ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೇಶದಲ್ಲಿ ಕೊರೊನಾ 4ನೇ ಅಲೆ ಯಾವಾಗ: IIT ಕಾನ್ಪುರದ ಸಂಶೋಧಕರು ಹೇಳೋದೇನು?

|
Google Oneindia Kannada News

ಲಕ್ನೋ, ಫೆಬ್ರವರಿ 28: ಕೊರೊನಾ ನಾಲ್ಕನೇ ಅಲೆ ಯಾವಾಗ ಬರಲಿದೆ ಎನ್ನುವ ಕುರಿತು ಐಐಟಿ ಕಾನ್ಪುರ್ ಸಂಶೋಧಕರು ಕೆಲವು ಮಾಹಿತಿ ನೀಡಿದ್ದಾರೆ.

ಕೊರೊನಾ ನಾಲ್ಕನೇ ಅಲೆಯೂ ಸರಿಸುಮಾರು ನಾಲ್ಕು ತಿಂಗಳುಗಳವರೆಗೆ ಇರುತ್ತದೆ ಮತ್ತು ಮೊದಲ ಮತ್ತು ಎರಡನೇ ವ್ಯಾಕ್ಸಿನ್ ಡೋಸ್‍ಗಳನ್ನು ಸ್ವೀಕರಿಸಿದ್ದರು ಸಹ ಕೊರೊನಾ ಜನರ ಮೇಲೆ ತೀವ್ರ ಪರಿಣಾಮ ಬೀರುತ್ತದೆ ಎಂದು ಐಐಟಿ ಕಾನ್ಪುರದ ಹಿರಿಯ ಸಂಶೋಧಕರು ಹೇಳಿದ್ದಾರೆ. ಐಐಟಿ ಕಾನ್ಪುರದ ಗಣಿತ ವಿಭಾಗದ ಸಬರ ಪರ್ಷದ್ ರಾಜೇಶ್ಭಾಯ್, ಸುಭ್ರಾ ಶಂಕರ್ ಧರ್ ಮತ್ತು ಶಲಭ್ ಈ ಅಧ್ಯಯನದ ನೇತೃತ್ವ ವಹಿಸಿದ್ದರು.

ಫೆ.28: ಜಗತ್ತಿನ ಯಾವ ದೇಶದಲ್ಲಿ ಎಷ್ಟು ಕೊರೊನಾವೈರಸ್ ಸೋಂಕಿತರು ಗುಣಮುಖ?ಫೆ.28: ಜಗತ್ತಿನ ಯಾವ ದೇಶದಲ್ಲಿ ಎಷ್ಟು ಕೊರೊನಾವೈರಸ್ ಸೋಂಕಿತರು ಗುಣಮುಖ?

ಇತ್ತೀಚೆಗಷ್ಟೇ ಯುನೈಟೆಡ್ ಸ್ಟೇಟ್ಸ್‌ನಲ್ಲಿ ನಡೆಸಲಾದ ಮತ್ತೊಂದು ಅಧ್ಯಯನದಲ್ಲಿ ಮುಂದೆ ಕೋವಿಡ್ ರೂಪಾಂತರಿ ವೈರಸ್ ಎರಡು ವಿಭಿನ್ನ ರೀತಿಯಲ್ಲಿ ಹೊರಹೊಮ್ಮಬಹುದು ಎಂದು ತಿಳಿಸಿದೆ ಮತ್ತು ಹೊಸ ರೂಪಾಂತರವು ಹಿಂದೆ ಇದ್ದ ವೈರಸ್‍ಗಳಿಗಿಂತ ಕಡಿಮೆ ತೀವ್ರತೆಯದಾಗಿರುತ್ತದೆ ಎಂದು ಹೇಳಲು ಸಾಧ್ಯವಿಲ್ಲ ಎಂದಿದ್ದರು.

India May See Fourth Covid Wave From June, Peak In August: Study

ಐಐಟಿ-ಕೆ ಸಂಶೋಧಕರು ನಡೆಸಿದ ಸಂಶೋಧನೆ ಪ್ರಕಾರ, ಜೂನ್ ಮಧ್ಯದಿಂದ ಅಂತ್ಯದ ವೇಳೆಗೆ ಭಾರತವು ನಾಲ್ಕನೇ ಕೊರೊನಾ ಅಲೆಗೆ ಸಾಕ್ಷಿಯಾಗುವ ಸಾಧ್ಯತೆಯಿದೆ.

4ನೇ ಅಲೆ ಗಂಭೀರವಾಗಿರಲಿದ್ದು, ಸುಮಾರು 4 ತಿಂಗಳವರೆಗೆ ಕಾಡಲಿದೆ ಎಂದು ಸಂಶೋಧಕರು ತಿಳಿಸಿದ್ದಾರೆ. ಅಲೆಯ ತೀವ್ರತೆಯು ಹೊಸ ರೂಪಾಂತರಗಳ ಸೃಷ್ಟಿ ಮತ್ತು ಬೂಸ್ಟರ್ ಡೋಸ್ ಗಳ ಮೇಲೆ ಅವಲಂಬಿತವಾಗಿರುತ್ತದೆ ಎನ್ನಲಾಗುತ್ತಿದೆ..

IIT ಕಾನ್ಪುರದ ಸಂಶೋಧಕರು COVID-19 ನ ನಾಲ್ಕನೇ ತರಂಗ ಕನಿಷ್ಠ ನಾಲ್ಕು ತಿಂಗಳವರೆಗೆ ಇರುತ್ತದೆ ಎಂದು ಹೇಳಿದ್ದಾರೆ. ಫೆಬ್ರವರಿ 24 ರಂದು ಪ್ರಿಪ್ರಿಂಟ್ ಸರ್ವರ್ MedRxiv ನಲ್ಲಿ ಈ ಬಗ್ಗೆ ಪ್ರಕಟಿಸಲಾಗಿದೆ.

ನಾಲ್ಕನೇ ಅಲೆಯ ಆಗಸ್ಟ್ 15 ರಿಂದ ಆಗಸ್ಟ್ 31 ರವರೆಗೆ ಗರಿಷ್ಠ ಮಟ್ಟವನ್ನು ತಲುಪಲಿದೆ ಎನ್ನುವುದು ತಜ್ಞರ ಅಂದಾಜು. ನಂತರ ಮತ್ತೆ ಅದು ಕಡಿಮೆಯಾಗಲು ಪ್ರಾರಂಭಿಸುತ್ತದೆ. ಆದರೆ, ಹೊಸ ರೂಪಾಂತರದ ಗಂಭೀರತೆಯ ಬಗ್ಗೆ ಸದ್ಯಕ್ಕೆ ಏನನ್ನೂ ಹೇಳಲು ಸಾಧ್ಯವಿಲ್ಲ ಎನ್ನುತ್ತಾರೆ ತಜ್ಞರು.

ಐಐಟಿ ಕಾನ್ಪುರದ ಸಂಶೋಧಕರು ದೇಶದಲ್ಲಿ ಕೊರೊನಾ ಅಲೆಯ ಬಗ್ಗೆ ಭವಿಷ್ಯ ನುಡಿದಿರುವುದು ಇದು ಮೂರನೇ ಬಾರಿ. ಅವರ ಭವಿಷ್ಯವಾಣಿ, ವಿಶೇಷವಾಗಿ ಮೂರನೇ ತರಂಗದ ಬಗ್ಗೆ, ಬಹುತೇಕ ನಿಖರವಾಗಿವೆ.

ಕೊರೊನಾ ಸಾಂಕ್ರಾಮಿಕ ರೋಗ ಪ್ರಾರಂಭವಾದ 936 ದಿನಗಳ ನಂತರ ಕೊರೊನಾದ ನಾಲ್ಕನೇ ತರಂಗ ಬರಬಹುದು ಎಂದು ಸಂಶೋಧಕರು ಹೇಳಿದ್ದಾರೆ. ಈ ಪ್ರಕಾರ ನಾಲ್ಕನೇ ಅಲೆಯು ಅಂದಾಜು ಜೂನ್ 22 ರಿಂದ ಪ್ರಾರಂಭವಾಗಬಹುದು. ನಾಲ್ಕನೇ ತರಂಗ ಎಷ್ಟರ ಮಟ್ಟಿಗೆ ಅಪಾಯಕಾರಿಯಾಗಿರಬಹುದು ಎನ್ನುವುದನ್ನು ತಿಳಿಯಲು ತಂಡವು 'ಬೂಟ್‌ಸ್ಟ್ರಾಪ್' ಎಂಬ ವಿಧಾನವನ್ನು ಬಳಸಿದೆ.

ಈ ವಿಧಾನವನ್ನು ಇತರ ದೇಶಗಳಲ್ಲಿಯೂ ನಾಲ್ಕನೇ ಮತ್ತು ಇತರ ಅಲೆಯನ್ನು ಊಹಿಸಲು ಬಳಸಬಹುದು ಎಂದು ಅವರು ಹೇಳಿದ್ದಾರೆ.

English summary
The fourth wave of the COVID-19 pandemic in India may start around June 22 and peak from mid-to-late August, a modelling study by researchers at the Indian Institute of Technology-Kanpur suggests.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X