ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉತ್ತರ ಪ್ರದೇಶದಲ್ಲಿ ಬಿಜೆಪಿಗೆ 18ಸ್ಥಾನ : ಇಂಡಿಯಾ ಟುಡೇ ಸಮೀಕ್ಷೆ

|
Google Oneindia Kannada News

Recommended Video

Lok Sabha Election 2019 : ಉತ್ತರ ಪ್ರದೇಶದಲ್ಲಿ ಬಿಜೆಪಿಗೆ ಸೋಲು|ಇದು ಇಂಡಿಯಾ ಟುಡೇ ಮೂಡ್ ಆಫ್ ದಿ ನೇಶನ್ ಸಮೀಕ್ಷೆ

ಲಕ್ನೋ, ಜನವರಿ 24: ಉತ್ತರ ಪ್ರದೇಶದ 80 ಲೋಕಸಭಾ ಕ್ಷೇತ್ರಗಳಲ್ಲಿ 18ರಲ್ಲಿ ಮಾತ್ರ ಬಿಜೆಪಿ ಗೆಲುವು ಸಾಧಿಸಲಿದೆ ಎಂದು ಇಂಡಿಯಾ ಟುಡೆ ಮೂಡ್ ಆಫ್ ದಿ ನೇಶನ್ ಸಮೀಕ್ಷೆ ಹೇಳಿದೆ.

2014 ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್ ಡಿ ಎ ಮೈತ್ರಿಕೂಟದ ಗೆಲುವಿಗೆ ಕಾರಣವಾಗಿದ್ದು ಉತ್ತರ ಪ್ರದೇಶದಲ್ಲಿ ನೀಡಿದ ಅಮೋಘ ಪ್ರದರ್ಶನ.

ಲೋಕಸಭೆ 2019 : ಉತ್ತರ ಪ್ರದೇಶದ ಚಿತ್ರಣವನ್ನೇ ಬದಲಿಸಿರುವ ಘಟಬಂಧನಲೋಕಸಭೆ 2019 : ಉತ್ತರ ಪ್ರದೇಶದ ಚಿತ್ರಣವನ್ನೇ ಬದಲಿಸಿರುವ ಘಟಬಂಧನ

ಆದರೆ ಈ ಬಾರಿ ಬಹುಜನ ಸಮಾಜ ಪಕ್ಷ ಮತ್ತು ಸಮಾಜವಾದಿ ಪಕ್ಷ ಮೈತ್ರಿ ಮಾಡಿಕೊಂಡಿದ್ದರಿಂದ ಬಿಜೆಪಿಗೆ ಭಾರೀ ಹೊಡೆತ ಬೀಳಲಿದೆ ಎಂದು ಸಮೀಕ್ಷೆ ಹೇಳಿದೆ. ಅಕಸ್ಮಾತ್ ಚುನಾವಣೆಗೂ ಮುನ್ನ ಈ ಮೈತ್ರಕೂಟದಲ್ಲಿ ಕಾಂಗ್ರೆಸ್ ಪಕ್ಷವು ಸೇರಿಕೊಂಡರಂತೂ ಬಿಜೆಪಿ ಹೀನಾಯ ಸೋಲು ಕಾಣುವುದು ಖಂಡಿತ ಎಂದು ಸಮೀಕ್ಷೆ ಹೇಳಿದೆ.

ಯಾರಿಗೆಷ್ಟು ಸೀಟು?

ಯಾರಿಗೆಷ್ಟು ಸೀಟು?

ಸಮೀಕ್ಷೆಯ ಪ್ರಕಾರ ಬಿಎಸ್ಪಿ-ಎಸ್ಪಿ ಮತ್ತು ಆರ್ ಎಲ್ ಡಿ ಮೈತ್ರಿಕೂಟವು 58 ಸ್ಥಾನಗಳಲ್ಲಿ ಜಯಗಳಿಸಲಿದ್ದು, ಬಿಜೆಪಿ ಕೇವಲ 18 ಸ್ಥಾನಗಳಲ್ಲಿ ಜಯಗಳಿಸಲಿದೆ. ಉಳಿದ ಸ್ಥಾನಗಳಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಲಿದೆ. ಉತ್ತರ ಪ್ರದೇಶದ ಒಟ್ಟು ಲೋಕಸಭಾ ಕ್ಷೇತ್ರಗಳ ಸಂಖ್ಯೆ 80.

ಉತ್ತರ ಪ್ರದೇಶದಲ್ಲಿ ಎಸ್ಪಿ-ಬಿಎಸ್ಪಿಗೆ ಈಗ ಮತ್ತೊಂದು ಪಕ್ಷದ ಬೆಂಬಲ ಉತ್ತರ ಪ್ರದೇಶದಲ್ಲಿ ಎಸ್ಪಿ-ಬಿಎಸ್ಪಿಗೆ ಈಗ ಮತ್ತೊಂದು ಪಕ್ಷದ ಬೆಂಬಲ

ಉಲ್ಟಾ ಹೊಡೆಯಲಿದೆ ಬಿಜೆಪಿ ಲೆಕ್ಕಾಚಾರ

ಉಲ್ಟಾ ಹೊಡೆಯಲಿದೆ ಬಿಜೆಪಿ ಲೆಕ್ಕಾಚಾರ

ಉತ್ತರ ಪ್ರದೇಶದಲ್ಲಿ 2014 ರ ಲೋಕಸಭಾ ಚುನಾವಣೆಯಲ್ಲಿ 71 ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದ ಬಿಜೆಪಿ ಅದೇ ಗೆಲುವಿನ ಕನಸು ಕಾಣುವಂತಿಲ್ಲ ಎಂದು ಸಮೀಕ್ಷೆ ಎಚ್ಚರಿಸಿದೆ. ಎಸ್ಪಿ-ಬಿಎಸ್ಪಿ ಮೈತ್ರಿಯಿಂದ ಕಾಂಗ್ರೆಸ್ ಗೆ ನಷ್ಟವಾಗುವುದಾದರೂ 73 ಸ್ಥಾನಗಳಲ್ಲಿ ಗೆಲುವು ಸಾಧಿಸಿದ ಬಿಜೆಪಿಗೆ ಕಾಂಗ್ರೆಸ್ ಗಿಂತ ಹೆಚ್ಚೇ ನಷ್ಟವಾಗುವುದು ಖಂಡಿತ.

ರಾಜಕಾರಣಕ್ಕೆ ಪ್ರಿಯಾಂಕ: ಶಾ, ಮೋದಿಗೆ ರಾಹುಲ್ 'ಸರ್ಜಿಕಲ್ ಸ್ಟ್ರೈಕ್'ರಾಜಕಾರಣಕ್ಕೆ ಪ್ರಿಯಾಂಕ: ಶಾ, ಮೋದಿಗೆ ರಾಹುಲ್ 'ಸರ್ಜಿಕಲ್ ಸ್ಟ್ರೈಕ್'

ಕಾಂಗ್ರೆಸ್ಸಿಗೆಷ್ಟು?

ಕಾಂಗ್ರೆಸ್ಸಿಗೆಷ್ಟು?

2014 ರಲ್ಲಿ ಕೇವಲ ಎರಡು ಸ್ಥಾನಗಳಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿತ್ತು. ಆದರೆ ಈ ಬಾರಿ ಮತ್ತೆರಡು ಸ್ಥಾನಗಳಲ್ಲಿ ಅದು ಗೆಲ್ಲಲಿದೆ. ಅಕಸ್ಮಾತ್ ಎಸ್ಪಿ-ಬಿಎಸ್ಪಿ ಜೊತೆ ಕಾಂಗ್ರೆಸ್ಸೂ ಸೇರಿಕೊಂಡರೆ ಬಿಜೆಪಿ ಕೇವಲ 5 ಸ್ಥಾನಗಳಲ್ಲಿ ಗೆಲುವು ಸಾಧಿಸಲಿದೆ ಎಂದು ಸಮೀಕ್ಷೆ ಹೇಳಿದೆ.

ಸಮೀಕ್ಷೆ ನಡೆದಿದ್ದು ಹೇಗೆ?

ಸಮೀಕ್ಷೆ ನಡೆದಿದ್ದು ಹೇಗೆ?

ಇಂದೇ ಲೋಕಸಭಾ ಚುನಾವಣೆ ನಡೆದರೆ ಗೆಲ್ಲುವುದ ಯಾರು ಎಂದು ಇಂಡಿಯಾ ಟುಡೆ-ಕಾರ್ವಿ ಸಂಸ್ಥೆಯು ಸುಮಾರು 2400 ಜನರನ್ನು ಸಂದರ್ಶಿಸಿ ಸಮೀಕ್ಷೆ ನಡೆಸಿತ್ತು. ಇದೀಗ ಅದರ ವರದಿ ಹೊರಬಿದ್ದಿದ್ದು, ದೇಶದ ಬಹುದೊಡ್ಡ ರಾಜ್ಯದಲ್ಲಿ ಬಿಜೆಪಿ ಮುಖಭಂಗ ಅನುಭವಿಸುವುದು ಖಚಿತ ಎಂದು ಅದು ಹೇಳಿದೆ.

English summary
India Today Mood of the nation Survey: In uttar Pradesh BSP and BSP alliance will be causing major set back to BJP. The alliance may win 53 seats and BJP and Apna Dal alliance may win only 18 seats.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X