ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಾಕಿಸ್ತಾನದ ಯಾವುದೇ ಪ್ರಯತ್ನವನ್ನು ಎದುರಿಸಲು ಭಾರತ ಸಿದ್ಧ: ರಾಜನಾಥ್ ಸಿಂಗ್

|
Google Oneindia Kannada News

ಕಾನ್ಪುರ್, ಜುಲೈ 06: ಪಾಕಿಸ್ತಾನದ ಯಾವುದೇ ರೀತಿಯ ಪ್ರಯತ್ನವನ್ನಾದರೂ ಎದುರಿಸಲು ಭಾರತ ಸಿದ್ಧವಾಗಿದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ತಿಳಿಸಿದ್ದಾರೆ.

Recommended Video

ನಾವು ಎಲ್ಲದಕ್ಕೂ ರೆಡಿ ಇದ್ದೀವಿ ಎಂದು ಪಾಕ್ ಗೆ ಎಚ್ಚರಿಕೆ ಕೊಟ್ಟ ಭಾರತ | Oneindia Kannada

ಪಾಕಿಸ್ತಾನದ ಯಾವುದೇ ದುರಾತ್ಮಕ ಪ್ರಯತ್ನ ಇಲ್ಲವೇ ಅದರ ತಂತ್ರಜ್ಞಾನವನ್ನು ಎದುರಿಸಲು ಭಾರತ ಸಮರ್ಥವಾಗಿದೆ, ಇತ್ತೀಚಿನ ಜಮ್ಮು ವಾಯುಪಡೆ ನೆಲೆಯ ಮೇಲೆ ನಡೆದ ಡ್ರೋನ್ ದಾಳಿಯ ಕುರಿತು ಈ ರೀತಿಯ ಪ್ರತಿಕ್ರಿಯೆ ನೀಡಿದ್ದಾರೆ.

ಮೋದಿ ಮಹತ್ವದ ಸಭೆ; ಶೀಘ್ರವೇ ಬರಲಿದೆ ಡ್ರೋನ್ ಪಾಲಿಸಿ ಮೋದಿ ಮಹತ್ವದ ಸಭೆ; ಶೀಘ್ರವೇ ಬರಲಿದೆ ಡ್ರೋನ್ ಪಾಲಿಸಿ

ಪ್ರತಿಪಕ್ಷಗಳ ಹೇಳಿಕೆಗಳ ಕುರಿತು ಪ್ರತಿಕ್ರಿಸಿದ ರಾಜನಾಥ್ ಸಿಂಗ್, ಕೆಲವರು ಭೀತಿಯ ರಾಜಕಾರಣದಲ್ಲಿ ತೊಡಗಿದ್ದಾರೆ. ಆದರೆ, ಇಂತಹ ರಾಜಕಾರಣ ಮಾಡುವವರರು ಎಂದಿಗೂ ಯಶಸ್ವಿಯಾಗಲಾರರು ಎಂದರು.

India Capable To Counter Any Mischievous Move Of Pakistan:Rajnath Singh

ಸಬ್ ಕಾ ಸಾತ್, ಸಬ್ ಜಾ ವಿಶ್ವಾಸ್ ನಲ್ಲಿ ಬಿಜೆಪಿ ವಿಶ್ವಾಸವಿಟ್ಟಿದೆ. ಹಿಂದೂ ಅಥವಾ ಮುಸ್ಲಿಂ ಎಂಬ ರೀತಿಯಲ್ಲಿ ಬಿಜೆಪಿ ಎಂದೂ ನಡೆದುಕೊಂಡಿಲ್ಲ. ಉತ್ತರ ಪ್ರದೇಶದಲ್ಲಿ ಮುಂದಿನ ವಿಧಾನಸಭಾ ಚುನಾವಣೆಯಲ್ಲೂ ಬಿಜೆಪಿ ಜಯಭೇರಿ ಭಾರಿಸಲಿದೆ ಎಂಬುದಕ್ಕೆ ಇತ್ತೀಚಿನ ಪಂಚಾಯತ್ ಚುನಾವಣೆಗಳು ನಿದರ್ಶನವಾಗಿವೆ ಎಂದು ಅಂದು ರಾಜನಾಥ್ ಸಿಂಗ್ ಹೇಳಿದ್ದಾರೆ.

ಡ್ರೋನ್ ದಾಳಿಗಳ ಕುರಿತು ಭಾರತ ಅತ್ಯಾಧುನಿಕ ರೀತಿಯಲ್ಲಿ ಕಾರ್ಯಮಗ್ನವಾಗಿದ್ದು, ಗಡಿಯಲ್ಲಿ ಕಟ್ಟುನಿಟ್ಟಿನ ಎಚ್ಚರ ವಹಿಸಲಾಗಿದೆ ಎಂದರು. ಮೂರನೇ ಬಾರಿ ಸರ್ಜಿಕಲ್ ದಾಳಿ ಅಗತ್ಯವಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಸಚಿವರು, ಭಾರತೀಯ ಸೇನೆ ಸದಾ ಕಟ್ಟೆಚ್ಚರದಿಂದ ಇದ್ದು, ಗಡಿಗಳು ಸಂಪೂರ್ಣ ಸುರಕ್ಷಿತವಾಗಿವೆ ಎಂದು ಹೇಳಿದ್ದಾರೆ.

English summary
Defence Minister Rajnath Singh reacting to the recent drone attack at Jammu airforce station, said that India was capable of reacting Pakistan's mischievous moves and its technology.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X