• search
  • Live TV
ಲಕ್ನೋ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಮೋದಿ ವಿರುದ್ಧ ಸ್ಪರ್ಧೆ, ಭೀಮ್ ಆರ್ಮಿ ಮುಖ್ಯಸ್ಥ ಯೂ ಟರ್ನ್

|

ವಾರಣಾಸಿ, ಏಪ್ರಿಲ್ 17: ಉತ್ತರಪ್ರದೇಶದ ವಾರಣಾಸಿ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಲಿರುವ ಹಾಲಿ ಸಂಸದ, ಪ್ರಧಾನಿ ಮೋದಿ ವಿರುದ್ಧ ಸ್ಪರ್ಧಿಸುವುದಾಗಿ ಘೋಷಿಸಿದ್ದ ಭೀಮ್ ಆರ್ಮಿ ಮುಖ್ಯಸ್ಥ ಇಂದು ಯೂ ಟರ್ನ್ ಹೊಡೆದಿದ್ದಾರೆ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ದಲಿತ ನಾಯಕ ಭೀಮ್​ ಆರ್ಮಿ ಮುಖ್ಯಸ್ಥ ಚಂದ್ರಶೇಖರ್ ಆಜಾದ್​ ಅವರು ಬುಧವಾರದಂದು ಈ ಬಗ್ಗೆ ಸ್ಪಷ್ಟನೆ ನೀಡಿದ್ದು, ಮೋದಿ ವಿರುದ್ಧ ಸ್ಪರ್ಧಿಸುತ್ತಿಲ್ಲ ಆದರೆ, ಬಿಜೆಪಿ ವಿರುದ್ಧ ಸಮರ ಸಾರಿರುವ ಬಿಎಸ್ ಪಿ ಹಾಗೂ ಎಸ್ಪಿ ಮೈತ್ರಿಕೂಟದ ಅಭ್ಯರ್ಥಿಯನ್ನು ಬೆಂಬಲಿಸುವುದಾಗಿ ಹೇಳಿದ್ದಾರೆ.

ವ್ಯಕ್ತಿ ಚಿತ್ರ : ವಾರಣಾಸಿ ಸಂಸದ, ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ

ಆದರೆ, ಬಹುಜನ ಸಮಾಜ ಪಕ್ಷದ ಮುಖ್ಯಸ್ಥೆ ಮಾಯಾವತಿ ಅವರು ಚಂದ್ರಶೇಖರ್ ಆಜಾದ್​ಅವರು ಬಿಜೆಪಿ ಏಜೆಂಟ್, ದಲಿತ ಮತಗಳನ್ನು ಒಡೆಯಲು ಸ್ಪರ್ಧೆಗಿಳಿದಿದ್ದಾರೆ ಎಂದು ಆರೋಪಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

'ನಾನು ವಾರಾಣಸಿಯಲ್ಲಿ ಸ್ಪರ್ಧಿಸದಿರಲು ನಿರ್ಧರಿಸಿದ್ದೇನೆ. ನಾನು ಬಿಜೆಪಿಯನ್ನು ಮತ್ತು ಮೋದಿಯನ್ನು ಬಲಪಡಿಸಲು ಇಚ್ಛಿಸುವುದಿಲ್ಲ. ನಾನು ಮತ್ತು ಭೀಮ್​ ಆರ್ಮಿ ಸಮಾಜವಾದಿ ಪಕ್ಷ ಮತ್ತು ಬಹುಜನ ಸಮಾಜ ಪಕ್ಷದ ಮೈತ್ರಿಯನ್ನು ಬೆಂಬಲಿಸುತ್ತೇವೆ. ನಾವೆಲ್ಲರೂ ಬಿಜೆಪಿಯನ್ನು ಸೋಲಿಸಲು ಬಯಸುತ್ತಿದ್ದೇವೆ' ಎಂದರು.

ವಾರಣಾಸಿ ಕ್ಷೇತ್ರದಲ್ಲಿ ಮೋದಿ ವಿರುದ್ಧ ತೊಡೆತಟ್ಟುವವರು ಯಾರು?

ವಾರಣಾಸಿಯಲ್ಲಿ ಬಿಎಸ್ಪಿ -ಎಸ್ಪಿ ಮೈತ್ರಿಕೂಟದ ಅಭ್ಯರ್ಥಿಯಾಗಿ ಸತೀಶ್ ಚಂದ್ರ ಮಿಶ್ರಾ ಕಣದಲ್ಲಿದ್ದಾರೆ. ಮಯಾವತಿ ಅವರ ಪಕ್ಷದ ಪ್ರಧಾನ ಕಾರ್ಯದರ್ಶಿ, ಬಿಎಸ್ಪಿಯ ಬ್ರಾಹ್ಮಣ ಮುಖಂಡರಾಗಿದ್ದಾರೆ.

ಈ ಪ್ರಣಾಳಿಕೆಗಳಲ್ಲಿ ಯಾವುದು ನಿಮ್ಮ ಗಮನ ಸೆಳೆದಿದೆ?

ಮಾಯಾವತಿ ಅವರ ಹೇಳಿಕೆಗೆ ಉತ್ತರಿಸಿದ್ದ ಚಂದ್ರಶೇಖರ್ ಆಜಾದ್, ನಾನು ಬಿ. ಆರ್ ಅಂಬೇಡ್ಕರ್ ಅವರ ಏಜೆಂಟ್, ಅಖಿಲೇಶ್ ರನ್ನು ಪಟ್ಟಕ್ಕೇರಿಸಬಹುದಾದರೆ, ಕೆಳಗಿಳಿಸಲೂಬಹುದು ಎಂದಿದ್ದರು. ಸಹರನ್ ಪುರ್ ನಲ್ಲಿ ದಲಿತರು ಹಾಗೂ ಮೇಲ್ವರ್ಗದ ಜನರ ಜೊತೆ ನಡೆದ ಸಂಘರ್ಷದ ಸಂದರ್ಭದಲ್ಲಿ ಮೇ 2017ರ ಅವಧಿಯಲ್ಲಿ ಚಂದ್ರಶೇಖರ್ ಅವರು ಬೆಳಕಿಗೆ ಬಂದರು. ಗಲಭೆ ಸಂದರ್ಭದಲ್ಲಿ ಬಂಧಿತರಾಗಿದ್ದ ಚಂದ್ರಶೇಖರ್ 16 ತಿಂಗಳ ಸೆರೆಮನೆ ವಾಸ ಅನುಭವಿಸಿದ್ದರು. ನಂತರ ಅವರಿಗೆ ಅಲಹಾಬಾದ್ ಹೈಕೋರ್ಟಿನಿಂದ ಜಾಮೀನು ಸಿಕ್ಕಿತ್ತು.(ಪಿಟಿಐ)

ಲಖನೌ ರಣಕಣ
Po.no Candidate's Name Votes Party
1 Rajnath Singh 633026 BJP
2 Poonam Shatrughan Sinha 285724 SP

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Nearly a month after announcing that he would contest against Prime Minister Narendra Modi from Varanasi, Bhim Army chief Chandrashekhar Azad Wednesday rescinded his decision, saying his outfit will support the SP-BSP alliance and the Dalit vote should remain intact to defeat the BJP.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more