ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

2 ದಶಕಗಳ ನಂತರ ಒಂದೇ ವೇದಿಕೆಯಲ್ಲಿ ಮಾಯಾ-ಮುಲಾಯಂ

|
Google Oneindia Kannada News

ಲಕ್ನೋ, ಏಪ್ರಿಲ್ 19: 'ರಾಜಕೀಯದಲ್ಲಿ ಯಾರೂ ಶತ್ರುಗಳಲ್ಲ, ಯಾರೂ ಮಿತ್ರರಲ್ಲ' ಎಂಬ ಮಾತಿದೆ. ಉತ್ತರಪ್ರದೇಶದಲ್ಲಿ ಬಿಜೆಪಿ ವಿರುದ್ಧ ಸಮರ ಸಾರಲು ಸಮಾಜವಾದಿ ಪಕ್ಷ ಹಾಗೂ ಬಹುಜನ ಸಮಾಜವಾದಿ ಪಕ್ಷ ಮೈತ್ರಿ ಮಾಡಿಕೊಂಡು ತಕ್ಕಮಟ್ಟಿನ ಯಶಸ್ಸು ಸಾಧಿಸಿವೆ.
ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಆದರೆ, ಸಮಾಜವಾದಿ ಪಕ್ಷದ ಸ್ಥಾಪಕ ಮುಲಾಯಂ ಸಿಂಗ್ ಯಾದವ್ ಅವರು ಮಾತ್ರ ಬಿಎಸ್ಪಿ ಮುಖ್ಯಸ್ಥೆ ಮಾಯಾವತಿ ಜತೆ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡಿರಲಿಲ್ಲ.

ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಆಸ್ತಿ ವಿವರ ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಆಸ್ತಿ ವಿವರ

ಆದರೆ, ಇದು 24 ವರ್ಷಗಳ ಹಗೆತನವನ್ನು ಬದಿಗೊತ್ತಿ, ಇಬ್ಬರು ಒಂದೇ ವೇದಿಕೆಯಲ್ಲಿ ಪರಸ್ಪರ ಕೈ ಮುಗಿಯುತ್ತಿರುವ ದೃಶ್ಯ ಇತಿಹಾಸ ಸೃಷ್ಟಿಸಿದೆ. ಶುಕ್ರವಾರದಂದು ಮುಲಾಯಂ ಸಿಂಗ್ ಪರ ಪ್ರಚಾರ ಕೈಗೊಳ್ಳಲು ಮೇನ್ಪುರ್ ಕ್ಷೇತ್ರಕ್ಕೆ ಮಯಾವತಿ ಆಗಮಿಸಿದರು. ಸಮಾವೇಶದಲ್ಲಿ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡರು.

1992ರಲ್ಲಿ ಉತ್ತರಪ್ರದೇಶದ ಅಯೋಧ್ಯೆಯಲ್ಲಿ ಆರ್​ಎಸ್​ಎಸ್​ ಹಾಗೂ ಬಿಜೆಪಿ ಕಾರ್ಯಕರ್ತರು ಬಾಬರಿ ಮಸೀದಿ ಧ್ವಂಸಗೊಳಿಸಿದ ಘಟನೆ ನಂತರ ಉತ್ತರಪ್ರದೇಶದಲ್ಲಿ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಜಾತ್ಯಾತೀತ ಪಕ್ಷಗಳು ಒಂದಾಗಲು ಬಿಎಸ್ಪಿ ಸಂಸ್ಥಾಪಕ, ಮಯಾವತಿ ಅವರ ಗುರು ಕಾನ್ಶಿರಾಮ್ ಮುನ್ಷಿ ಕಾರಣರಾಗಿದ್ದರು.

ಮುಲಾಯಂ ಹಾಗೂ ಕಾನ್ಶಿರಾಮ್ ಜೋಡಿ

ಮುಲಾಯಂ ಹಾಗೂ ಕಾನ್ಶಿರಾಮ್ ಜೋಡಿ

ಮುಲಾಯಂ ಹಾಗೂ ಕಾನ್ಶಿರಾಮ್ ಅವರು ಒಟ್ಟಾಗಿ ಚುನಾವಣೆ ಎದುರಿಸಿದ್ದರು. ಎಸ್​ಪಿ 109 ಸ್ಥಾನ, ಬಿಎಸ್​ಪಿ 67 ಸ್ಥಾನಗಳಲ್ಲಿ ಗೆಲುವು ಸಾಧಿಸಲು ಸಾಧ್ಯವಾಗಿತ್ತು. ಆದರೆ, ಒಟ್ಟು 177 ಸ್ಥಾನಗಳಲ್ಲಿ ಗೆಲುವು ಸಾಧಿಸುವ ಮೂಲಕ ಬಿಜೆಪಿ ಏಕೈಕ ದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು.

ಸ್ಥಳೀಯ ಪಕ್ಷಗಳು ಹಾಗೂ ಪಕ್ಷೇತರರ ನೆರವಿನಿಂದ ಸರ್ಕಾರ ಸ್ಥಾಪಿಸಿದರೂ ಮುಲಾಯಂ ಹಾಗೂ ಮಾಯಾವತಿ ನಡುವಿನ ಭಿನ್ನಾಭಿಪ್ರಾಯದಿಂದಾಗಿ ಈ ಮೈತ್ರಿ ಸರ್ಕಾರವು 1995ರಲ್ಲಿ ಮುರಿದು ಬಿದ್ದಿತ್ತು. ಅಂದಿನಿಂದ ಇಲ್ಲಿ ತನಕ ಒಂದೇ ವೇದಿಕೆಯಲ್ಲಿ ಮುಲಾಯಂ ಹಾಗೂ ಮಾಯಾವತಿ ಕಾಣಿಸಿಕೊಂಡಿರಲಿಲ್ಲ.

ಯೋಗಿ ವಿರುದ್ಧ ಸಮರ ಸಾರಿದ ಅಖಿಲೇಶ್ -ಮಾಯಾ

ಯೋಗಿ ವಿರುದ್ಧ ಸಮರ ಸಾರಿದ ಅಖಿಲೇಶ್ -ಮಾಯಾ

ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸ್ವಕ್ಷೇತ್ರವಾದ ಗೋರಕ್​ಪುರ ಮತ್ತು ಕೈರಾನ ಕ್ಷೇತ್ರಗಳಿಗೆ ನಡೆದ ಉಪ ಚುನಾವಣೆಯಲ್ಲಿ ಮೈತ್ರಿ ಪಕ್ಷಗಳು ಭರ್ಜರಿ ಗೆಲುವು ಸಾಧಿಸಿದ್ದು ಮೈತ್ರಿಯನ್ನು ಮತ್ತಷ್ಟು ಬಲಪಡಿಸಿದೆ.

80 ಲೋಕಸಭಾ ಕ್ಷೇತ್ರಗಳಲ್ಲಿ ಚುನಾವಣೆ

80 ಲೋಕಸಭಾ ಕ್ಷೇತ್ರಗಳಲ್ಲಿ ಚುನಾವಣೆ

80 ಲೋಕಸಭಾ ಕ್ಷೇತ್ರಗಳನ್ನು ಹೊಂದಿರುವ ಉತ್ತರಪ್ರದೇಶದಲ್ಲಿ 2014ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ 72 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿತ್ತು. ಹೀಗಾಗಿ ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿಯ ಓಟಕ್ಕೆ ತಡೆ ಹಾಕಲು ಮುಂದಾಗಿರುವ ಎಸ್​ಪಿ-ಬಿಎಸ್​ಪಿ ಮೈತ್ರಿ ಮಾಡಿಕೊಂಡಿದ್ದು ತಲಾ 37-38 ಕ್ಷೇತ್ರಗಳಲ್ಲಿ ಸ್ಪರ್ಧಿಸುತ್ತಿವೆ.

ಮುಲಾಯಂ ನಿಜವಾದ ಒಬಿಸಿ ನಾಯಕ

ಮುಲಾಯಂ ನಿಜವಾದ ಒಬಿಸಿ ನಾಯಕ

ನಾವಿಬ್ಬರು ಒಂದೇ ವೇದಿಕೆಯಲ್ಲಿ ಕಾಣಿಸಿಕೊಳ್ಳುತ್ತಿರುವುದು ಯಾವುದೇ ಸಂದೇಶ ನೀಡುವುದಕ್ಕಾಗಿ ಅಲ್ಲ, ಸಮಾಜವಾದಿ ಪಕ್ಷದಲ್ಲಿ ಮುಲಾಯಂ ಅವರು ಎಲ್ಲಾ ವರ್ಗದ ಪ್ರತಿನಿಧಿಗಳಿಗೆ ಅವಕಾಶ ನೀಡಿದ್ದಾರೆ. ಪ್ರಧಾನಿ ಮೋದಿಯ ಹಾಗೆ ಇವರು ನಕಲಿಯಲ್ಲ, ನಿಜವಾದ ಹಿಂದುಳಿದ ವರ್ಗದ ನಾಯಕ ಎಂದು ಮಯಾವತಿ ಅವರು ತಮ್ಮ ಭಾಷಣದಲ್ಲಿ ಹೇಳಿದರು.

ಮಾಯಾವತಿ ಅವರಿಗೆ ನನ್ನ ಧನ್ಯವಾದ ಎಂದ ಮುಲಾಯಂ

ಮಾಯಾವತಿ ಅವರಿಗೆ ನನ್ನ ಧನ್ಯವಾದ ಎಂದ ಮುಲಾಯಂ

ನನ್ನ ಪರ ಮತಯಾಚಿಸಲು ಬಂದಿರುವ ಮಾಯಾವತಿ ಅವರಿಗೆ ನನ್ನ ಧನ್ಯವಾದ ಎಂದು ಮುಲಾಯಂ ಅವರು ಹೇಳಿದರು. ಮಯಾವತಿ ಹಾಗೂ ಅಖಿಲೇಶ್ ಅವರು ದಿಯೋಬಂದ್, ಬದೌನ್ ಹಾಗೂ ಆಗ್ರಾದಲ್ಲಿ ಈಗಾಗಲೆ ಜಂಟಿ ಸಮಾವೇಶದಲ್ಲಿ ಪಾಲ್ಗೊಂಡಿದ್ದಾರೆ.

English summary
Ending decades-long rivalry, , SP founder Mulayam Singh Yadav and BSP chief Mayawati shared the dais at a joint rally of the Samajwadi Party (SP)-Bahujan Samajwadi Party (BSP)-Rashtriya Lok Dal (RLD) alliance in the Samajwadi Party citadel of Mainpuri on Friday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X