• search
  • Live TV
ಲಕ್ನೋ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಉ.ಪ್ರದೇಶ ಚುನಾವಣೆ 2022: ಉದ್ದೇಶ ಒಳ್ಳೆಯದಿದೆ, ಕೆಲಸ ನೂರಾರಿದೆ, ವಿಕಾಸ, ವಿಶ್ವಾಸವೇ ಮಂತ್ರ

|
Google Oneindia Kannada News

ಲಕ್ನೋ, ಜುಲೈ 28: ಉದ್ದೇಶ ಒಳ್ಳೆಯದಿದೆ, ಕೆಲಸ ಹಲವಿದೆ, ವಿಕಾಶ ವಿಶ್ವಾಸವೇ ಮಂತ್ರ ಎಂದು ಹೇಳುತ್ತಾ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ 2022ರ ಉತ್ತರ ಪ್ರದೇಶ ಚುನಾವಣಾ ಅಭಿಯಾನವನ್ನು ಶುರು ಮಾಡಿದ್ದಾರೆ.

ಒಂದೊಮ್ಮೆ 2022ರಲ್ಲಿ ಬಿಜೆಪಿ ಸರ್ಕಾರ ರಚಿಸಿದರೆ ನಮ್ಮ ಗುರಿ ರೈತರು ಹಾಗೂ ನಿರುದ್ಯೋಗ ನಿವಾರಣೆ ಮೇಲೆ ಕೇಂದ್ರೀಕೃತವಾಗಿರುತ್ತದೆ ಎಂದು ತಿಳಿಸಿದರು.

ಗರೀಬ್ ಕಲ್ಯಾಣ ಅನ್ನ ಯೋಜನೆಯಲ್ಲಿ ಜನರಿಗೆ ಉಚಿತ ಪಡಿತರವನ್ನು ವಿತರಿಸುತ್ತೇವೆ, ಇದೀಗ ನವೆಂಬರ್‌ವರೆಗೆ ಅದನ್ನು ವಿಸ್ತರಿಸಲಾಗಿದೆ. ಜೂನ್ ತಿಂಗಳಲ್ಲಿ ಯೋಗಿ ಸರ್ಕಾರವು ಪ್ರತ್ಯೇಕ ಯೋಜನೆಗೆ ಚಾಲನೆ ನೀಡಿದೆ.

ಇತ್ತೀಚೆಗಷ್ಟೇ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಅವರು, ತಮ್ಮ ಪಕ್ಷ ಈ ಬಾರಿ 351 ಸೀಟುಗಳನ್ನು ಪಡೆಯಲಿದೆ, ಬಿಜೆಪಿ ಅಸ್ತಿತ್ವ ಕಳೆದುಕೊಳ್ಳಲಿದೆ ಎಂದು ಹೇಳಿಕೆ ನೀಡಿದ್ದರು. ಅಷ್ಟೇ ಅಲ್ಲದೆ ಬಿಜೆಪಿಯು 324 ಸೀಟುಗಳನ್ನು ಗಳಿಸುತ್ತೇನೆ ಎಂದು ಹೇಳಿಕೊಳ್ಳುತ್ತಾ ಜನರ ದಾರಿಯನ್ನು ತಪ್ಪಿಸುತ್ತಿದೆ. ನಾವು 354 ಸೀಟುಗಳನ್ನು ಗಳಿಸಿ ರಾಜ್ಯದ ಅಭಿವೃದ್ಧಿಯತ್ತ ಗಮನಕೊಡುತ್ತೇವೆ ಎಂದು ಅಖಿಲೇಶ್ ಹೇಳಿದ್ದರು.

ಮುಂದಿನ ದಿನಗಳಲ್ಲಿ 2022ರ ಉತ್ತರ ಪ್ರದೇಶದ ಚುನಾವಣೆ ಬಗ್ಗೆ ಚರ್ಚಿಸಲು ಬಜೆಪಿ ನಡ್ಡಾ ಉತ್ತರ ಪ್ರದೇಶ ಸಂಸದರೊಂದಿಗೆ ಮಾತುಕತೆ ನಡೆಸಲಿದ್ದಾರೆ. ಯೋಗಿ ಆದಿತ್ಯನಾಥ್ ಹಾಗೂ ಉತ್ತರ ಪ್ರದೇಶದ ಲೋಕಸಭಾ ಹಾಗೂ ರಾಜ್ಯ ಸಭಾ ಸದಸ್ಯರು ನಡ್ಡಾ ಅವರ ಬಳಿ ಚರ್ಚೆ ನಡೆಸಲಿದ್ದಾರೆ.

2022ರ ಚುನಾವಣೆಯಲ್ಲಿ ಸಿಎಂ ಯೋಗಿ ಆದಿತ್ಯನಾಥ್ ತಮ್ಮ ಹೋಂ ಟೌನ್​ ಆದ ಗೋರಖ್​ಪುರ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸುತ್ತಾರೆ ಎಂದು ಹೇಳಲಾಗಿತ್ತು. ಆದರೆ ಇದೀಗ ಅವರು ಗೋರಖ್​ಪುರದಿಂದ ಸ್ಪರ್ಧೆಗೆ ನಿಲ್ಲುತ್ತಿಲ್ಲ. ಬದಲಿಗೆ ಅಯೋಧ್ಯೆ ವಿಧಾನಸಭೆ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ ಎಂದು ಹೇಳಲಾಗುತ್ತಿದೆ.

ಒಂದೊಮ್ಮೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​ ಅವರು ಅಯೋಧ್ಯೆಯಿಂದ ಸ್ಪರ್ಧಿಸಲು ಮುಂದಾದರೆ ಖಂಡಿತ ಕ್ಷೇತ್ರವನ್ನು ಬಿಟ್ಟುಕೊಡುತ್ತೇನೆ. ಇದು ನನಗೆ ಮತ್ತು ಅಯೋಧ್ಯೆ ಜನರ ಪಾಲಿಗೆ ಹೆಮ್ಮೆ ಮತ್ತು ಅದೃಷ್ಟದ ವಿಷಯ. ಯಾರು, ಯಾವ ಕ್ಷೇತ್ರದಿಂದ ಸ್ಪರ್ಧಿಸಬೇಕು ಎಂಬುದನ್ನು ಪಕ್ಷವೇ ನಿರ್ಧರಿಸುತ್ತದೆ. ಆದರೆ ಅಯೋಧ್ಯೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​ರ ಪ್ರಥಮ ಆದ್ಯತೆ ಎಂದು ಬಿಜೆಪಿ ಶಾಸಕ ವೇದ್ ಪ್ರಕಾಶ ಗುಪ್ತಾ ಹೇಳಿದ್ದಾರೆ.

English summary
Chief Minister Yogi Adityanath launched the 2022 Uttar Pradesh poll campaign titled ‘Irade Nek Kaam Anek’ with a focus on ‘Vikas and Vishwas’.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X