವು ಅಸಮಾಧಾನಗಳೂ ಹುಟ್ಟಿಕೊಂಡಂತಿವೆ. ರಾಜ್ಯದಲ್ಲಿ ಕೊರೊನಾ ನಿರ್ವಹಣೆ, ವಿವಾದಾತ್ಮಕ ಕೃಷಿ ಕಾಯ್ದೆಗಳ ಬಗ್ಗೆ ಮುಖ್ಯಮಂತ್ರಿ ಯೋಗಿ ಆದಿತ್ಯಾನಾಥ್ ಕಡೆಗಿನ ಅಸಮಾಧಾನ, ಜನಸಂಖ್ಯಾ ನೀತಿ, ಪ್ರತಿಪಕ್ಷಗಳಿಗೆ ಅಸ್ತ್ರ ನೀಡಿದಂತಿದೆ. ಇತ್ತೀಚೆಗೆ ನಡೆದ ಪಂಚಾಯಿತಿ ಚುನಾವಣೆ ಫಲಿತಾಂಶದಲ್ಲೇ ಈ ಅಸಮಾಧಾನ ಸ್ಪಷ್ಟವಾಗಿದ್ದು, ಗೆಲುವು ಕಂಡರೂ ನಿರೀಕ್ಷೆಗಿಂತ ಅತಿ ಕಡಿಮೆ ಮತಗಳನ್ನು ಪಡೆದುಕೊಂಡಿದೆ.

 ಉತ್ತರ ಪ್ರದೇಶ, ಸಿವೋಟರ್ ಸರ್ವೇ ಫಲಿತಾಂಶ: ಮತದಾರನ ಒಲವು ಯಾವ ಪಕ್ಷದತ್ತ? ಉತ್ತರ ಪ್ರದೇಶ, ಸಿವೋಟರ್ ಸರ್ವೇ ಫಲಿತಾಂಶ: ಮತದಾರನ ಒಲವು ಯಾವ ಪಕ್ಷದತ್ತ?

ಆದರೂ ಆಡಳಿತಾರೂಢ ಬಿಜೆಪಿ ವಿರುದ್ಧ ಯಾವುದೇ ಪಕ್ಷಗಳು ಇಲ್ಲಿ ಗೆಲುವು ಕಾಣುವುದು ಬಹಳ ಕಷ್ಟಕರವಾಗಿದೆ. ರಾಜ್ಯದಲ್ಲಿ ಬಿಜೆಪಿಗಿರುವ ಮೂಲ ಬೆಂಬಲ, ವಿರೋಧ ಪಕ್ಷಗಳ ವಿಕೇಂದ್ರೀಕರಣ ಇದಕ್ಕೆ ಬಹು ಮುಖ್ಯ ಕಾರಣ ಎನ್ನಲಾಗಿದೆ. ಇದರೊಂದಿಗೆ ರಾಮ ಮಂದಿರ, ಹಿಂದುತ್ವ ವಿಷಯಗಳು ಕೂಡ ಬಿಜೆಪಿ ಗೆಲುವನ್ನು ಸುಲಭವಾಗಿ ತಂದುಕೊಡುವ ಅಂದಾಜಿದೆ. ಮುಂದೆ ಓದಿ...

 ವಿರೋಧ ಪಕ್ಷಗಳ ವಿಭಜನೆಯೇ ಬಿಜೆಪಿಗೆ ಅನುಕೂಲ

ವಿರೋಧ ಪಕ್ಷಗಳ ವಿಭಜನೆಯೇ ಬಿಜೆಪಿಗೆ ಅನುಕೂಲ

ರಾಜ್ಯದಲ್ಲಿಮುಂದಿನ ವರ್ಷ ನಡೆಯಲಿರುವ ಈ ಚುನಾವಣೆ ಬಿಜೆಪಿಗೆ ಗೆಲುವನ್ನೇ ತಂದುಕೊಡುವ ನಿರೀಕ್ಷೆಯಿದೆ. ಬಿಜೆಪಿ ಹಾಗೂ ಅದರ ಮಿತ್ರಪಕ್ಷಗಳು ಉತ್ತರ ಪ್ರದೇಶದಲ್ಲಿ ಕಳೆದ ಮೂರು ಚುನಾವಣೆಗಳಲ್ಲಿ 45%ಗಿಂತ ಹೆಚ್ಚು ಮತಗಳನ್ನು ಗಳಿಸಿವೆ (2014, 2019ರ ಲೋಕಸಭಾ ಚುನಾವಣೆ ಹಾಗೂ 2017ರ ವಿಧಾನಸಭಾ ಚುನಾವಣೆ). ಬಿಜೆಪಿ ಪ್ರಬಲ ಪ್ರತಿಸ್ಪರ್ಧಿಗಳಾದ ಸಮಾಜವಾದಿ ಪಕ್ಷ ಹಾಗೂ ಬಹುಜನ ಸಮಾಜ ಪಕ್ಷ ತಲಾ 20% ಮತ ಪಡೆದುಕೊಂಡಿವೆ. ಕಾಂಗ್ರೆಸ್‌ 10% ಗೂ ಕಡಿಮೆ ಮತಗಳನ್ನು ಪಡೆದುಕೊಂಡಿದೆ. ತನ್ನ ಸಮೀಪ ಪ್ರತಿಸ್ಪರ್ಧಿಯಿಂದ ಬಿಜೆಪಿ 10% ಹೆಚ್ಚು ಮತ ಗಳಿಕೆ ಮಾಡಲು ಸಾಧ್ಯವಾಗಿದೆ. ವಿರೋಧ ಪಕ್ಷಗಳ ವಿಭಜನೆಯೇ ಬಿಜೆಪಿಗೆ ಅನುಕೂಲವಾಗಿ ಪರಿಣಮಿಸಿತು.

ಯುಪಿ ಬಿಜೆಪಿ ಶಾಸಕರಲ್ಲಿ ಶೇ.50 ಮಂದಿಗೆ 3ಕ್ಕಿಂತ ಅಧಿಕ ಮಕ್ಕಳು: ಸ್ಥಾನಕ್ಕೆ ಕುತ್ತಾಗುತ್ತಾ ಹೊಸ ಜನಸಂಖ್ಯಾ ನೀತಿಯುಪಿ ಬಿಜೆಪಿ ಶಾಸಕರಲ್ಲಿ ಶೇ.50 ಮಂದಿಗೆ 3ಕ್ಕಿಂತ ಅಧಿಕ ಮಕ್ಕಳು: ಸ್ಥಾನಕ್ಕೆ ಕುತ್ತಾಗುತ್ತಾ ಹೊಸ ಜನಸಂಖ್ಯಾ ನೀತಿ

 ವಿಪಕ್ಷಗಳು ಒಟ್ಟಾದರೂ ಗೆಲುವು ಸಾಧ್ಯವಿಲ್ಲ

ವಿಪಕ್ಷಗಳು ಒಟ್ಟಾದರೂ ಗೆಲುವು ಸಾಧ್ಯವಿಲ್ಲ

2019ರ ಚುನಾವಣೆಯಲ್ಲಿ ಸಮಾಜವಾದಿ ಹಾಗೂ ಬಹುಜನ ಸಮಾಜವಾದಿ ಪಕ್ಷ ಜೊತೆಯಾಗಿ ಬಿಜೆಪಿ ವಿರುದ್ಧ ಸೆಣೆಸಾಟಕ್ಕೆ ನಿಂತರೂ ಬಿಜೆಪಿ 10% ಹೆಚ್ಚು ಮತ ಗಳಿಸುವಲ್ಲಿ ಸಫಲವಾಯಿತು. ಲೋಕಸಭಾ ಚುನಾವಣೆಯಾಗಿದ್ದು, ರಾಜ್ಯ ವಿಧಾನಸಭಾ ಚುನಾವಣೆಗಳಿಗಿಂತ ಬಿಜೆಪಿ ಉತ್ತಮ ಪ್ರದರ್ಶನ ನೀಡಿತ್ತು. ಮುಂಬರುವ ಚುನಾವಣೆಯಲ್ಲಿ ಬಿಎಸ್‌ಪಿ ಎಸ್‌ಪಿ ಜೊತೆಯಾಗಿ ನಿಂತರೆ ಬಿಜೆಪಿ ನಡುವಿನ ಗೆಲುವಿನ ಅಂತರವನ್ನು ಕಡಿಮೆಗೊಳಿಸಬಹುದಾಗಿದೆ. ಆದರೆ ಆ ಒಪ್ಪಂದವೂ ಅಸಂಭವವಾಗಿದ್ದು, ಎರಡೂ ಪಕ್ಷಗಳು ಅದನ್ನು ಸ್ಪಷ್ಟಪಡಿಸಿವೆ.
ರಾಜ್ಯದಲ್ಲಿ ಬಿಜೆಪಿ ಸೋಲಿಸಲು ಯಾವುದೇ ಪಕ್ಷ ಬಿಜೆಪಿಯ ಮೂಲ ಮತಗಳ ದೊಡ್ಡ ಭಾಗವನ್ನೇ ಬಿಜೆಪಿಯಿಂದ ದೂರವಿಡಬೇಕಾದ ಕೆಲಸ ಮಾಡಬೇಕಾಗುತ್ತದೆ. ಆದರೆ ಸದ್ಯಕ್ಕೆ ಇದು ಅಸಂಭವವೆನಿಸಿದೆ. 2014ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಹಿನ್ನಡೆ ಅನುಭವಿಸಿದ್ದರೂ ತನ್ನ ಮತ ಪಾಲಿನಲ್ಲಿ ದ್ವಿಗುಣ ಸಂಖ್ಯೆಯ ಕುಸಿತ ಕಂಡಿಲ್ಲ. ಉತ್ತರ ಪ್ರದೇಶದಿಂದ ಬಿಜೆಪಿ ಹೊರಗುಳಿಯಬೇಕಾದರೆ ಮತ ಸಂಖ್ಯೆಯಲ್ಲಿ ಎರಡು ಪಟ್ಟು ಕುಸಿಯಬೇಕಿದೆ. ಆದರೆ ಪರಿಸ್ಥಿತಿ ಬಿಜೆಪಿಗೆ ಅನುಕೂಲಕರವಾಗಿದೆ.

 ಹಿಂದೂ ಬಲವರ್ಧನೆ ವಿಚಾರ

ಹಿಂದೂ ಬಲವರ್ಧನೆ ವಿಚಾರ

ಪ್ರಮುಖವಾಗಿ ಎರಡು ಕಾರ್ಯಸಾಧು ಆಯ್ಕೆಗಳನ್ನು ನೋಡಬಹುದು. ಒಂದು ಪಕ್ಷದಲ್ಲಿ ಅಸಮಾಧಾನ ಕಾಣಿಸಿಕೊಂಡ ತಕ್ಷಣವೇ ಇನ್ನೊಂದು ಪಕ್ಷಕ್ಕೆ ಪ್ರಯೋಜನವಾಗುವುದು. ಆದರೆ ದ್ವಿಪಕ್ಷವಲ್ಲದೇ ಬಹುಪಕ್ಷವಾದ್ದರಿಂದ ಇಲ್ಲಿ ದೊಡ್ಡ ಬದಲಾವಣೆ ಕಾಣುವುದು ಅಪರೂಪ. ಇದರೊಂದಿಗೆ ಹಲವು ವರ್ಷಗಳಿಂದ ಬಿಜೆಪಿ ತನ್ನ ಸಾಮಾಜಿಕ ನೆಲೆಯನ್ನು ಯಶಸ್ವಿಯಾಗಿ ವಿಸ್ತರಿಸಿಕೊಂಡು ಬಂದಿರುವುದು ಪ್ಲಸ್ ಪಾಯಿಂಟ್ ಆಗಲಿದೆ. ಮೇಲ್ಜಾತಿಗಳ ಬೆಂಬಲವನ್ನು ಕಳೆದುಕೊಳ್ಳದೇ ಹಿಂದೂ ಒಕ್ಕೂಟವನ್ನು ಒಗ್ಗೂಡಿಸಲು ಪ್ರಬಲವಲ್ಲದ ಹಿಂದೂ ಜಾತಿ ಬೆಂಬಲ ಗಳಿಸಿರುವುದು ಬಿಜೆಪಿಗೆ ಗೆಲುವಿನ ಅವಕಾಶ ನೀಡಿದೆ. ಸಮಾಜವಾದಿ ಪಕ್ಷವನ್ನು ಯಾದವ ಹಿತಾಸಕ್ತಿಗಳಿಗಾಗಿ ಕೆಲಸ ಮಾಡುವ ಪಕ್ಷವೆಂದು ಬಿಂಬಿಸುವ ಮೂಲಕ ಯಾದವರಲ್ಲದ ಒಬಿಸಿ ಸಮುದಾಯಗಳನ್ನು ತನ್ನ ಪರ ಸೆಳೆದುಕೊಂಡಿದೆ. ಅದೇ ರೀತಿ ಜಟಾವ್ ಪ್ರಾಬಲ್ಯದ ಪಕ್ಷವಾಗಿ ಬಿತ್ತರಿಸುವ ಮೂಲಕ ಜಟಾವ್ ದಲಿತೇತರ ಮತದಾರರ ಬೆಂಬಲ ಪಡೆಯುವಲ್ಲಿ ಯಶಸ್ವಿಯಾಗಿದೆ.

 ಬಿಜೆಪಿಗೆ ಸವಾಲು ಒಡ್ಡಲು ಪ್ರತಿಪಕ್ಷಗಳ ಅಸಮರ್ಥತೆ

ಬಿಜೆಪಿಗೆ ಸವಾಲು ಒಡ್ಡಲು ಪ್ರತಿಪಕ್ಷಗಳ ಅಸಮರ್ಥತೆ

ಉತ್ತರ ಪ್ರದೇಶದಲ್ಲಿ ಸಮುದಾಯಗಳ ನಡುವೆ ಮತಗಳ ವಿಭಜನೆಯಾಗಿದೆ. ಮುಸ್ಲಿಮರ ಮತಗಳು 19%, ಯಾದವರ ಮತಗಳು 11%, ಜಟಾವ್ ಮತಗಳು 12% ಇದ್ದು, ಈ ಮೂರು ಸಮುದಾಯಗಳು ಒಂದಾಗಿ ಒಂದೇ ಪಕ್ಷಕ್ಕೆ ಮತ ಚಲಾಯಿಸಲು ಅಸಮರ್ಥವಾದ ಪರಿಸ್ಥಿತಿಯಿರುವುದು ಬಿಜೆಪಿಗೆ ಒಳ್ಳೆ ಅವಕಾಶವಾಗಿದೆ.

ಮುಸ್ಲಿಂ ಮತಗಳು ಸಮಾಜವಾದಿ, ಬಿಎಸ್‌ಪಿ, ಕಾಂಗ್ರೆಸ್ ನಡುವೆ ಭಿನ್ನ ಪ್ರಮಾಣದಲ್ಲಿ ವಿಂಗಡಣೆಯಾಗಿದೆ. ಯಾದವರು ಸಮಾಜವಾದಿ ಪಕ್ಷದ ಕಡೆ ಇದ್ದು, ಸಾಕಷ್ಟು ಸಂಖ್ಯೆಯ ಮುಸ್ಲಿಮರಿಂದ ಮತಗಳನ್ನು ಪಡೆಯಲು ಸಮಾಜವಾದಿ ಅಸಮರ್ಥವಾಗಿದೆ. ಬಿಎಸ್‌ಪಿಗೆ ಜಟಾವ್‌ ಸಮುದಾಯ ಬೆಂಬಲ ನೀಡುತ್ತಿದ್ದು, ಇತರೆ ಸಮುದಾಯಗಳಿಂದ ಮತ ಪಡೆಯಲು ಪಕ್ಷಕ್ಕೆ ಸಾಧ್ಯವಿಲ್ಲ. ಹೀಗಾಗಿ ಪ್ರತಿಪಕ್ಷಗಳು ಬಿಜೆಪಿಗೆ ಸವಾಲು ಒಡ್ಡಲು ಹೆಣಗುತ್ತಿವೆ.

 ಬಿಜೆಪಿ ಪರ ಜನರ ಒಲವು ಎಂದಿರುವ ಸಮೀಕ್ಷೆಗಳು

ಬಿಜೆಪಿ ಪರ ಜನರ ಒಲವು ಎಂದಿರುವ ಸಮೀಕ್ಷೆಗಳು

ಇತ್ತೀಚೆಗೆ ನಡೆದ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಬಿಜೆಪಿ ಮೇಲುಗೈ ಸಾಧಿಸಿತ್ತು. ಸಮಾಜವಾದಿ ಪಕ್ಷ ಎರಡನೇ ಸ್ಥಾನದಲ್ಲಿತ್ತು. ಇನ್ನು ಬಿಎಸ್ಪಿ ಮತ್ತು ಕಾಂಗ್ರೆಸ್ ಪಾರ್ಟಿ ಗಣನೀಯ ಸಾಧನೆ ತೋರುವಲ್ಲಿ ಹಿಂದೆ ಬಿದ್ದಿತ್ತು. ಈ ಬೆನ್ನಲ್ಲೇ ಸಿವೋಟರ್ ಮತ್ತು ಟೈಮ್ಸ್ ನೌ ಜಂಟಿಯಾಗಿ ನಡೆಸಿದ ಸಮೀಕ್ಷೆಯಲ್ಲಿ ಬಿಜೆಪಿಗೆ ಪೂರಕವಾದ ಫಲಿತಾಂಶ ಹೊರಬಿದ್ದಿದೆ. ಬಿಜೆಪಿ ಮತ್ತು ಎಸ್ಪಿ ನಡುವಿನ ಅಂತರ ಬಹಳ ಹೆಚ್ಚಾಗಿರುವುದು ಸರ್ವೇಯಲ್ಲಿನ ಪ್ರಮುಖಾಂಶ. ಸರ್ವೇ ಪ್ರಕಾರ ಜನರ ಒಲವು ಬಿಜೆಪಿ ಮತ್ತು ಯೋಗಿಯತ್ತ ಮುಂದುವರಿದಿದೆ. ಸರ್ವೇ ಪ್ರಕಾರ ಯೋಗಿ ಆದಿತ್ಯನಾಥ ನೇತೃತ್ವದ ಬಿಜೆಪಿ ಪರ ಜನರ ಒಲವು ಹೆಚ್ಚಿದೆ. ಯೋಗಿ ಮುಖಂಡತ್ವದಲ್ಲಿ ಬಿಜೆಪಿ ಅಧಿಕಾರ ಉಳಿಸಿಕೊಳ್ಳಲಿದೆ ಎನ್ನುವವರ ಸಂಖ್ಯೆ ಶೇ. 43.1ರಷ್ಟು. ಇನ್ನು, ಅಖಿಲೇಶ್ ನೇತೃತ್ವದ ಸಮಾಜವಾದಿ ಪಕ್ಷವೇ ಅಧಿಕಾರಕ್ಕೆ ಬರುತ್ತದೆ ಎಂದು ಶೇ.29.6ರಷ್ಟು ಜನ ಅಭಿಪ್ರಾಯಪಟ್ಟಿದ್ದಾರೆ.

English summary
It will be very difficult to displace BJP from Uttar pradesh. Here Is Some Reasons,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X