ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬುಲಂದ್ ಶಹರ್ ಸ್ವಚ್ಛ ಭಾರತ್ ಯೋಜನೆ ಶೌಚಾಲಯದ ಟೈಲ್ಸ್ ನಲ್ಲಿ ಗಾಂಧಿ, ಅಶೋಕ ಚಕ್ರ

|
Google Oneindia Kannada News

ಬುಲಂದ್ ಶಹರ್ (ಉತ್ತರಪ್ರದೇಶ), ಜೂನ್ 5: ಉತ್ತರಪ್ರದೇಶದ ಹಳ್ಳಿಯೊಂದರಲ್ಲಿ ಸ್ವಚ್ಛ ಭಾರತ್ ಯೋಜನೆ ಅಡಿ ನಿರ್ಮಿಸಿದ ಹಲವು ಶೌಚಾಲಯಗಳಲ್ಲಿ ಮಹಾತ್ಮ ಗಾಂಧಿ ಭಾವಚಿತ್ರ ಹಾಗೂ ರಾಷ್ಟ್ರೀಯ ಸಂಕೇತವನ್ನು ಟೈಲ್ಸ್ ಗಳ ಮೇಲೆ ಬಳಸಲಾಗಿದೆ. ಇದಕ್ಕೆ ಹಳ್ಳಿಗರು ವಿರೋಧ ವ್ಯಕ್ತಪಡಿಸಿದ್ದು, ವಿವಿಧ ಸಾಮಾಜಿಕ ಮಾಧ್ಯಮಗಳಲ್ಲಿ ವಿಡಿಯೋ ಸೋರಿಕೆಯಾಗಿದೆ.

ಹಳ್ಳಿಯ ಮುಖ್ಯಸ್ಥರ ಆದೇಶದ ಮೇಲೆ ಟೈಲ್ಸ್ ಕೂಡಿಸಲಾಗಿದೆ. ನಾವು ಅದನ್ನು ವಿರೋಧಿಸಿದರೆ, ಇದರಲ್ಲಿ ಮಧ್ಯಪ್ರವೇಶಿಸಬೇಡಿ. ಮೇಲಧಿಕಾರಿಗಳ ಆದೇಶ ಇದು ಎನ್ನಲಾಯಿತು ಹಳ್ಳಿಗರೊಬ್ಬರು ತಿಳಿಸಿದ್ದಾಗಿ ಎಎನ್ ಐ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಮಹಾತ್ಮ ಗಾಂಧಿ ಬಗ್ಗೆ ವಿವಾದಾತ್ಮಕ ಟ್ವೀಟ್; ವರಸೆ ಬದಲಿಸಿದ ಐಎಎಸ್ ಅಧಿಕಾರಿಮಹಾತ್ಮ ಗಾಂಧಿ ಬಗ್ಗೆ ವಿವಾದಾತ್ಮಕ ಟ್ವೀಟ್; ವರಸೆ ಬದಲಿಸಿದ ಐಎಎಸ್ ಅಧಿಕಾರಿ

ಜಿಲ್ಲಾ ಆಡಳಿತದಿಂದ ಈ ಬಗ್ಗೆ ಪರಿಶೀಲನೆ ಮಾಡಿದಾಗ, ಬುಲಂದ್ ಶಹರ್ ನ ಇಚ್ಛಾವಾರಿ ಹಳ್ಳಿಯಲ್ಲಿ ಹದಿಮೂರು ಹಳ್ಳಿಗಳಲ್ಲಿ ಶೌಚಾಲಯದ ಗೋಡೆಗಳಲ್ಲಿ ರಾಷ್ಟ್ರೀಯ ಸಂಕೇತವನ್ನು ಬಳಸಿರುವುದು ಕಂಡುಬಂದಿದೆ.

Gandhi Picture on Toilet tiles

ಹಳ್ಳಿಯಲ್ಲಿ ಸ್ವಚ್ಛ ಭಾರತ್ ಅಭಿಯಾನದ ಅಡಿಯಲ್ಲಿ ಐನೂರಾ ಎಂಟು ಶೌಚಾಲಯ ನಿರ್ಮಿಸಲಾಗಿದೆ. ಹದಿಮೂರು ಶೌಚಾಲಯದಲ್ಲಿ ಮಹಾತ್ಮ ಗಾಂಧಿ ಹಾಗೂ ಅಶೋಕ ಚಕ್ರ ಗುರುತಿದೆ. ಒಂದು ತಂಡ ರಚಿಸಿ, ಶೌಚಾಲಯಗಳನ್ನು ಪರಿಶೀಲಿಸಿ, ಆ ಟೈಲ್ಸ್ ಗಳನ್ನು ತೆಗೆದಿದ್ದೇವೆ ಎಂದು ಬುಲಂದ್ ಶಹರ್ ನ ಜಿಲ್ಲಾ ಅಧಿಕಾರಿ ತಿಳಿಸಿದ್ದಾರೆ.

Toilet tiles with Ashoka Chakra

ತನಿಖೆ ನಂತರ ಗ್ರಾಮಾಭಿವೃದ್ಧಿ ಅಧಿಕಾರಿ ಸಂತೋಷ್ ಕುಮಾರ್ ರನ್ನು ಅಮಾನತು ಮಾಡಲಾಗಿದೆ ಹಾಗೂ ಗ್ರಾಮ್ ಪ್ರಧಾನ್ ಸಾವಿತ್ರಿ ದೇವಿಗೆ ನೋಟಿಸ್ ನೀಡಲಾಗಿದೆ.

English summary
Tiles with images of Mahatma Gandhi & the national emblem found plastered on the walls of the toilets made under Swachh Bharat Mission in Uttar Pradesh, Bulandshahr's Ichhawari village.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X